'ನಿನ್ನಿಂದಲೇ' ಖ್ಯಾತಿಯ ನಟಿ ಎರಿಕಾ ಕುರಿತು ಹರಿದಾಡಿದ್ದು ಸುಳ್ಳು ಸುದ್ದಿ!
ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ನಿನ್ನಿಂದಲೇ' ಮತ್ತು ಗಣೇಶ್ ಜತೆ 'ಬುಗುರಿ' ಚಿತ್ರಗಳಲ್ಲಿ ನಟಿಸಿದ್ದ ಎರಿಕಾ ಫರ್ನಾಂಡಿಸ್ ಈಗ ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಮೂರು ವರ್ಷಗಳಿಂದ ಬಾಯ್‌ಫ್ರೆಂಡ್ ಜತೆ ಸಂಬಂಧವಿದೆ. ಆತ ಈ ಉದ್ಯಮಕ್ಕೆ ಸಂಬಂಧಿಸಿದವನಲ್ಲ. ಹೀಗಾಗಿ ಯಾರಿಗೂ ಆತನ ಪರಿಚಯ ಇರಲಾರದು ಎಂದು ಹೇಳಿಕೊಂಡಿದ್ದರು.
Recommended Video
ಲಾಕ್ ಡೌನ್ ಕಾರಣದಿಂದ ಸಮಯ ಕಳೆಯುವುದು ಬೋರಾಗುತ್ತಿದೆ ಎಂದಿದ್ದ ಎರಿಕಾ, ಇತ್ತೀಚೆಗೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದರಿಂದ ಮತ್ತೆ ಹೊರಜಗತ್ತಿಗೆ ಕಾಲಿಟ್ಟಿದ್ದರು. ಆದರೆ ಅವರ ಜತೆ 'ಕಸೌತಿ ಜಿಂದಗಿ ಕೇ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ಪಾರ್ಥ್ ಸಂತಾನ್ ಅವರಿಗೆ ಕೊರೊನಾ ವೈರಸ್ ಸೋಂಕು ಪಾಸಿಟವ್ ಬಂದಿರುವುದು ಧಾರಾವಾಹಿ ತಂಡದಲ್ಲಿ ಆತಂಕ ಮೂಡಿಸಿದೆ. ಸಹ ಕಲಾವಿದರಾದ ಪೂಜಾ ಬ್ಯಾನರ್ಜಿ ಮತ್ತು ಶುಭಾವಿ ಚೋಕ್ಸಿ ಅವರ ವರದಿ ಬಂದಿದ್ದು, ಅದರಲ್ಲಿ ನೆಗೆಟಿವ್ ಬಂದಿದೆ. ಇದರಿಂದ ತುಸು ನಿರಾಳರಾಗಿದ್ದರೂ ಎರಿಕಾ ಅವರ ಪರೀಕ್ಷೆಯ ವರದಿ ಬಂದಿಲ್ಲ. ಮುಂದೆ ಓದಿ...

ಪಾರ್ಥ ಸಂತಾನ್‌ಗೆ ಕೊರೊನಾ ವೈರಸ್
ಕಸೌತಿ ಜಿಂದಗಿ ಕೇ ಧಾರಾವಾಹಿ ನಟ ಪಾರ್ಥ ಸಂತಾನ್ ಅವರಲ್ಲಿ ಜುಲೈ 12ರಂದು ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಎರಿಕಾ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂಬ ಗುಲ್ಲು ಹರಡಿದೆ. ಆದರೆ ಇದೆಲ್ಲವೂ ಸುಳ್ಳು, ತಮ್ಮ ವರದಿಯಿನ್ನೂ ಬಂದಿಲ್ಲ ಎಂದು ಎರಿಕಾ ತಿಳಿಸಿದ್ದಾರೆ.

ಸುಳ್ಳು ವದಂತಿ
'ನನ್ನ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶಗಳ ಬಗ್ಗೆ ಸುಳ್ಳು ವದಂತಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನನಗೆ ಇನ್ನೂ ವರದಿ ಕೈಸೇರಿಲ್ಲ. ಅದು ನೆಗೆಟಿವ್ ಬರಲಿದೆ ಎಂಬ ಆಶಯದೊಂದಿಗೆ ನಾವಿದ್ದೇವೆ. ಖಚಿತಪಡಿಸಿಕೊಳ್ಳುವ ಮುನ್ನ ಯಾವುದೇ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡುತ್ತೇನೆ. ನನಗೆ ವರದಿಯ ಫಲಿತಾಂಶ ಬಂದ ಬಳಿಕ ಅದನ್ನು ಖಂಡಿತವಾಗಿಯೂ ತಿಳಿಸುತ್ತೇನೆ' ಎಂದು ಎರಿಕಾ ಹೇಳಿದ್ದಾರೆ.

ವರದಿಯಲ್ಲಿ ನೆಗೆಟಿವ್
ಬುಧವಾರ ಬೆಳಿಗ್ಗೆ ಅವರ ಕೊರೊನಾ ವೈರಸ್ ಪರೀಕ್ಷೆಯ ವರದಿ ಅವರಿಗೆ ತಲುಪಿದೆ. ಅದನ್ನು ಕಂಡಿರುವ ಎರಿಕಾ ಫರ್ನಾಂಡಿಸ್ ನಿರಾಳರಾಗಿದ್ದಾರೆ. ಏಕೆಂದರೆ ವರದಿಯಲ್ಲಿ ನೆಗೆಟಿವ್ ಬಂದಿದೆ. ನನ್ನ ರಿಸಲ್ಟ್ ಈಗಷ್ಟೇ ಬಂದಿದ್ದು, ಅದರಲ್ಲಿ ನೆಗೆಟಿವ್ ಇದೆ. ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಗಳಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಧಾರಾವಾಹಿಗಳ ಚಿತ್ರೀಕರಣ ಬಂದ್
ಪಾರ್ಥ ಸಂತಾನ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಕಾರಣ ಎರಿಕಾ ಫರ್ನಾಂಡಿಸ್ ಹಾಗೂ ತಂಡ ಇತರೆ ಸದಸ್ಯರು ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು. ಶೂಟಿಂಗ್ ಮಾಡುತ್ತಿರುವ ಕ್ಲಿಕ್ ನಿಕ್ಸನ್ ಸ್ಟುಡಿಯೋವನ್ನು ಸೀಲ್ ಡೌನ್ ಮಾಡಲಾಗಿದೆ. ಜತೆಗೆ ಇಲ್ಲಿ ನಡೆಯುತ್ತಿದ್ದ ಬಾಲಾಜಿ ಟೆಲಿಫಿಲಂಸ್‌ನ ಪವಿತ್ರ ಭಾಗ್ಯ, ನಾಗಿನ್, ಕುಂಡಲಿ ಭಾಗ್ಯ ಮತ್ತು ಕುಂಕುಮ ಭಾಗ್ಯ ಧಾರಾವಾಹಿಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.


Click it and Unblock the Notifications











