For Quick Alerts
  ALLOW NOTIFICATIONS  
  For Daily Alerts

  'ಬೃಂದಾವನ' ಮಿಲನ 1 ತಿಂಗಳು ಮನೆಯಲ್ಲೇ ಫಿಕ್ಸ್

  By ಜೀವನರಸಿಕ
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಬೃಂದಾವನ' ಚಿತ್ರದಲ್ಲಿ ಅಭಿನಯಿಸಿರುವ ಹುಡುಗಿ ಮಿಲನಾ ನಾಗರಾಜ್ ಎಲ್ಲಿ ಹೋದರು. ಬೃಂದಾವನ ಬಳಿಕ ಒಂದೆರೆಡು ತಿಂಗಳು ಯಾವ ಸಿನಿಮಾನೂ ಒಪ್ಪಿಕೊಂಡಿಲ್ಲ. ಆಫರ್ ಗಳು ಹತ್ತಾರು ಸಿಕ್ಕಿವೆಯಂತೆ. ಆದರೆ ಮನೆಯವರು ಮಾತ್ರ ನೀನು ಒಂದು ತಿಂಗಳು ಯಾವುದನ್ನೂ ಒಪ್ಕೋಬೇಡ ಸುಮ್ನೆ ಮನೆಯಲ್ಲಿರು ಅಂದಿದ್ರಂತೆ.

  ಮನೆಯವ್ರು ಒಂದು ತಿಂಗಳು ಅಂದ್ರೆ ನಾನು ಎರಡು ತಿಂಗಳು ಇರ್ತೀನಿ ಅಂತ ಮಿಲನಾ ಆರಾಮಾಗಿ ಕಾಲ ಕಳೆದರು. ಈಗ ಮಿಲನ 'ಚಾರ್ಲಿ' ಸಿನಿಮಾದಲ್ಲಿ 'ಮದರಂಗಿ' ಕೃಷ್ಣನಿಗೆ ಜೋಡಿಯಾಗ್ತಿದ್ದಾರೆ. ಮಿಲನಾ ಈಗ ಸ್ವಲ್ಪ ದಪ್ಪ ಆಗಿದ್ದಾರೆ. ಅಂದಹಾಗೆ ಮಿಲನಾ ಮನೆಯಲ್ಲಿ ಆರಾಮವಾಗಿ ಇದ್ದಿದ್ದು ಸ್ವಲ್ಪ ದಪ್ಪ ಆಗೋಕೆ.

  ಹಾಸನ ಮೂಲದ ಮಿಲನಾ ನಾಗರಾಜ್ ಓದಿದ್ದು ಬಿ.ಇ ಕಂಪ್ಯೂಟರ್ ಸೈನ್ಸ್. ಮಿಸ್ ಕರ್ನಾಟಕ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಈಗಾಗಲೆ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಿಲನಾ ಅಭಿನಯದ 'ಸವಾರಿ ಟು 1000 ಎಡಿ' ಹಾಗೂ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರಗಳು ಬಿಡುಗಡೆಯಾಗಬೇಕಿದೆ. ನಟನೆಯ ಜೊತೆಗೆ ಈಕೆಯ ಒಳ್ಳೆಯ ಈಜು ಪಟು ಸಹ. ಪಕ್ಕಾ ಫಿಗರ್ ಮೇಂಟೈನ್ ಮಾಡಿರೋ ಮಿಲನಾ ಫಿಟ್ನೆಸ್ ಸೀಕ್ರೇಟ್ ಸ್ಲೈಡ್ ನಲ್ಲಿ ನೋಡ್ತಾ ಹೋಗಿ...

  ಪ್ರತಿನಿತ್ಯ ಎರಡು ಗಂಟೆ ಯೋಗ

  ಪ್ರತಿನಿತ್ಯ ಎರಡು ಗಂಟೆ ಯೋಗ

  ಮಿಲನಾಗೆ ಯೋಗ ಅಂದ್ರೆ ಅಚ್ಚುಮೆಚ್ಚು. ಪ್ರತಿನಿತ್ಯ 2 ಗಂಟೆ ಯೋಗ ಮಾಡ್ತಾರೆ.

  ಪ್ರಾಣಾಯಾಮಕ್ಕೇ ಸಾಕಷ್ಟು ಸಮಯ

  ಪ್ರಾಣಾಯಾಮಕ್ಕೇ ಸಾಕಷ್ಟು ಸಮಯ

  ಜಿಮ್ ಗಿಂತ ಯೋಗಾನೇ ಬೆಸ್ಟ್ ಅನ್ನೋ ಮಿಲನಾ ಪ್ರಾಣಾಯಾಮ ಕೂಡ ಮಾಡ್ತಾರೆ. ಇದಕ್ಕೆಂದೇ ಸಾಕಷ್ಟು ಸಮಯವನ್ನೂ ವ್ಯಯಿಸುತ್ತಾರೆ.

  ಈಜುವುದೆಂದರೆ ಮಿಲನಾಗೆ ಬಲು ಇಷ್ಟ

  ಈಜುವುದೆಂದರೆ ಮಿಲನಾಗೆ ಬಲು ಇಷ್ಟ

  ಈ ಬ್ಯೂಟಿ ಮೂಲತಃ ಸ್ವಿಮ್ಮರ್, ಸ್ವಿಮ್ಮಿಂಗ್ ಎಂಜಾಯ್ ಮಾಡೋ ಮಿಲನಾಗೆ ಈಜೋದು ಇಷ್ಟದ ಹವ್ಯಾಸ.

  ಟೈಮ್ ಸಿಕ್ಕಿದರೆ ನಿದ್ರೆಗೆ ಶರಣು

  ಟೈಮ್ ಸಿಕ್ಕಿದರೆ ನಿದ್ರೆಗೆ ಶರಣು

  ಟೈಮ್ ಸಿಕ್ಕಿದರೆ ಪ್ರಪಂಚಾನೇ ಮರ್ತು ಚೆನ್ನಾಗಿ ನಿದ್ದೆ ಹೊಡೀತಾರಂತೆ. ಅದೂ ಆರೋಗ್ಯಕ್ಕೆ ಒಳ್ಳೇದು ಅಂತಾರೆ.

  ಜಿಮ್ ಗಿಂತಲೂ ಯೋಗ ಬೆಟರ್

  ಜಿಮ್ ಗಿಂತಲೂ ಯೋಗ ಬೆಟರ್

  ಯೋಗ ಸ್ವಿಮ್ಮಿಂಗ್ ಮಾಡಿದ್ರೆ ಸಾಕು ಯಾವ ಜಿಮ್ಮೂ ಬೇಡ ಅಂತಾರೆ ಈ ಹಾಸನದ ಬೆಡಗಿ.

  ಮಿಲನಾ ತರಹ ಯೋಗ ಮಾಡಿ

  ಮಿಲನಾ ತರಹ ಯೋಗ ಮಾಡಿ

  ನೋಡಿ ನೀವೂ ಟ್ರೈ ಮಾಡಿ ಜಿಮ್ ಗೆ ಹೋಗಿ ಮೈಕೈ ನೋಯಿಸ್ಕೊಳ್ಳೋದಕ್ಕಿಂತ ಮಿಲನಾ ತರಹ ಯೋಗ ಮಾಡಿ.

  English summary
  Kannada actress Milana Nagaraj reveals her fitness secret. She practices Yoga daily for spending 2 hours. After 'Brindavana' with Challenging Star Darshan she is not accepting any movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X