Manvitha: ಲಂಗ ಧಾವಣಿ ತೊಟ್ಟು ಚಾಟರಿ ಬಿಲ್ಲು ಹಿಡಿದರೂ ಪಾತ್ರ ಮಾತ್ರ ಬೋಲ್ಡ್.. ಮಾನ್ವಿತಾ ಲುಕ್ ವೈರಲ್!
ಸ್ಯಾಂಡಲ್‌ವುಡ್‌ನಲ್ಲಿ 'ಟಗರು ಪುಟ್ಟಿ' ಎಂದೇ ಜನಪ್ರಿಯರಾಗಿರುವ ನಟಿ ಮಾನ್ವಿತಾ. ಶಿವಣ್ಣ ನಟಿಸಿದ 'ಟಗರು' ಸಿನಿಮಾದಲ್ಲಿ ಮಾನ್ವಿತಾ ಪಾತ್ರ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಈ ಸಿನಿಮಾದಲ್ಲೂ ಬೋಲ್ಡ್ ಲುಕ್‌ನಲ್ಲಿಯೇ ಕಾಣಿಸಿಕೊಂಡಿದ್ದರು.
ಆದರೆ, ಮಾನ್ವಿತಾ ಕಾಮತ್ ಕೆಲವು ದಿನಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾರಂಗದಿಂದ ದೂರವೇ ಇದ್ದರು. ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದುವೇ 'BAD'. ಕನ್ನಡದ ನಿರ್ದೇಶಕ ಪಿ ಸಿ ಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

'BAD' ಸಿನಿಮಾದಲ್ಲಿ ನಟಿ ಮಾನ್ವಿತಾ ಲುಕ್ ರಿವೀಲ್ ಆಗಿದೆ. ಚಾಟರಿ ಬಿಲ್ಲು ಹಿಡಿದು ಬಂದ ಮಾನ್ವಿತಾ ಲುಕ್ ಸಿನಿಪ್ರಿಯರಿಗೆ ಮೆಚ್ಚುಗೆ ಆಗಿದೆ. ಮತ್ತೆ ಕಮ್‌ಬ್ಯಾಕ್ ಮಾಡಿರೋ ಮಾನ್ವಿತಾ ಫಸ್ಟ್ ಲುಕ್‌ನಿಂದಲೇ ಗೆದ್ದು ಬೀಗಿದ್ದಾರೆ. ಹಾಗಿದ್ರೆ ಮಾನ್ವಿತಾ ಲುಕ್ ಹೇಗಿದೆ? ಸಿನಿಮಾದ ಹಿನ್ನೆಲೆಯೇನು? ತಿಳಿಯೋಕೆ ಮುಂದೆ ಓದಿ.
'ಟಗರು ಪುಟ್ಟಿ' 'BAD' ಲುಕ್ ಸಿಂಪ್ಲಿ ಸೂಪರ್
ಸ್ಯಾಂಡಲ್‌ವುಡ್‌ನಲ್ಲಿ ಪ್ರಾಮಿಸಿಂಗ್ ನಟಿಯರಲ್ಲಿ ಮಾನ್ವಿತಾ ಕೂಡ ಒಬ್ಬರು. ಕೆಲವೇ ಕೆಲವು ಕನ್ನಡದ ನಟಿಯರಲ್ಲಿ ಸಿನಿಪ್ರಿಯರ ಮನಗೆದ್ದಿದ್ದಾರೆ. ಅದು ಬೋಲ್ಡ್ ಪಾತ್ರವೇ ಇರಲಿ. ಇಲ್ಲಾ ಹಳ್ಳಿ ಹುಡುಗಿಯ ಪಾತ್ರವೇ ಇರಲಿ. ನಟಿಸಿ ಸೈ ಎನಿಸಿಕೊಂಡಿರುವ ಮಾನ್ವಿತಾ ಮತ್ತೊಂದು ಬೋಲ್ಡ್ ಪಾತ್ರಕ್ಕೆ ಅಸ್ತು ಎಂದಿದ್ದಾರೆ.
