Bhavana Ramanna: ಭಾವನಾ ರಾಮಣ್ಣ ಮಗಳ ನಾಮಕರಣ; ಅಜ್ಜಿ ರುಕ್ಮಿಣಿಯ ಹೆಸರಿಟ್ಟ ನಟಿ

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಭಾವನಾ ರಾಮಣ್ಣ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಮುಂದಾಗಿದ್ದ ಭಾವನಾ ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು. ಇವರು ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಭಯ ಬೀಳುತ್ತಿದ್ದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿಸಿದ್ದರು. ಇವರ ಗಟ್ಟಿ ನಿರ್ಧಾರದ ಬಗ್ಗೆ ಸ್ಯಾಂಡಲ್‌ವುಡ್ ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಕಳೆದ ಆಗಸ್ಟ್ ತಿಂಗಳಿಂದ ಭಾವನಾ ರಾಮಣ್ಣ ತಾಯ್ತನದ ಸಂಭ್ರಮದಲ್ಲಿ ಇದ್ದಾರೆ. ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಅಲ್ಲದೆ ಎಲ್ಲಿಯೂ ಭಾವನಾ ತಮ್ಮ ಮಗುವಿನ ಮುಖವನ್ನು ತೋರಿಸಿರಲಿಲ್ಲ. ಕಳೆದ ತಿಂಗಳು ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಈ ಸಮಾರಂಭದಲ್ಲಿ ಅವರ ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರು ಮಾತ್ರ ಭಾಗವಹಿಸಿದ್ದರು.

Actress Bhavana Ramanna Daughter Rukmini naming ceremony photos are trending now

ಭಾವನಾ ಐವಿಎಫ್ ಮೂಲಕ ಮಗು ಪಡುವುದಕ್ಕೆ ಮುಂದಾಗಿದ್ದಾಗ ಅವರ ಆತ್ಮೀಯರು ಖುಷಿ ಪಟ್ಟಿದ್ದರು. ಭಾವನಾ ಅವರೇ ಸಾಕಷ್ಟು ಸಂದರ್ಶನಗಳಲ್ಲಿ ತಮಗೆ ಅವಳಿ ಮಕ್ಕಳಾಗುತ್ತವೆ ಎಂದು ಹೇಳಿದ್ದರು. ಆದರೆ, ಡಿಲೇವರಿ ಸಮಯದಲ್ಲಿ ಸಮಸ್ಯೆಯಾಗಿದ್ದರಿಂದ ದುರಾದೃಷ್ಟವಶಾತ್ ಒಂದು ಮಗು ಅಗಲಿತ್ತು. ಹೆಣ್ಣು ಮಗು ಬದುಕಿಳಿದಿತ್ತು. ಆ ಮಗುವಿಗೆ ಈಗ ರುಕ್ಮಿಣಿ ಎಂದು ಹೆಸರು ಇಟ್ಟಿದ್ದಾರೆ.

ಭಾವನಾ ಕೆಲವು ಸಂದರ್ಶನಗಳಲ್ಲಿ ತಮಗೆ ಹುಟ್ಟುವ ಮಗುವಿಗೆ ತಮ್ಮ ಅಜ್ಜಿಯ ಹೆಸರನ್ನು ಇಡುವುದಾಗಿ ಹೇಳಿದ್ದರು. ಅದರಂತೆ ಕಳೆದ ತಿಂಗಳು ನಡೆದ ನಾಮಕರಣದಲ್ಲಿ ಭಾವನಾ ಹೆಣ್ಣು ಮಗುವಿಗೆ ಅಜ್ಜಿಯ ಹೆಸರನ್ನೇ ನಾಮಕರಣ ಮಾಡಿದ್ದಾರೆ. ಸದ್ಯ ನಾಮಕರಣದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೊಗಳಲ್ಲಿ ಭಾವನಾ ರಾಮಣ್ಣ ತಮ್ಮ ಮಗುವಿನ ಮುಖವನ್ನು ತೋರಿಸಿದ್ದಾರೆ.

