"ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು

ಕನ್ನಡ ಚಿತ್ರರಂಗದ ಅಲ್‌ಮೋಸ್ಟ್ ದೂರ ಉಳಿದಿರುವ ನಟಿ ನೀತು. ಆದರೆ, ಇವರ ಪಾತ್ರಗಳನ್ನು ಮರೆಯೋಕೆ ಆಗೋದಿಲ್ಲ. 'ಗಾಳಿಪಟ' ಸಿನಿಮಾವನ್ನು ಅದೆಷ್ಟು ಬಾರಿ ನೋಡಿದರೂ, ಕಣ್ಮುಂದೆ ಮೊದಲು ಬರುವ ಪಾತ್ರವೇ ನೀತು ಅವರದ್ದು. ಟಾಮ್ ಬಾಯ್ ಅಂತ ಪಾತ್ರದಲ್ಲಿ ನಟಿಸಿದ್ದರು. ಅವರ ಹೈಟ್ ಹಾಗೂ ಪರ್ಸನಾಲಿಟಿಗೆ ಅದು ಹೊಂದಿಕೆಯಾಗಿತ್ತು.

ಇದೇ 'ಗಾಳಿಪಟ' ನಟಿ ನೀತುಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ಕೊಟ್ಟಿದ್ದು ನಿಜ. ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಅವರು ದೈಹಿಕವಾಗಿ ಸ್ವಲ್ಪ ದಪ್ಪ ಆಗಿದ್ದಾರೆ. ಈ ಬಗ್ಗೆ ಜನರು ಏನೆಲ್ಲ ಕಮೆಂಟ್ ಮಾಡುತ್ತಾರೆ. ಅವರ ಮಾನಸಿಕ ಪರಿಸ್ಥಿತಿ ಹೇಗಿದೆ? ಅನ್ನುವುದುನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ನಟಿ ನೀತು ಹೇಳಿಕೊಂಡಿದ್ದಾರೆ.

Actress Neetu said people comment that she was getting physical a lot hence the overweight

ಆರ್‌ಜೆ ರಾಜೇಶ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ನಟಿ ನೀತು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ದಪ್ಪ ಆಗಿದ್ದು ಹೇಗೆ? ಅವರು ಯಾಕೆ ಸಣ್ಣಗಾಗುತ್ತಿಲ್ಲ. ದಪ್ಪ ಆಗಿದ್ದಕ್ಕೆ ಜನರು ಏನೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಅನ್ನೋದನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. ನಟಿ ನೀತು ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ನೀತು ತಂಗಿ ಲಂಡನ್‌ನಲ್ಲಿ ಇರುತ್ತಾರೆ. ಅಲ್ಲಿ ಚಳಿಗಾಲ ಶುರುವಾದಾಗ ಇವರ ಮನೆಯಲ್ಲಿ ತಂಗಿದ್ದರು. ಈ ವೇಳೆ ನೀತು ದಪ್ಪಗಾಗಿದ್ದನ್ನು ಮನಗಂಡು ವ್ಯಾಯಾಮ ಮಾಡುವಂತೆ ಹೇಳಿದ್ದರಂತೆ. ಆದರೂ, ಅದೆಲ್ಲ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

"ಒಂದು ದಿನ ನನ್ನ ತಂಗಿ ವಿಂಟರ್‌ ಬ್ರೇಕ್‌ನಲ್ಲಿ ಇಲ್ಲಿಗೆ ಬಂದಳು. ನಾನು ಬಂದಲ್ಲಿಂದ ನೋಡುತ್ತಿದ್ದೇನೆ. ಏನು ಎಲ್ಲೂ ಹೋಗುತ್ತಿಲ್ಲ ನೀತು. ಬರೀ ಸೋಫಾ ಮೇಲೆ ಕೂತುಕೊಂಡಿದ್ದೀಯ. ಏನಿದು ವ್ಯಾಯಾಮ ಮಾಡು ಅಂದಳು. ನನಗೂ ಮಾಡಬೇಕು ಅಂತಿದೆ. ಆದರೆ, ನನಗೆ ವ್ಯಾಯಾಮ ಮಾಡುವುದಕ್ಕೆ ಆಗುತ್ತಿಲ್ಲ. ಅವಳು ಹೇಳುತ್ತಿರೋದರು ಸರಿ. ಆದರೆ, ಆಗಲ್ಲ. ಯಾರೇ ಅದೆಷ್ಟೇ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರೂ ಆದು ಆಗಲ್ಲ." ಎಂದು ನೀತು ಹೇಳಿದ್ದಾರೆ.

Actress Neetu said people comment that she was getting physical a lot hence the overweight