'BAD' ಸಿನಿಮಾದ ಮಾನ್ವಿತಾ ಲುಕ್ ರಿವೀಲ್ ಆಗಿದೆ. ಲಂಗ ಧಾವಣಿ ಗೆಟಪ್‌ನಲ್ಲಿ, ಕೈಯಲ್ಲಿ ಚಾಟರಿ ಬಿಲ್ಲು ಹಿಡಿದು ಕೊಟ್ಟಿರೋ ಲುಕ್ ಸಿನಿಮಾ ಪ್ರೇಮಿಗಳಿಗಂತೂ ಹಿಡಿಸಿದೆ. ಫೋಟೊಗಳನ್ನು ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಮಾನ್ವಿತಾಗೂ ಈ ಲುಕ್ ಕಿಕ್ ಕೊಟ್ಟಿದೆ. ಪಾತ್ರದ ಬಗ್ಗೆ ಖುಷಿಯಾಗಿದ್ದು, ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಪಾತ್ರದ ಬಗ್ಗೆ ಏನಂತಾರೆ ಮಾನ್ವಿತಾ?
'ಪ್ರೀತಿಯ ರಾಯಬಾರಿ' ಸಿನಿಮಾದ ನಕುಲ್ ಗೌಡ 'BAD' ಸಿನಿಮಾದ ಹೀರೊ. ಯುವ ನಟಿಗೆ ಮಾನ್ವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್, ಕಾಮಿಡಿ, ಸಸ್ಪೆನ್ಸ್ ಹೀಗೆ ವಿಭಿನ್ನ ಜಾನರ್‌ಗಳಿಗೆ ಕೈ ಹಾಕುವ ನಿರ್ದೇಶಕ ಪಿ ಸಿ ಶೇಖರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಪಾತ್ರದ ಫಸ್ಟ್ ಲುಕ್ ನೋಡಿ ಮಾನ್ವಿತಾ ದಿಲ್ ಖುಷ್ ಆಗಿದ್ದಾರೆ.
"ನನಗೆ 'BAD' ಸಿನಿಮಾದ ಪಾತ್ರ ತುಂಬಾನೇ ಇಷ್ಟವಾಯಿತು. ಈ ಸಿನಿಮಾದಲ್ಲಿ ನನ್ನ ಹೆಸರು ಪವಿತ್ರ. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ನಟಿ ಮಾನ್ವಿತಾ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಮಾನ್ವಿತಾರದ್ದು ಹಳ್ಳಿ ಹುಡುಗಿ ಪಾತ್ರ
ಮಾನ್ವಿತಾ ಕಾಮತ್ ಪಾತ್ರದ ಬಗ್ಗೆ ನಿರ್ದೇಶಕರಿಗೆ ಹೀಗೆ ಬರಬೇಕು ಅಂತಿದೆ. ಅದಕ್ಕೆ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. "ಈ ಸಿನಿಮಾದಲ್ಲಿ ಮಾನ್ವಿತಾ ಪಾತ್ರದ ಹೆಸರು ಪವಿತ್ರಾ(ಪವಿ). ಇವರದ್ದು ತುಂಬಾನೇ ಬೋಲ್ಡ್ ಕ್ಯಾರೆಕ್ಟರ್. ವಿಲೇಜ್ ಬ್ಯಾಕ್ ಡ್ರಾಪ್‌ನಲ್ಲಿ ಮಾನ್ವಿತಾ ಸ್ಟೋರಿ ಸಾಗುತ್ತಾ ಹೋಗುತ್ತೆ. ಈ ಹಿಂದೆ ಹೇಳಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ಈ ಸಿನಿಮಾದಲ್ಲಿವೆ. ಈ ಆರು ಪಾತ್ರಗಳ ಜೊತೆ ಇನ್ನೊಂದು ಪಾತ್ರವಿದ್ದು, ಅದು ಮಾನ್ವಿತಾರದ್ದು" ಎನ್ನುತ್ತಾರೆ ಪಿ ಸಿ ಶೇಖರ್.
'BAD' ಸಿನಿಮಾವನ್ನು ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ನಕುಲ್ ಗೌಡ, ಮಾನ್ವಿತಾ, ಜೊತೆ ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ನಟಿಸಿದ್ದಾರೆ.


Click it and Unblock the Notifications











