2ನೇ ಮದುವೆ ಬಗ್ಗೆ ಮೇಘನಾ ರಾಜ್ ಪ್ರತಿಕ್ರಿಯೆ: ಹೇಳಿದ್ದೇನು?

ನಟಿ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಲವ್ ಸ್ಟೋರಿ ಸಿಂಪಲ್ ಅಲ್ಲ. ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಕುಟುಂಬವೂ ಸಿನಿಮಾರಂಗದಲ್ಲೇ ಇದ್ದಿದ್ದರಿಂದ ತಮ್ಮ ಪ್ರೀತಿಯನ್ನು ಒಪ್ಪಿಸುವುದು ಹೆಚ್ಚು ಕಷ್ಟವೇನು ಆಗಿರಲಿಲ್ಲ.

ಮೇಘನಾ ಹಾಗೂ ಚಿರು ಇಬ್ಬರೂ ಪ್ರೀತಿ ಮಾಡುತ್ತಿದ್ದರೂ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದಿಕೊಂಡಿದ್ದರು. ಅಲ್ಲದೆ ಇಬ್ಬರೂ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಇಬ್ಬರೂ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕ್ರೈಸ್ತ ಹಾಗೂ ಹಿಂದೂ ಎರಡೂ ಸಂಪ್ರದಾಯದಂತೆ ವಿವಾಹವಾಗಿದ್ದರು.

ಆದರೆ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡೇ ವರ್ಷ ಕಳೆಯುವುದರೊಳಗೆ ಮೇಘನಾ ಬದುಕಿನಲ್ಲಿ ದುರಂತ ನಡೆದು ಹೋಯಿತು. ಜೂನ್ 7, 2020ಯಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಆ ವೇಳೆ ಗರ್ಭಿಣಿಯಾಗಿದ್ದ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಮೇಘನಾ ರಾಜ್ ಮಗ ರಾಯನ್ ಜೊತೆ ಖುಷಿ ಖುಷಿಯಾಗಿದ್ದಾರೆ. ಇದೇ ವೇಳೆ ಎರಡನೇ ಮದುವೆ ಆಗುತ್ತಾರಾ? ಎಂಬ ಪ್ರಶ್ನೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

2ನೇ ಮದುವೆ ಬಗ್ಗೆ ಮೇಘನಾ ಹೇಳುವುದೇನು?

2ನೇ ಮದುವೆ ಬಗ್ಗೆ ಮೇಘನಾ ಹೇಳುವುದೇನು?

ಮೇಘನಾ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿದೆ. ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್‌ ಸೈಟ್‌ಗೆ ಮೇಘನಾ ಎರಡನೇ ಮದುವೆ ರಿಯಾಕ್ಷನ್ ಕೊಟ್ಟಿದ್ದು, "ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್‌ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ." ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

'ನಾನಿನ್ನೂ ಆ ಬಗ್ಗೆ ಯೋಚಿಸಿಲ್ಲ'

'ನಾನಿನ್ನೂ ಆ ಬಗ್ಗೆ ಯೋಚಿಸಿಲ್ಲ'

ಮೇಘನಾ 2ನೇ ಮದುವೆ ಬಗ್ಗೆ ನೀಡಿದ ಸಂದರ್ಶದ ಬಗ್ಗೆ ಈಗಾಗಲೇ ಸುದ್ದಿ ಬಿತ್ತರವಾಗಿದೆ. ಬಾಲಿವುಡ್ ಶಾದೀಶ್.ಕಾಮ್‌ನಲ್ಲಿಯೂ ಈ ಸುದ್ದಿಯಲ್ಲಿ ಪ್ರಕಟಿಸಿದೆ. ಇದರಲ್ಲಿ ಮೇಘನಾ ಎರಡನೇ ಮದುವೆ ಬಗ್ಗೆ ಇನ್ನೂ ಯೋಚಿಲ್ಲ ಎಂದು ಹೇಳಿದ್ದಾರೆ. " ನಾಳೆ ಹೇಗಿರುತ್ತೆ ಎಂದು ನಾನು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನೂ ಯೋಚಿಸಿಲ್ಲ." ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗಿದೆ.

Recommended Video

ಸೋಮಣ್ಣ ಮಾತಿಂದ ಬ್ರೇಕ್ ಆಯ್ತ ಸಾನಿಯಾ ರೂಪೇಶ್ ಫ್ರೆಂಡ್ ಶಿಪ್!? | Somanna | Saniya | Roopesh *Bigg Boss
ಮೇಘನಾ ಹೇಳಿಕೆ ವೈರಲ್

ಮೇಘನಾ ಹೇಳಿಕೆ ವೈರಲ್

ಮೇಘನಾ ರಾಜ್ ಬಾಲಿವುಡ್ ಮಾಧ್ಯಮಗಳಿಗೆ ನೀಡಿದ್ದಾರೆ ಎನ್ನಲಾದ ಹೇಳಿಕೆ ವೈರಲ್ ಆಗುತ್ತಿದೆ. ಆದರೆ, 2ನೇ ಮದುವೆ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಮೇಘನಾ ಎಂದಿಗೂ ಕನ್ನಡ ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಸದ್ಯ ಮೇಘನಾ ಎರಡನೇ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೈರಲ್ ಆಗುತ್ತಿದೆ.

More from Filmibeat

English summary
Actress Meghana Raj Reaction On Marrying For The Second Time, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X