Don't Miss!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪರೂಪದ ಫೋಟೊಗಳ ನೆನಪನ್ನು ಹಂಚಿಕೊಂಡ ಮಾಲಾಶ್ರೀ
ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿ ಕೊನೆಗೆ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಕನಸಿನ ರಾಣಿ ಎಂದೇ ಖ್ಯಾತರಾದ ಮಾಲಾಶ್ರೀ, ಅಭಿನಯಿಸಿದ ಚಿತ್ರವೆಂದರೆ ಗೆದ್ದೇ ಗೆಲ್ಲುತ್ತದೆ ಎಂಬ ಮಾತು ಪ್ರಚಲಿತದಲ್ಲಿತ್ತು. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿದವರೆಂದರೆ ಅದು ಮಾಲಾಶ್ರೀ. ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದ ಅವರು, ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಒಬ್ಬರು.
1979ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು ತಮಿಳು ಮತ್ತು ತೆಲುಗಿನಲ್ಲಿ ಸುಮಾರು 34 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಅದರಲ್ಲಿ 26 ಚಿತ್ರಗಳಲ್ಲಿ ಹುಡುಗನ ಪಾತ್ರಗಳಲ್ಲಿಯೇ ನಟಿಸಿದ್ದರು ಎನ್ನುವುದು ವಿಶೇಷ. ಶ್ರೀದುರ್ಗಾ ಎಂಬ ಹೆಸರಿನ ಅವರು 'ಮಾಲಾಶ್ರೀ'ಯಾಗಿ ಬದಲಾಗಿದ್ದು, 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವೇಳೆ. 1998ರ ಬಳಿಕ ಮಾಲಾಶ್ರೀ ಸಿನಿಮಾಗಳು ನಟಿಸುವುದು ಕಡಿಮೆಯಾದರೂ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ.

ಸೀಮಂತದ ಸಂಭ್ರಮದ ಮೆಲುಕು
ಎರಡು ಮಕ್ಕಳ ತಾಯಿಯಾಗಿರುವ ಮಾಲಾಶ್ರೀ, ತಮ್ಮ ಮೊದಲ ಮಗುವಿನ ಸೀಮಂತದ ಸಂದರ್ಭದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 2001ರಲ್ಲಿ ಮಾಲಾಶ್ರೀ ಅವರ ಮಗಳು ಅನನ್ಯಾ ಜನಿಸಿದ್ದರು. ಅದಕ್ಕೂ ಮುನ್ನ ನಡೆದಿದ್ದ ಸೀಮಂತ ಶಾಸ್ತ್ರದಲ್ಲಿ ಪತಿ ರಾಮು ಅವರ ಜತೆಗಿನ ಅಪರೂಪದ ಚಿತ್ರಗಳನ್ನು ಅವರು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಮಾಲಾಶ್ರೀ
ಅಭಿನಯದ
ಈ
ಚಿತ್ರ
ಕಂಡು
ಬೆಚ್ಚಿಬಿದ್ದಿತ್ತು
ತೆಲುಗು
ಚಿತ್ರರಂಗ

ರಾಮಾಚಾರಿಯ ನಂದಿನಿ ನೆನಪು
ಈ ಫೋಟೊಗಳನ್ನು ಕಂಡು ಅಭಿಮಾನಿಗಳು ಖುಷಿಯಿಂದ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. 'ರಾಮಾಚಾರಿ' ಚಿತ್ರದಲ್ಲಿ 'ನಂದಿನಿ' ಪಾತ್ರವೇ ನೆನಪಿಗೆ ಬರುವಂತಿದೆ ಎಂದು ಅನೇಕರು ಹೇಳಿದ್ದಾರೆ. ಅಮ್ಮನಾಗುವ ಆ ಮಧುರ ಕ್ಷಣಗಳು ವಿಶೇಷ ಪುಳಕ ನೀಡುತ್ತದೆ. ಅದು ಸ್ವರ್ಗ ಸುಖ ಎಂದು ಕೆಲವರು ಮಾಲಾಶ್ರೀ ನೆನಪುಗಳ ಜತೆ ತಮ್ಮ ನೆನಪುಗಳನ್ನು ಜೋಡಿಸಿದ್ದಾರೆ.

ಮಾಲಾಶ್ರೀ
ಆಗಸ್ಟ್ 10ರಂದು ಮಾಲಾಶ್ರೀ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಅವರ ಸಿನಿಮಾ ಉತ್ಸಾಹ ಮತ್ತು ಸಾಮರ್ಥ್ಯ ಕುಂದಿಲ್ಲ. ಹಾಗೆಯೇ ಅಭಿಮಾನಿಗಳ ಬೇಡಿಕೆಯೂ ಕಡಿಮೆಯಾಗಿಲ್ಲ. ಮುಂದಿನ ಸಿನಿಮಾ ಯಾವಾಗ ಎಂದು ಕೇಳುತ್ತಿರುತ್ತಾರೆ. ಇತ್ತೀಚೆಗೆ ಸ್ನೇಹಿತರ ದಿನಾಚರಣೆಯ ದಿನ ಮಾಲಾಶ್ರೀ, ಶುಭಕೋರುವಾಗ ಹಂಚಿಕೊಂಡಿದ್ದು ತಮ್ಮ ಅಭಿಮಾನಿಗಳ ಜತೆಗಿನ ಚಿತ್ರವನ್ನು.
ರಶ್ಮಿಕಾ
ಮಂದಣ್ಣ
ಬಗ್ಗೆ
ನಟಿ
ಮಾಲಾಶ್ರೀ
ಮೆಚ್ಚುಗೆ

ರಾಜ್ಯ ಪ್ರಶಸ್ತಿ
ಮಾಲಶ್ರೀ ಕಡೆಯದಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು 'ಉಪ್ಪು ಹುಳಿ ಖಾರ' ಚಿತ್ರದಲ್ಲಿ. 1989ರಿಂದ ನಾಯಕಿಯಾಗಿ ಕನ್ನಡ ಮತ್ತು ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಮಾಲಾಶ್ರೀ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದು 2015ರ 'ಗಂಗಾ' ಚಿತ್ರದ ಅಭಿನಯಕ್ಕಾಗಿ. ಅಂದರೆ ನಾಯಕಿಯಾಗಿ ಗುರುತಿಸಿಕೊಂಡ 26 ವರ್ಷಗಳ ಬಳಿಕ. 1995ರಲ್ಲಿ ಗಡಿಬಿಡಿ ಅಳಿಯ ಚಿತ್ರ ನಿರ್ದೇಶಿಸಿದ್ದ ಸಾಯಿ ಪ್ರಕಾಶ್ ಜತೆ, 19 ವರ್ಷಗಳ ನಂತರ ಮಾಲಾಶ್ರೀ ಸಿನಿಮಾ ಮಾಡಿದ್ದರು.
ವಿಶೇಷ
ವ್ಯಕ್ತಿಗಳಿಗೆ
ಸ್ಪೆಷಲ್
ಥ್ಯಾಂಕ್ಸ್
ಹೇಳಿದ
'ಕನಸಿನ
ರಾಣಿ',
ಯಾಕೆ?