ಸ್ಯಾಂಡಲ್‌ವುಡ್‌ನಲ್ಲಿ ಗುಂಗುರು ಕೂದಲ ಸಹಜ ಸುಂದರಿ: 'BAD' ಸಿನಿಮಾಗೆ ಅಪೂರ್ವ ಭಾರದ್ವಾಜ್ ಪ್ರೀತಿಯ ಪ್ರತಿನಿಧಿ
ಸ್ಯಾಂಡಲ್‌ವುಡ್‌ನಲ್ಲಿ ಎಕ್ಸ್‌ಪೆರಿಮೆಂಟ್ ಆಗುತ್ತಿರೋದಂತೂ ನಿಜ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಇನ್ನೊಂದು ಕಡೆ ಡಬ್ಬಿಂಗ್ ಸಿನಿಮಾಗಳು ಹೆಚ್ಚಾಗಿರೋದ್ರಿಂದ ಕನ್ನಡ ರಿಮೇಕ್ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಎಕ್ಸ್‌ಪೆರಿಮೆಂಟಲ್ ಸಿನಿಮಾ ಸೆಟ್ಟೇರಿದೆ ಅದುವೇ 'BAD'. ಹೀಗೆ ವಿಶಿಷ್ಟ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಪಿ ಸಿ ಶೇಖರ್ ಇತ್ತೀಚೆಗೆ 'BAD' ಅನ್ನೋ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈಗ ಒಂದೊಂದೇ ಪಾತ್ರವರ್ಗವನ್ನು ನಿರ್ದೇಶಕರು ರಿವೀಲ್ ಮಾಡುತ್ತಿದ್ದಾರೆ. ಈಗ ತಮ್ಮ ಸಿನಿಮಾದ ಮತ್ತೊಂದು ಪಾತ್ರವನ್ನು ಪರಿಚಯಿಸಿದ್ದಾರೆ.

ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿರೋ ಅಪೂರ್ವ ಭಾರದ್ವಾಜ್ 'BAD' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ನಾನು ಅದು ಮತ್ತು ಸರೋಜ' ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಪಿ ಸಿ ಶೇಖರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಪಿ ಸಿ ಶೇಖರ್ ಹೇಳಿರೋ ಹಾಗೆ 'BAD' ಸಿನಿಮಾದಲ್ಲಿ ಕಾಮ, ಕ್ರೋಧ ಸೇರಿದಂತೆ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರುಪಾತ್ರಗಳಿವೆ. ಆ ಪೈಕಿ ಕಾಮ ಎಂಬ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದೆ. ಈ 'ಕಾಮ'ವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ಬಿಂಬಿಸಲಾಗುತ್ತಿದೆ.

"ಅನು ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ. ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂಬುದೇ ಗೊತ್ತಿಲ್ಲ. ಅನು ಎಂಬ ಈ ಪಾತ್ರಕ್ಕೆ ಡೈಲಾಗ್ ಕಡಿಮೆ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಗುಂಗುರು ಕೂದಲ ಸಹಜ ಸುಂದರಿಯಂತೆ ಕಾಣುವ ಪಾತ್ರವಿದು. ಅಪೂರ್ವ ಈ ಹಿಂದೆ ನಟಿಸಿದ್ದ ಧಾರಾವಾಹಿ ಹಾಗೂ ಚಿತ್ರಗಳನ್ನು ನೋಡಿದ್ದರಿಂದ ಈ ಪಾತ್ರಕ್ಕೆ ಇವರೇ ಸರಿ ಹೊಂದುತ್ತಾರೆಂದು ಅಪೂರ್ವ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ್ದಾರೆ.
ವಿಶೇಷ ಅಂದ್ರೆ, 'ಕಾಮ'ವನ್ನು ಪ್ರತಿನಿಧಿಸುತ್ತಿರುವ ಅಪೂರ್ವ ಭಾರದ್ವಾಜ್ ಸಿನಿಮಾದಲ್ಲಿ ಕಾಣಿಸುವ ಕಡೆಯಲ್ಲೆಲ್ಲಾ ಗುಲಾಬಿ ಬಣ್ಣದ ಶೇಡ್‌ನಲ್ಲಿಯೇ ಚಿತ್ರಿಸಿರೋದು ವಿಶೇಷ. ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಅದ್ಭುತವಾಗಿ ನಟಿಸಿದ್ದಾರೆಂದು ನಿರ್ದೇಶಕ ಪಿ ಸಿ ಶೇಖರ್ ಹೇಳಿದ್ದಾರೆ.
'BAD' ಸಿನಿಮಾವನ್ನು ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಪಿ ಸಿ ಶೇಖರ್ ನಿರ್ದೇಶನವಿದ್ದರೆ, ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಜೊತೆಗೆ ಸಂಕಲನ ಕೂಡ ಮಾಡುತ್ತಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣ ಹಾಗೂ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ.
'ಪ್ರೀತಿಯ ರಾಯಭಾರಿ' ಸಿನಿಮಾದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ 'BAD' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ 'ಕ್ರೋಧ'ವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ನೀಡಲಿದೆ.
ನಕುಲ್ ಗೌಡ ಜೊತೆ ಈ ಸಿನಿಮಾದಲ್ಲಿ ಮಾನ್ವಿತಾ ಹರೀಶ್ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'BAD' ಸಿನಿಮಾದ ಮಾನ್ವಿತಾ ಲುಕ್ ಈಗಾಗಲೇ ರಿವೀಲ್ ಆಗಿದೆ. ಲಂಗ ಧಾವಣಿ ಗೆಟಪ್‌ನಲ್ಲಿ, ಕೈಯಲ್ಲಿ ಚಾಟರಿ ಬಿಲ್ಲು ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಈ ಫಸ್ಟ್ ಲುಕ್‌ಗೆ ನೋಡಿ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.


Click it and Unblock the Notifications











