Anushka Shetty:ಕಾಸರಗೋಡಿನಲ್ಲಿ ಅನುಷ್ಕಾ ಶೆಟ್ಟಿಯಿಂದ 128 ತೆಂಗಿನಕಾಯಿಯ ಮೂಡಪ್ಪ ಸೇವೆ; ಯಾಕೀ ಯಾಗ?

ಕರಾವಳಿ ಭಾಗದ ಕಲಾವಿದರು ಒಬ್ಬರ ಹಿಂದೊಬ್ಬರು ದೇವರ ಮೊರೆ ಹೋಗುತ್ತಿದ್ದಾರೆ. 'ಕಾಂತಾರ ಚಾಪ್ಟರ್ 1' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಅದೇ ಇನ್ನೊಂದು ಕಡೆ ಕುಡ್ಲ ಸುಂದರಿ ಅನುಷ್ಕಾ ಶೆಟ್ಟಿ ಕೇರಳದ ಕಾಸಗೋಡಿನಲ್ಲಿ ಅಷ್ಟ ದ್ರವ್ಯ ಮಹಾಗಣಪತಿ ಯಾಗವನ್ನು ಮಾಡಿಸಿ, ದೇವರ ಮೊರೆ ಹೋಗಿದ್ದಾರೆ.

ಬಹುಭಾಷಾ ನಟಿ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ 'ಬಾಹುಬಲಿ' ಬಳಿಕ ಸೈಲೆಂಟ್ ಆಗಿದ್ದರು. ಒಂದಿಷ್ಟು ದಿನ ಬಣ್ಣದ ಪ್ರಪಂಚದಿಂದ ದೂರವೇ ಉಳಿದಿದ್ದರು. ಈಗ ಅವರ ಇಮೇಜ್‌ಗೆ ತಕ್ಕಂತೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಆ ಸಿನಿಮಾ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದೆ. ಈ ಬೆನ್ನಲ್ಲೇ ಅನುಷ್ಕಾ ಶೆಟ್ಟಿ ದೇವರ ಮೊರೆ ಹೋಗಿದ್ದಾರೆ. ವಿಶೇಷ ಮಹಾಗಣಪತಿಯಾಗವನ್ನು ಮಾಡಿದ್ದಾರೆ.

Actress Anushka Shetty offered Ashta Dravya Maha Ganapathi pooja at Kasaragod

ಅನುಷ್ಕಾ ಶೆಟ್ಟಿ ಕೇರಳದ ಮಧೂರಿನಲ್ಲಿರುವ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮೂಡಪ್ಪ ಸೇವೆಯನ್ನು ಮಾಡಿಸಿದ್ದಾರೆ. ಇಲ್ಲಿವೆ ಮೂಡಪ್ಪ ಸೇವೆ ಅದ್ಧೂರಿಯಾಗಿ ನಡೆಯುತ್ತೆ. ಆದರೆ, ಅನುಷ್ಕಾ ಶೆಟ್ಟಿ ಕೆಲಸದ ಒತ್ತಡದ ನಿಮಿತ್ತ ಈ ದೇವರ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ತಮ್ಮ ಹೆಸರಿನಲ್ಲಿ ಮೂಡಪ್ಪ ಸೇವೆಯನ್ನು ಮಾಡಿಸಿದ್ದಾರೆ ಎಂದು ವರದಿಯಾಗಿದೆ.

ಕೇರಳದ ಕಾಸರಗೋಡಿನ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 14 ವರ್ಷಕ್ಕೊಮ್ಮೆ ಬಹ್ಮಕಲಶೋತ್ಸವ ನಡೆಯುತ್ತೆ. ಹಾಗೇ 33 ವರ್ಷಗಳ ಬಳಿಕ ಮೂಡಪ್ಪ ಸೇವೆಯನ್ನು ಮಾಡಲಾಗುತ್ತಿದೆ ಎನ್ನಲಾಗಿದ್ದು, ಇಡೀ ದೇವಸ್ಥಾನ ಹಾಗೂ ಊರನ್ನು ಅಲಂಕರಿಸಲಾಗಿದೆ. ಆ ಭಾಗದ ಜನರು ಅಷ್ಟೇ ಅಲ್ಲ. ಮಂಗಳೂರಿನ ಸುತ್ತಮುತ್ತಲಿನ ಜನರು ಕೂಡ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ದರ್ಶನವನ್ನು ಪಡೆಯುತ್ತಿದ್ದಾರೆ.

