»   » ಸುಮ್ಕೆ ಆಕ್ಟಿಂಗ್ ಮಾಡ್ಕಂಡ್ ಇದ್ಬುಡು: ರಮ್ಯಾಗೆ ಓದುಗರ ಸಲಹೆ

ಸುಮ್ಕೆ ಆಕ್ಟಿಂಗ್ ಮಾಡ್ಕಂಡ್ ಇದ್ಬುಡು: ರಮ್ಯಾಗೆ ಓದುಗರ ಸಲಹೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಸಂದಿದೆ. ಈ ಅವಧಿಯಲ್ಲಿ ಮೋದಿಯವರ ಆಡಳಿತ ಹೇಗಿದೆ ಎಂದು ಕೇಳಲಾದ ಜನಾಭಿಪ್ರಾಯದಲ್ಲಿ ಒಟ್ಟಾರೆ ಶೇ. 60ರಷ್ಟು ಜನ ಚೆನ್ನಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

  ವಿರೋಧ ಪಕ್ಷದವರು, ಆಡಳಿತ ಪಕ್ಷದ ಕಾರ್ಯವೈಖರಿಯನ್ನು ಹೊಗಳುವ ಒಳ್ಳೆ ರಾಜಕೀಯ ಸಂಪ್ರದಾಯ ನಮ್ಮಲ್ಲಿಲ್ಲ. ಅದು ಮೋದಿ ಸರಕಾರವಾಗಲಿ, ಮನಮೋಹನ್ ಸಿಂಗ್ ಸರಕಾರವಿರಲಿ.

  ಇದರಂತೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ಅವರ ಇತ್ತೀಚಿನ ಚೀನಾ ಪ್ರವಾಸದ ಬಗ್ಗೆ ಲಕ್ಕಿ ಸ್ಟಾರ್ ಮತ್ತು ಮಂಡ್ಯ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ ಟ್ವೀಟ್ ಗಳ ಸರಮಾಲೆಯನ್ನೇ ಹರಿಯಬಿಟ್ಟಿದ್ದರು.

  ನಾವು ಸ್ವಾವಲಂಬಿಗಳು, ಮೇಕ್ ಇನ್ ಇಂಡಿಯಾ, ರೈತರ ಬಗ್ಗೆ ಮೋದಿ ಸರಕಾರಕ್ಕೆ ಕಾಳಜಿಯಿಲ್ಲವೆಂದು ರಮ್ಯಾ ಟ್ವೀಟ್ ಮಾಡಿದ್ದರು. (ಮೋದಿ ವಿರುದ್ದ ನಟಿ ರಮ್ಯಾ ಟ್ವೀಟ್ ಪ್ರಹಾರ)

  'ಫಿಲ್ಮೀಬೀಟ್' ನಲ್ಲಿ ಪ್ರಕಟವಾದ ಟ್ವೀಟ್ ಕುರಿತಾದ ಲೇಖನಕ್ಕೆ ನಮ್ಮ ಓದುಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿನ ಕೆಲವು ಪ್ರಮುಖ ಕಾಮೆಂಟುಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  SCK ಅವರ ಕಾಮೆಂಟ್ ಹೀಗಿದೆ..

  ಮೊದ್ಲು ನೀನು ಸರಿಯಾಗಿ ಇರು ಆಮೇಲೆ ದೇಶದ ಬಗ್ಗೆ ಯೋಚನೆ ಮಾಡು. ನಿನ್ನ ಸೊಕ್ಕು ಕಡಿಮೆ ಮಾಡ್ಕೋಳೋಕೆ ಏನಾದ್ರು ಯೋಗ ಕ್ಲಾಸ್ ಅಟೆಂಡ್ ಮಾಡು ಅರ್ಧಕ್ಕೆ ನಿಂತಿರೋ ನೀರ್ ದೋಸೆ ಮೂವಿ ಕಂಪ್ಲೀಟ್ ಮಾಡು, ಅದನ್ನು ಬಿಟ್ಟು ದೇಶದ ಬಗ್ಗೆ ಮಾತಾಡೋಕೆ ಬಂದಳು.

