ಅವಳಿ ಮಕ್ಕಳಿಗೆ ಜನ್ಮ ನೀಡಿದ ಭಾವನಾ ರಾಮಣ್ಣ; ಹೆರಿಗೆ ಸಮಯದಲ್ಲಿ ಅಗಲಿದ ಒಂದು ಮಗು

ಸ್ಯಾಂಡಲ್‌ವುಡ್ ನಟಿ 'ಚಂದ್ರಮುಖಿ ಪ್ರಾಣಸಖಿ' ಖ್ಯಾತಿಯ ಭಾವನಾ ರಾಮಣ್ಣ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದರು. IVF ಮೂಲಕ ತಾಯಿಯಾಗುವ ಕನಸು ಕಂಡಿದ್ದ ಭಾವನಾ ಹೆಣ್ಣು ಮಕ್ಕಳಗಳಿಗೆ ಧೈರ್ಯವಾಗಿದ್ದರು. ವಯಸ್ಸು 40 ದಾಟಿದ ಮೇಲೆ ಮಕ್ಕಳು ಪಡೆದು ಕಷ್ಟವೆಂದು ವೈದ್ಯಕೀಯ ವಲಯ ಹೇಳುತ್ತೆ. ಜೊತೆಗೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯುವ ಕನಸು ಬಿತ್ತಿದ್ದರೂ, ಮಹಿಳೆಯರಲ್ಲಿ ಭಯವಿತ್ತು. ಆ ಭಯವನ್ನು ಹೋಗಲಾಡಿಸಿ, ಭಾವನಾ ಹೊಸ ಆಸೆ ಮೂಡಿಸಿದ್ದರು.

ಹೀಗಾಗಿ ಬಹಳಷ್ಟು ಮಂದಿ ಹೆಣ್ಣು ಮಕ್ಕಳ ಪ್ರತಿನಿಧಿಯಂತಾಗಿದ್ದರು. ಮದುವೆಯೇ ಆಗದೆ IVF ಮೂಲಕ ಗರ್ಭಿಣಿಯಾಗಿದ್ದ ಭಾವನಾ ರಾಮಣ್ಣ ತಮಗೆ ಅವಳಿ ಮಕ್ಕಳಾಗುತ್ತವೆ ಎಂದು ಹೇಳಿಕೊಂಡಿದ್ದರು. ಅದರಂತೆ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ಹೆರಿಗೆ ಸಮಯದಲ್ಲಿಯೇ ಒಂದು ಮಗು ಅಸುನೀಗಿದೆ. ಮತ್ತೊಂದು ಮಗು ಹಾಗೂ ಭಾವನಾ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.

Actress Bhavana Ramanna Welcomes Twin Babies via IVF but Sadly One Child Passes Away

ಭಾವನಾ ನಿರೀಕ್ಷೆ ಮಾಡಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಹರಿಗೆ ಆಗಬಹುದು ಎಂದು ವೈದ್ಯರು ನಿರೀಕ್ಷೆ ಮಾಡುತ್ತಿದ್ದಾರೆಂದು ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದಂತೆ ಅಂದ್ಕೊಂಡಿದ್ದಕ್ಕಿಂತ ಮುನ್ನವೇ ಹೆರಿಗೆ ಮಾಡಿಸುವುದಕ್ಕೆ ವೈದ್ಯರು ಮುಂದಾಗಿದ್ದರು. ಈ ವೇಳೆ ಅವಳಿ ಮಕ್ಕಳಲ್ಲಿ ಒಂದು ಮಗು ಬದುಕಿ ಉಳಿಯಲಿಲ್ಲ. ಇನ್ನೊಂದು ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ.

ಭಾವನಾ ರಾಮಣ್ಣ ತಮ್ಮ ವಯಸ್ಸು 40 ದಾಟಿದ ಬಳಿಕ ತಾಯಿಯಾಗುವ ಮನಸ್ಸು ಮಾಡಿದ್ದರು. ಸಿನಿಮಾಗಳಲ್ಲಿ ಬದುಕನ್ನು ಕಂಡುಕೊಂಡಿದ್ದರಿಂದ ಮದುವೆ ಕಡೆಗೆ ಮನಸ್ಸು ಮಾಡಿರಲಿಲ್ಲ. ಹೀಗಾಗಿ ವಯಸ್ಸು 40 ದಾಟಿದ ಬಳಿಕ ತಾಯಿಯಾಗಬೇಕು ಎಂದು ಬಯಸಿದ್ದರು. ಅವರ ಆಸೆಗೆ ಪೂರಕವಾಗಿ ಭಾವನಾ ಐವಿಎಫ್ ಮೊರೆ ಹೋಗಿದ್ದರು. ಎರಡು ವಾರಗಳ ಹಿಂದೆ ಭಾವನಾ ಅವರಿಗೆ ಹೆರಿಗೆ ಆಗಿದ್ದು, ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಒಂದು ಮಗು ಹೆರಿಗೆ ಸಮಯದಲ್ಲಿಯೇ ಸಾವನ್ನಪ್ಪಿತ್ತು.