Actress Anushka Shetty offered Ashta Dravya Maha Ganapathi pooja at Kasaragod

ಇದೇ ವೇಳೆ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಮೂಡಪ್ಪ ಸೇವೆಯಲ್ಲಿ ಭಾಗಹಿಸಬೇಕಿತ್ತು. ಆದರೆ, ಅದು ಸಾಧ್ಯವಾಗ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಪೂಜೆಯನ್ನು ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ತಮ್ಮ ಹೆಸರಿನಲ್ಲಿ 128 ತೆಂಗಿನ ಕಾಯಿಯಿಂದ ಅಷ್ಟ ದ್ರವ್ಯ ಮಹಾಗಣಪತಿ ಯಾಗವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಮಹಾಗಣಪತಿಯ ಮೊರೆ ಹೋಗಿದ್ದಾರೆ. ಆದರೆ, ಈ ವಿಶೇಷ ಪೂಜೆಯ ಉದ್ದೇಶವೇನು? ಎನ್ನುವ ಮಾಹಿತಿ ಇನ್ನೂ ಸಿಕ್ಕಿಲ್ಲ.

ಇನ್ನು ಅನುಷ್ಕಾ ಶೆಟ್ಟಿ ವೃತ್ತಿ ಬದುಕಿನ ಕಡೆಗೆ ಬರುವುದಾದರೆ, ಈ ನಟಿ 'ಬಾಹುಬಲಿ' ಅಂತಹ ಮೆಗಾ ಹಿಟ್ ಸಿನಿಮಾಗಳನ್ನು ನೀಡಿದ ಮೇಲೆ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದರು. ಆ ಯಶಸ್ಸನ್ನು ಅನುಷ್ಕಾ ಶೆಟ್ಟಿ ಹಾಗೇ ಕ್ಯಾರಿ ಮಾಡಿರಲಿಲ್ಲ. ಬ್ರೇಕ್ ತೆಗೆದುಕೊಂಡು ಸಿನಿಮಾವನ್ನು ಮಾಡುತ್ತಿದ್ದಾರೆ. ಈ ವೇಳೆ ಅನುಷ್ಕಾ ಶೆಟ್ಟಿಯೇ ತನಗೆ ನಗುವಿನ ಕಾಯಿಲೆಯಿದೆ ಎಂದು ಹೇಳಿಕೊಂಡಿರುವುದಾಗಿ ಹಲವು ವರದಿಗಳು ಆಗಿದ್ದವು. ಈ ಕಾರಣಕ್ಕೆ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲವೇ ಎಂಬ ಅನುಮಾನವೂ ಮೂಡಿತ್ತು.

ಅನುಷ್ಕಾ ಶೆಟ್ಟಿ 'ಬಾಹುಬಲಿ' ಬಳಿಕ 'ಭಾಗಮತಿ' ಸಿನಿಮಾದಲ್ಲಿ ನಟಿಸಿದ್ದರು. ಅದು ತೆಲುಗು ಹಾಗೂ ತಮಿಳು ಎರಡು ಭಾಷೆಯ ಸಿನಿಮಾಗಳಲ್ಲಿ ರಿಲೀಸ್ ಆಗಿತ್ತು. ಅದು ಬಿಟ್ಟರೆ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಅತಿಥಿ ಪಾತ್ರ, 'ನಿಶ್ಯಬ್ಧ', 'ಮಿಸ್ಟರ್ ಅಂಡ್ ಮಿಸ್ಸಸ್ ಪೊಲಿಶೆಟ್ಟಿ' ಸಿನಿಮಾಗಳು ರಿಲೀಸ್ ಆಗಿವೆ. ಕಳೆದ ಎಂಟು ವರ್ಷಗಳಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು ಒಂದು ಅತಿಥಿ ಪಾತ್ರವೂ ಸೇರಿ ನಾಲ್ಕು ಸಿನಿಮಾ ಅಷ್ಟೇನೆ. ಆದ್ರೀಗ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಇಮೇಜ್‌ಗೆ ಸರಿಹೊಂದುವಂತಹ 'ಘಾಟಿ', ಮಲಯಾಳಂ ಸಿನಿಮಾ 'ಕಥನಾರ್'ನಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Anushka Shetty offered Ashta Dravya Maha Ganapathi pooja at Kasaragod;
Read more about: anushka shetty actress kasaragod
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X