  ವೀರ್ ಎನ್ನುವ ನಮ್ಮ ಓದುಗರ ಕಾಮೆಂಟ್

  ರಮ್ಯ ಅವರೇ 60 ವರ್ಷ ಇಲ್ಲದ ದೂರದೃಷ್ಟಿ ವಿಚಾರ ಈಗ ಯಾಕೆ ಬಂತು ಜಪಾನ್ ಅಷ್ಟೊಂದು ಸುಧಾರಣೆ ಆಗಬೇಕಾದರೆ 60 ವರ್ಷದಲ್ಲಿ ಭಾರತ ಯಾಕೆ ಸುಧಾರಣೆ ಹೊಂದಿಲ್ಲಾ ಹೇಳಿ ಮೇಡಂ..

  ಪ್ರಕಾಶ್ ಮಂಜೇ ಗೌಡ

  ಅಮ್ಮ ತಾಯಿ ತಾವು ಸ್ವಲ್ಪ ತೆಪ್ಪಗಿರ್ತಿರಾ? ನಿಮ್ಮ ಅವಾಂತರಗಳನ್ನು ನಾವು ನೋಡಿದ್ದೇವೆ, ಪಕ್ಷದಲ್ಲಿ ಉನ್ನತ ಪದವಿಗೆ ಪ್ರಯತ್ನಿಸುತ್ತಿದ್ದೀರಾ ಅನ್ಸುತ್ತೆ. ಬೇರೆ ತರಾ ಪ್ರಯತ್ನ ಪಡುವುದು ಒಳ್ಳೆಯದು.

  ಗಣೇಶ್ ಸಾಗರ್ ಅವರ ಪ್ರತಿಕ್ರಿಯೆ

  i think she wake up now and without anyunderstanding of country and issues the farmers are facing , these people started fighting in Mandya , first think of Mandya farmers , it's easy to go on vacation write whatever you want , come to reality and start giving suggestion first you make your constituency people happy then think of India , we dont required any coward suggestion to improve india who is sitting in AC rooms and started tweeting.

  ಗುಂಡ ಅವರ ಕಾಮೆಂಟ್

  ಏನಮ್ಮೋ.. ನೀನು ಸಿನಿಮಾದಾಗೆ ಇದ್ದಿದ್ರೆ ರವಸ್ಟು ಮಾನ ಆದರೂ ಉಳೀತಿತ್ತು. ಈ ಮ್ಯಾಟರ್ ನಿನ್ನ ಲೆವೆಲ್ ಗೆ ಒಗ್ಗಿ ಬರೋಲ್ಲ. ಸುಮ್ಕೆ ಆಕ್ಟಿಂಗ್ ಮಾಡ್ಕೊಂಡು ಸುಮ್ಕೆ ಇದ್ ಬುಡು.

  ಮಹೇಶ್ ಅವರ ಕಾಮೆಂಟ್ ಹೀಗಿದೆ..

  ಅಮ್ಮ ತಾಯಿ ಯಾರಮ್ಮ ನೀನು ಇಷ್ಟು ದಿನ ಎಲ್ಲಿ ಇದ್ದೆ .. ಮೊದಲು ನೀನು ಯಾರು ಅಂತ ತೋರಿಸು ಆಮೇಲೆ ಮೋದಿ ಬಗ್ಗೆ ಮಾತಾಡು.. ಅನಿಸುತ್ತೆ ನೀನು ಮತ್ತು ರಾಹುಲ್ ಇಟಲಿಯಲ್ಲಿ ಟ್ರೈನಿಂಗ್ ಮುಗಿಸಿ ಬಂದಿರೋ ಹಾಗೆ ಇದೆ ..

  ಬಸು ಅವರ ಕಾಮೆಂಟ್

  ಮೊದಲು ನೀನು ಭಾರತದ ಉತ್ಪನ್ನಗಳನ್ನು ಬಳಸು, ನ೦ತರ ಮೋದಿಯವರಿಗೆ ಬುದ್ದಿಹೇಳು ಜ೦ಬದ ಕೋಳಿ.

  English summary
  Actress cum former Congress MP of Mandya Ramya tweet to Prime Minister Narendra Modi, readers reaction.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more