ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲಾ ರೆಡಿ, 'A'ಪಾರ್ಟ್ ಮಾಡೋಕೆ ಚಾಂದಿನಿನೂ ರೆಡಿ: ಉಪೇಂದ್ರ ಮನಸ್ಸಲ್ಲಿ ಏನಿದೆ?

'ಎ', 'ಎಕೆ 47' ಅಂತಹ ಸಿನಿಮಾಗಳಲ್ಲಿ ನಟಿಸಿದ ಚಾಂದಿನಿ ಇದ್ದಕ್ಕಿದ್ದ ಹಾಗೆ ಸಿನಿಮಾದಿಂದ ದೂರ ಉಳಿದುಬಿಟ್ಟರು. ಮೊದಲ ಸಿನಿಮಾ 'ಎ' ರಿಲೀಸ್ ಆಗಿ 26 ವರ್ಷಗಳೇ ಆಗಿದ್ದರೂ, ಇನ್ನೂ ಚಾಂದಿನಿ ಜನಮಾನಸದಿಂದ ಕಣ್ಮರೆಯಾಗಿಲ್ಲ. ಈ ಸಿನಿಮಾ ಮತ್ತೆ ರಿಲೀಸ್ ಆದಾಗ, ಪ್ರತ್ಯಕ್ಷ ಆಗಿದ್ದಾರೆ. ಈ ಬಾರಿ ಕರ್ನಾಟಕದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಚಾಂದಿನಿ 'ಎ' ಸಿನಿಮಾ ಮಾಡುವುದಕ್ಕೆ ನ್ಯೂಯಾರ್ಕ್‌ನಿಂದ ಬಂದಿದ್ದರು. ದಕ್ಷಿಣ ಭಾರತದವರೇ ಆಗಿದ್ದರೂ, ಬೇರೆ ದೇಶದಲ್ಲಿ ಇವರ ಬದುಕಿ ಸಾಗಿ ಬಂದಿತ್ತು. ನಟನೆಗೆ ಇಳಿದ ಮೇಲೆ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಬಿಟ್ಟು ಪಿಎಚ್‌ಡಿ ಮಾಡಿದ್ದಾರೆ. ಸೋನಿ ಅಂತಹ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾಗಳನ್ನು ಡಿಸ್ಟ್ರಿಬ್ಯೂಟ್ ಮಾಡಿದ್ದಾರೆ.

Actress Chandini announced Will Upendra appear in the second installment of this film

'ಎ' ಸಿನಿಮಾ ಮರು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿರುವ ಚಾಂದಿನಿ, ಕನ್ನಡಿಗರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. 26 ವರ್ಷಗಳ ಬಳಿಕ ಮತ್ತೆ 'ಎ' ಪಾರ್ಟ್ 2 ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಅಸಲಿಗೆ ನಿಜಕ್ಕೂ 'ಎ' ಪಾರ್ಟ್ 2 ಆಗುತ್ತಾ? ಉಪೇಂದ್ರ ಡೈರೆಕ್ಟ್ ಮಾಡುತ್ತಾರಾ? ಇದೆಲ್ಲವನ್ನೂ ತಿಳಿದುಕೊಳ್ಳಲು ಮುಂದೆ ಓದಿ..

'ಎ' ಸಿನಿಮಾ ತನ್ನ ವೃತ್ತಿ ಬದುಕಿಗೆ ಎಷ್ಟು ಸ್ಪೆಷಲ್ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಹಾಗೇ ಉಪೇಂದ್ರ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. "ನಾವು ಉಪೇಂದ್ರ ಅವರಿಗೆ ಸಿನಿಮಾವನ್ನು ನಿರ್ದೇಶನ ಮಾಡುವಂತೆ ಕೇಳಿಕೊಳ್ಳುತ್ತೇನೆ. ಇದೇ ವೇಳೆ ಒಂದು ಚಿಕ್ಕ ಅನೌನ್ಸ್‌ಮೆಂಟ್ ಮಾಡುವುದಕ್ಕೆ ಇಷ್ಟಪಡುತ್ತೇನೆ. ಇದು ಎಲ್ಲರಿಗೂ ಸರ್ಪ್ರೈಸ್ ಆಗಿರುತ್ತೆ. ನನಗೆ ಎ ಸಿನಿಮಾದ ವಾಲ್ಯೂ ಏನು ಅನ್ನೋದು ಗೊತ್ತಿದೆ. ಎಲ್ಲಿ ಹೋದರೂ ಅಲ್ಲಿ ಎ ಬಗ್ಗೆ ಮಾತಾಡುತ್ತಾರೆ. ಬಾಂಬೆಯಲ್ಲೆಲ್ಲ ಈ ಸಿನಿಮಾದ ಸೀನ್ಸ್ ನೋಡುತ್ತಲೇ ಇರುತ್ತಾರೆ. " ಉಪೇಂದ್ರ ನಿರ್ದೇಶನದ ಸಿನಿಮಾ ಬಗ್ಗೆ ಮಾತಾಡಿದ್ದಾರೆ.

