ನಿರ್ಮಾಪಕನಿಂದ ಚಿತ್ರಹಿಂಸೆ: ಆತ್ಮಹತ್ಯೆ ಯತ್ನಿಸಿದ್ದ ನಟಿ.. ಕರಾಳ ಸತ್ಯ ಬಿಚ್ಚಿಟ್ಟ ಮೋನಿಕಾ!

'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಅನ್ನೋ ಗಾಧೆ ಮಾತಿದೆ. ಬಣ್ಣದ ಲೋಕನೂ ಹಾಗೆನೇ.. ದೂರದಿಂದ ನೋಡುವುದಕ್ಕೆ ಚಂದ. ಒಳಗೆ ನೂರೆಂಟು ಹುಳುಕುಗಳು ಇವೆ. ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬಂದ ಹಲವು ಮಂದಿಗೆ ಇಲ್ಲಿ ಕಹಿ ಅನುಭವಗಳು ಆಗಿವೆ.

ಚಿತ್ರರಂಗದಲ್ಲಿ ಕಲಾವಿದರಿಗೆ ಕೋಟಿ ಕೋಟಿ ಹಣ ಸಿಗುತ್ತೆ. ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ ಅನ್ನೋ ಕಲ್ಪನೆ. ಇದು ನಿಜ ಕೂಡ. ಆದರೆ, ಎಲ್ಲರ ಬದುಕು ಹೀಗೆ ಇಲ್ಲ. ಅದರಲ್ಲೂ ಕೆಲ ನಟಿಯರು ತಮಗಾದ ಕಹಿ ಅನುಭವವನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಮತ್ತೊಬ್ಬ ನಟಿ ಮೋನಿಕಾ ಭಡೋರಿಯಾ ಕೂಡ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

Actress Monika Bhadoriya wants to commit suicide due to Asit Kumar Modis torture

ಮೋನಿಕಾ ಭಡೋರಿಯಾಗೆ ಕೆಲವೇ ವರ್ಷಗಳ ಹಿಂದಷ್ಟೇ ನಿರ್ಮಾಪಕರೊಬ್ಬರು ಸೆಟ್ಟಿನಲ್ಲಿ ಚಿತ್ರಹಿಂಸೆ ನೀಡಿದ್ದರಂತೆ. ಇದರಿಂದ ಅಂದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸಿತ್ತು ಎಂದು ತಮ್ಮ ಕಹಿ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ನಿರ್ಮಾಪಕ ಯಾರು? ಆ ಘಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮತ್ತೊಂದು 'ಮೀಟೂ' ನಂತಹ ಪ್ರಕರಣ

ಕೆಲವೇ ವರ್ಷಗಳ ಹಿಂದೆ ಭಾರತದಲ್ಲಿ ಕೆಲ ನಟಿಯರು ಲೈಂಗಿಕ ದೌರ್ಜನ್ಯ ಹಾಗೂ ಚಿತ್ರಹಿಂಸೆಯ ವಿರುದ್ಧ ತಿರುಗಿಬಿದ್ದಿದ್ದರು. ದೇಶಾದ್ಯಂತ ಇದೇ 'ಮೀಟೂ' ಪ್ರಕರಣಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದವು. ಆದರೆ ಇದ್ದಕ್ಕಿದ್ದ ಹಾಗೇ ಈ ಪ್ರಕರಣಗಳು ತಣ್ಣಗಾಗಿದ್ದವು. ಈ ಮೋನಿಕಾ ಭಡೋರಿಯಾ ಇಂತಹ ಒಂದು ಪ್ರಕರಣದ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ್ದಾರೆ.