ಮಗಳ ಮೊದಲ ಫೋಟೊ ಹಂಚಿಕೊಂಡ ಭಾವನಾ ರಾಮಣ್ಣ; ಏನು ಹೆಸರಿಡುವುದು ಎಂದು ಪ್ರಶ್ನೆ
ಮದುವೆ ಆಗದೆಯೇ ಐವಿಎಫ್ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಹೆಣ್ಣು ಮಕ್ಕಳು ಹಿಂದೇಟು ಹಾಕುತ್ತಾರೆ. ಹೀಗಾಗಿ ಭಾವನಾ ರಾಮಣ್ಣ ಅವರ ಈ ದಿಟ್ಟ ನಿರ್ಧಾರ ಹೆಣ್ಣು ಮಕ್ಕಳಿಗೆ ಹೊಸ ಭರವಸೆಯನ್ನು ಮೂಡಿಸಿತ್ತು. ಕೆಲವರು ಈ ಬಗ್ಗೆ ಟೀಕೆಗಳನ್ನು ಮಾಡಿದ್ದರು. ಆದರೂ, ಬಹುತೇಕ ಮಂದಿ ಭಾವನಾ ರಾಮಣ್ಣ ಅವರ ಈ ದಿಟ್ಟ ನಿರ್ಧಾರಕ್ಕೆ ಬೆಂಬಲವನ್ನು ನೀಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಐವಿಎಫ್ ಅಂದರೆ ಭಯ ಪಡುತ್ತಿದ್ದ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.

ಭಾವನಾ ರಾಮಣ್ಣ ತಮ್ಮ ಯೌವ್ವನದ ಸಮಯದಲ್ಲಿ ಕರಿಯರ್ ಕಡೆಗೆ ಗಮನ ವಹಿಸಿದ್ದರು. ಆದರೆ, ವಯಸ್ಸು 40 ದಾಟಿದ ಬಳಿಕ ತಾಯಿಯಾಗುವ ಕನಸು ಕಂಡಿದ್ದರು. ವೃತ್ತಿ ಜೀವನದ ಬಗ್ಗೆ ಮನಸ್ಸು ಮಾಡಿದ್ದರಿಂದ ಮದುವೆ, ಸಂಸಾರ ಮಕ್ಕಳ ಕಡೆಗೆ ಮನಸ್ಸು ಮಾಡಿರಲಿಲ್ಲ. ಆದ್ರೀಗ ವಯಸ್ಸು 40 ದಾಟಿದ ನಂತರ ತನ್ನದೊಂದು ಪುಟ್ಟ ಸಂಸಾರ ಬೇಕೆಂದು ಬಯಸಿದ್ದರು. ಅವರ ಆಸೆಯಂತೆಯೇ ಭಾವನಾ ಐವಿಎಫ್ ಮೂಲಕ ಮಗುವನ್ನು ಪಡೆದಿದ್ದಾರೆ. ಇದು ಭಾವನಾರಂತೆ ವಯಸ್ಸು 40 ದಾಟಿರುವ ಮಹಿಳೆಯರಿಗೆ ಸ್ಪೂರ್ತಿಯಾಗಿತ್ತು. ಹಾಗೇ ಮಕ್ಕಳಿಲ್ಲದೆ ನಿರಾಶಾರಾಗಿರುವ, ಐಪಿಎಫ್‌ಗೆ ಹಿಂದೇಟು ಹಾಕಿದ ದಂಪತಿಗಳಿಗೆ ಧೈರ್ಯ ತುಂಬಿದ್ದರು.

ಭಾವನಾ ರಾಮಣ್ಣ ಹಲವು ವರ್ಷಗಳ ಕಾಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಬಳಿಕ ಮುಂಬೈಗೆ ಶಿಫ್ಟ್ ಆಗಿದ್ದರು. ಹಿಂತಿರಿಗಿ ಬಂದ ಬಳಿಕ ರಾಜಕೀಯದ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಸದ್ಯಕ್ಕೀಗ ಸಿನಿಮಾ ಹಾಗೂ ರಾಜಕೀಯ ಎರಡರದಿಂದಲೂ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಂತೆ ಇದೆ. ಸದ್ಯ ತಮ್ಮ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Bhavana Ramanna Daughter Rukmini naming ceremony photos are trending now.
Read more about: daughter photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X