ಸದ್ಯ ಭಾವನಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಫಸ್ಟ್ ನ್ಯೂಸ್ ವರದಿ ಮಾಡಿದಂತೆ ಭಾವನಾ ಅವರಿಗೆ ಗರ್ಭಿಣಿಯಾಗಿ ಏಳೂ ತಿಂಗಳು ತುಂಬುತ್ತಿದ್ದಂತೆ, ಒಂದು ಮಗುವಿನಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಇದನ್ನು ಗಮನಿಸಿದ ವೈದ್ಯರು ಎಂಟನೇ ತಿಂಗಳಿನಲ್ಲಿಯೇ ಹೆರಿಗೆ ಮಾಡಿಸುವುದಕ್ಕೆ ಮುಂದಾಗಿದ್ದರು. ಈ ವೇಳೆ ಒಂದು ಮಗು ಸಾವನ್ನಪ್ಪಿತ್ತು. ಈ ಘಟನೆ ಭಾವನಾ ಅವರಿಗೆ ನೋವು ತಂದಿದೆ ಎಂದು ವರದಿಯಾಗಿದೆ.

Actress Bhavana Ramanna Welcomes Twin Babies via IVF but Sadly One Child Passes Away

ಮದುವೆ ಆಗದೇ ತಾಯಿಯಾಗುವ ಬಗ್ಗೆ ಭಾವನಾ ತೆಗೆದುಕೊಂಡು ನಿರ್ಧಾರಕ್ಕೆ ಎಲ್ಲಾ ಕಡೆಯಿಂದಲೂ ವ್ಯಾಪಕವಾಗಿ ಪ್ರಶಂಶೆಗಳು ಬಂದಿದ್ದವು. ಹೆಣ್ಣು ಮಕ್ಕಳು ನಟಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇದು ಭಾವನಾರಂತೆ ವಯಸ್ಸು 40 ದಾಟಿರುವ ಮಹಿಳೆಯರಿಗೆ ಆಶಾಕಿರಣದಂತಿದೆ ಎಂದಿದ್ದರು. ಹಾಗೇ ಮಕ್ಕಳಾಗದೆ ನಿರಾಶಾರಾಗಿರುವ, ಹಾಗೂ ಐಪಿಎಫ್‌ಗೆ ಹೆದರಿದ್ದ ದಂಪತಿಗಳಿಗೆ ಇವರು ಪ್ರೇರಣೆಯಾಗಿದ್ದರು.

ಅದೇ ಇನ್ನೊಂದು ಭಾವನಾ ಅವರ ಈ ನಿರ್ಧಾರವನ್ನು ಕೆಲವು ಟೀಕಿಸಿದ್ದರು. ಮದುವೆಯಾಗದೇ ಮಗು ಪಡೆಯುವುದು ಸರಿ, ಆದರೆ, ಐವಿಎಫ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಯಾವುದೋ ವೈದ್ಯಕೀಯ ಸಂಸ್ಥೆ ಭಾವನಾ ಮೂಲಕ ಪ್ರಚಾರ ಮಾಡಿಕೊಳ್ಳುತ್ತಿದೆಯಾ? ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ, ಭಾವನಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಭಾವನಾ ತನ್ನ ತಾಯ್ತನ ಖುಷಿಯನ್ನು ಅನುಭವಿಸುತ್ತಿದ್ದಾರೆ.

ಭಾವನಾ ಸಿನಿಮಾರಂಗದಲ್ಲಿ ಯಶಸ್ಸು ಕಂಡಿದ್ದವರು. ಬಳಿಕ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡರದಿಂದಲೂ ತಾತ್ಕಾಲಿಕ ವಿಶ್ರಾಂತಿಯನ್ನು ಪಡೆದಿದ್ದು, ಮಗುವಿನ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಇದರೊಂದಿಗೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Kannada actress Bhavana Ramanna become mother through IVF and gave birth to twin babies. Sadly, one child passed away while the actress continues her emotional journey as a mother.
Read more about: bhavana actress twins
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X