Actress Chandini announced Will Upendra appear in the second installment of this film

ಇದೇ ಸಂದರ್ಭದಲ್ಲಿ 'ಎ' ಪಾರ್ಟ್ 2 ಮಾಡುವುದಾಗಿ ನಟಿ ಚಾಂದಿನಿ ಅನೌನ್ಸ್ ಕೂಡ ಮಾಡಿದ್ದಾರೆ. "ನನ್ನ ಬಳಿಕ ಲೇಖಕರ ದೊಡ್ಡ ಟೀಮ್ ಇದೆ. ನಾವು ಈಗಾಗಲೇ ಎ ಪಾರ್ಟ್ 2 ಅನ್ನು ಪ್ಲಾನ್ ಮಾಡುತ್ತಿದ್ದೇವೆ. ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲದರ ಬಗ್ಗೆ ನಾನು ಖುದ್ದಾಗಿ ನೋಡುತ್ತಿದ್ದೇನೆ. ನಿರ್ಮಾಪಕ ಮಂಜು ಸರ್, ಗುರುಕಿರಣ್, ಅಸಿಸ್ಟೆಂಟ್ ಡೈರೆಕ್ಟರ್‌ಗಳೆಲ್ಲರೂ ಹೋಗಿ ಉಪೇಂದ್ರ ಅವರ ಪಾದಕ್ಕಿಟ್ಟು, ಸರ್ ನೀವೇ ಡೈರೆಕ್ಟ್ ಮಾಡಬೇಕು. ಇಲ್ಲ ಆಕ್ಟ್ ಮಾಡಬೇಕು ಅಂತ ಕೇಳಿಕೊಳ್ಳುತ್ತೇವೆ. ಅವರು ಅದನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ನೋಡೋಣ." ಎಂದಿದ್ದಾರೆ.

'ಎ' ಪಾರ್ಟ್ 2 ಸಿನಿಮಾದ ಕಥೆ ನಟಿ ಚಾಂದಿನಿಗೆ ಇಷ್ಟ ಆಗಿದೆಯಂತೆ. ಅಲ್ಲದೆ ಸ್ಟ್ರಿಪ್, ಸ್ಕ್ರೀನ್ ಪ್ಲೇ ಎಲ್ಲವೂ ಚೆನ್ನಾಗಿ ಎಂದು ಹೇಳಿಕೊಂಡಿದ್ದಾರೆ. "ಎ ಪಾರ್ಟ್ 2 ಸ್ಟೋರಿ ತುಂಬಾನೇ ಚೆನ್ನಾಗಿದೆ. ಸ್ಕ್ರೀನ್ ಪ್ಲೇ, ಸ್ಕ್ರಿಪ್ಟ್ ಫುಲ್ ಆಗಿ ರೆಡಿಯಿದೆ. ಪ್ಲಾನಿಂಗ್ ಸಂಪೂರ್ಣ ರೆಡಿಯಿದೆ. ಆದಷ್ಟು ಬೇಗ ಅನೌನ್ಸ್ ಮಾಡುತ್ತೇವೆ. ಸೇಮ್ ಟೀಮ್ ಈ ಸಿನಿಮಾ ಮಾಡುತ್ತಿದ್ದೇವೆ. ಉಪೇಂದ್ರ ಅವರಿಗೆ ಮಾಧ್ಯಮದವರು ನೀವೇ ಹೇಳಬೇಕು. ನೀವು ಹೇಳಿದರೆ, ಒಪ್ಪಿಕೊಳ್ಳುತ್ತಾರೆ." ಎಂದಿದ್ದಾರೆ.

ಸಿನಿಮಾ ಜೊತೆ ಫ್ಯೂಚರ್ ಪ್ಲ್ಯಾನ್ ಅನ್ನು ರಿವೀಲ್ ಮಾಡಿದ್ದಾರೆ. ಶೀಘ್ರದಲ್ಲೇ ಮದುವೆ ಆಗುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. "ನಾನು ಇನ್ನೂ ಮದುವೆ ಆಗಿಲ್ಲ. ಯಾಕಂದ್ರೆ, ಎ ಸಿನಿಮಾ ನನ್ನ ತಲೆಯೊಳಗೆ ಹೊಕ್ಕಿಬಿಟ್ಟಿತ್ತು. ಅದೊಂದು ದೊಡ್ಡ ಕಮಿಟ್ಮೆಂಟ್. ತುಂಬಾ ಬೇರೆ ಬೇರೆ ವಿಷಯಗಳಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ ಮದುವೆ ಆಗಲು ಸಾಧ್ಯವಾಗಿರಲಿಲ್ಲ. ಒಬ್ಬರನ್ನು ನಾನು ಇಷ್ಟ ಪಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಅವರನ್ನು ಪರಿಚಯಿಸುತ್ತೇನೆ." ಎಂದು ನಟಿ ಚಾಂದಿನಿ ಹೇಳಿಕೊಂಡಿದ್ದಾರೆ.

More from Filmibeat

English summary
Actress Chandini planning to do A part 2:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X