ಇದೇ ಸಂದರ್ಶನದಲ್ಲಿ ತಾನು ಒಬ್ಬಂಟಿ ಎಂದೂ ಹೇಳಿಕೊಂಡಿದ್ದಾರೆ. ಅಲ್ಲಷ್ಟೇ ಅಲ್ಲದೆ ಕೆಲವರು ಸಣ್ಣ ಆಗುತ್ತಾರೆ. ಅದರಲ್ಲೇನು ದೊಡ್ಡ ವಿಷಯವಿದೆ ಎಂದು ಪ್ರಶ್ನೆ ಮಾಡಿದ್ದಾರೆ. "ಗಾಳಿಪಟದಲ್ಲಿ ಎಂತಹದ್ದೇ ಟಾಮ್‌ ಬಾಯ್ ಪಾತ್ರ ಮಾಡಿರಲಿ. ಆದರೆ, ರಿಯಲ್‌ ಲೈಫ್‌ನಲ್ಲಿ ನಾನು ಅಂತಹವಳಲ್ಲ. ನಾನು ಒಬ್ಬಂಟಿ. ನಾನು ಒಬ್ಬಂಟಿಯಾಗಿ ಇರುವುದು ನನಗೆ ಇಷ್ಟ. ಯಾವಾಗಲೂ ಜನರು ಇರಲೇಬೇಕು ಅಂತಿಲ್ಲ. ಅವರಿಂದಾಗಿ ನಾನು ಹಿಂಜರಿಯುವುದು ಇಷ್ಟವಿಲ್ಲ. ಅದೊಂತರ ಬೇಡದೇ ಇರುವುದಕ್ಕೆ ಶ್ರಮ ಹಾಕಿದಂತೆ. ಆದರೆ, ಎಷ್ಟು ಅಂತ ಇಂತಹದ್ದನ್ನು ಕೇಳುತ್ತಲೇ ಇರುತ್ತೀರ. ಕೆಲವರು ದಪ್ಪ ಆಗುತ್ತಾರೆ. ಕೆಲವರು ಸಣ್ಣ ಆಗುತ್ತಾರೆ. ಅದರಲ್ಲೇನು ದೊಡ್ಡ ವಿಷಯವಿದೆ." ಎಂದಿದ್ದಾರೆ.

ನೀತು ದಪ್ಪ ಆಗಿದ್ದಕ್ಕೆ ಎಷ್ಟೋ ಜನ ಬೀಯರ್ ಕುಡಿಯುತ್ತೀರಾ ಅಂತೆಲ್ಲ ಕೇಳಿದ್ದರಂತೆ. "ಎಲ್ಲರಿಗೂ ಶೇಮ್ ಇತ್ತು. ದಪ್ಪ ಆಗಿಬಿಟ್ಟಿದ್ದಾಳೆ. ಇನ್ನೂ ಸ್ವಲ್ಪ ಸಣ್ಣ ಆಗಬೇಕಿತ್ತು. ನನಗೆ ಎಷ್ಟು ಜನ ಬೀಯರ್ ಕುಡಿಯುತ್ತೀರಾ ಅಂತ ಕೇಳಿದ್ದಾರೆ ಗೊತ್ತಾ? ನನಗೆ ಅದರ ಸ್ಮೆಲ್ ಆಗಲ್ಲ. ನನ್ನ ಸ್ನೇಹಿತರು ಕುಡಿಯುತ್ತಾರೆ. ಅವರೊಂದಿಗೆ ನಾನು ಕೂರುತ್ತೇನೆ. ಆದರೆ, ನಾನು ಕುಡಿಯಲ್ಲ. ಯಾಕಂದ್ರೆ ಅದರ ಸ್ಮೆಲ್ ಕಂಡರೆ ಆಗುವುದಿಲ್ಲ. ಆದರೆ, ಇದನ್ನೆಲ್ಲ ಕೇಳುವುದಕ್ಕೆ ಇಷ್ಟವಿಲ್ಲ." ಎಂದಿದ್ದಾರೆ.

ನೀತು ದಪ್ಪ ಆಗಿದ್ದಕ್ಕೆ ಸಾಕಷ್ಟು ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡಿದ್ದಾರೆ. ಅದನ್ನೂ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಇನ್ನೂ ಬೇಸರದ ಸಂಗತಿ ಅಂದರೆ, ಈ ಬಗ್ಗೆ ನಾನು ಹಿಂದೆ ಬರೆದಿದ್ದೆ. ದಪ್ಪ ಇದ್ದೀರಾ ಅಂದರೆ, ನೀನು ಯಾರದ್ದೋ ಜೊತೆಯಲ್ಲಿ ಇದ್ದೀಯ ಅನ್ನುವ ಕೆಟ್ಟ ಮನ:ಸ್ಥಿತಿ ಜನರಲ್ಲಿ ಇದೆ. ಆ ಟೈಮ್‌ನಲ್ಲಿ ನಿಮಗೆ ಬಾಯ್‌ ಫ್ರೆಂಡ್ ಕೂಡ ಇಲ್ಲದೆ ಇರಬಹುದು. ನೀನು ಯಾರೊಂದಿಗೋ ದೈಹಿಕ ಸಂಬಂಧ ಇಟ್ಟುಕೊಂಡಿದ್ದೀಯ. ಮಜಾ ಮಾಡುತ್ತಿದ್ದೀಯಾ ಅಂತಾನೂ ಹೇಳಿದ್ದಾರೆ. ಇದು ನನ್ನ ಜೀವನದಲ್ಲಿ ಕೇಳಿದ ಅತೀ ಕೆಟ್ಟ ಪದ. ನಾನು ಹೇಳ್ತಾ ಇರೋದು ಕೆಲವರು ನಮ್ಮ ಬೆಡ್‌ ರೂಂನಿಂದ ಹಿಡಿದು ಊಟದವರೆಗೂ ಯೋಚನೆ ಮಾಡುತ್ತಾರಲ್ಲ ಅನ್ನೋದು ಅಸಹ್ಯ." ಎಂದು ನೀತು ಬೇಸರ ಹೊರ ಹಾಕಿದ್ದಾರೆ.

More from Filmibeat

English summary
Actress Neetu said about her overweight:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X