Actress Monika Bhadoriya wants to commit suicide due to Asit Kumar Modis torture

ಹಿಂದಿಯ ಪ್ರಸಿದ್ಧ ಶೋ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದ ನಿರ್ಮಾಪಕರು ತನಗೆ ಚಿತ್ರ ಹಿಂಸೆ ನೀಡಿದ್ದರು. ಅವರ ಕಿರುಕುಳ ತಡೆಯಲಾರದೆ ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದೆ ಎಂದು ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನ ಮೋನಿಯಾ ಹೇಳಿದ್ದಾರೆ. ಇವರ ಈ ಹೇಳಿಕೆ ಬಾಲಿವುಡ್‌ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಚರ್ಚೆಯಾಗುತ್ತಿದೆ.

"ಅದು ನರಕಯಾತನೆ"

ಪಾಪುರಲ್ ಹಿಂದಿ ಶೋ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ಧ ಕಳೆದ ತಿಂಗಳಷ್ಟೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿತ್ತು. ನಟಿ ಜೆನ್ನಿಫರ್ ಮಿಸ್ತ್ರಿ ಬನ್ಸಿಲಾಲ್ ಈ ನಿರ್ಮಾಪಕನ ವಿರುದ್ಧ ಆರೋಪಿಸಿದ್ದರು. ಈ ಬೆನ್ನಲ್ಲೇ ಈಗ ಈ ಶೋದ ನಟಿ ಮೋನಿಕಾ ಭಡೋರಿಯಾ ಕೂಡ ಇದೇ ನಿರ್ಮಾಪಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

"ನಾನು ನನ್ನ ಅಮ್ಮ ಹಾಗೂ ಅಜ್ಜಿಯನ್ನು ಅತೀ ಕಡಿಮೆ ಸಮಯದಲ್ಲಿ ಕಳೆದುಕೊಂಡೆ. ಅವರಿಬ್ಬರೂ ನನ್ನ ಬದುಕಿನ ಪಿಲ್ಲರ್ ಆಗಿದ್ದರು. ನನಗೆ ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಇಂತಹ ಸಮಯದಲ್ಲಿ ನಾನು ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲೂ ಕೂಡ ಚಿತ್ರಹಿಂಸೆಯನ್ನು ನೀಡಲಾಗುತ್ತಿತ್ತು. ಅದು ನರಕಯಾತನೆ.. ಆ ಚಿತ್ರಹಿಂಸೆಯ ಬಳಿಕ ನಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿದ್ದೆ" ಎಂದಿದ್ದಾರೆ.

"ಸುಳ್ಳು ಹೇಳಿದರು"

ಮೋನಿಕಾ ಭಡೋರಿಯಾ ಸಂದರ್ಶನ ಬಾಲಿವುಡ್‌ ಹಾಗೂ ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ. 2019ರಲ್ಲಿ ಮೋನಿಕಾ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದಿಂದ ಹೊರಬಂದಿದ್ದರು. ಈಗ ನಿರ್ಮಾಪಕನ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

" ನಾನು ನನ್ನ ಪೋಷಕರನ್ನು ಸೆಟ್ಟಿಗೆ ಕರೆದುಕೊಂಡು ಬರಬೇಕು ಅಂತಿದ್ದೆ. ಆದರೆ, ಇಲ್ಲಿನ ವಾತಾವರಣವನ್ನು ನೋಡಿ ಬೇಡವೆಂದು ನಿರ್ಧರಿಸಿದೆ. ನನ್ನ ತಾಯಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಈ ವೇಳೆ ನನ್ನ ತಂದೆ ನಿಧನರಾದಾಗ ಹಣ ನೀಡಿದ್ದೆವು. ತಾಯಿ ಚಿಕಿತ್ಸೆಗೂ ಹಣ ನೀಡಿದ್ದೇವೆ ಎಂದಿದ್ದರು. ಇದು ನನಗೆ ತೀವ್ರ ನೋವುಂಟು ಮಾಡಿದೆ" ಎಂದಿದ್ದಾರೆ.

More from Filmibeat

English summary
Actress Monika Bhadoriya wants to commit suicide due to Producer Asit Kumar Modi's torture. She explained about the torture in the set of Taarak Mehta Ka Ooltah Chashmah, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X