ಸುಚೇಂದ್ರ ಪ್ರಸಾದ್ ಅವರಂತಹ ಪತಿಯನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿ: ಪವಿತ್ರಾ ಲೋಕೇಶ್!

ಕನ್ನಡ ನಟಿ ಪವಿತ್ರಾ ಲೋಕೇಶ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ಬೇಡಿಕೆಯ ಪೋಷಕ ನಟಿ. ಸದ್ಯ ಪವಿತ್ರಾ ಲೋಕೇಶ್ ಸಿನಿಮಾದಿಂದ ಅಲ್ಲ. ಅವರ ವೈಯಕ್ತಿಕ ವಿಚಾರಗಳಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಪವಿತ್ರಾ ಲೋಕೇಶ್ ಅವರ ಹೆಸರು ತೆಲುಗಿನ ಹಿರಿಯ ನಟ ನರೇಶ್ ಜೊತೆ ತಳುಕು ಹಾಕಿಕೊಂಡಿದೆ. ನರೇಶ್ ಜೊತೆ ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಮದುವೆ ವಿಷಯ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದ್ದರೂ, ಪವಿತ್ರಾ ಲೋಕೇಶ್ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಚರ್ಚೆಯಾಗುತ್ತಿರುವಾಗಲೇ ನಟಿ ತೆಲುಗು ಚಾನೆಲ್ ಒಂದಕ್ಕೆ ನೀಡಿದ ಹಳೆಯ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ಪವಿತ್ರಾ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ ಮಾತುಗಳೇ ವೈರಲ್ ಆಗುತ್ತಿವೆ.

ಪವಿತ್ರಾ-ನರೇಶ್ ದೇವಸ್ಥಾನಕ್ಕೆ ಒಟ್ಟಿಗೆ ಹೋಗಿದ್ದೇಕೆ?

ಪವಿತ್ರಾ-ನರೇಶ್ ದೇವಸ್ಥಾನಕ್ಕೆ ಒಟ್ಟಿಗೆ ಹೋಗಿದ್ದೇಕೆ?

ತೆಲುಗು ಚಿತ್ರರಂಗದ ಜನಪ್ರಿಯ ನಟಿ ವಿಜಯ ನಿರ್ಮಲಾ ಅವರ ಪುತ್ರನೇ ನರೇಶ್. ಟಾಲಿವುಡ್‌ನಲ್ಲಿ ಪೋಷಕ ಪಾತ್ರಗಳಲ್ಲಿ ಜನಪ್ರಿಯರಾಗಿರುವ ನರೇಶ್‌ರೊಂದಿಗೆ ಪವಿತ್ರಾ ಲೋಕೇಶ್ ಹೆಸರು ತಳುಕು ಹಾಕಿಕೊಂಡಿದೆ. ಆದರೆ, ನರೇಶ್ ಆಪ್ತರು ಮಾತ್ರ ಈ ಸುದ್ದಿಯನ್ನು ಅಲ್ಲಗೆಳೆದಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಮಹಾಬಲಿಪುರಂನಲ್ಲಿರುವ ದೇವಸ್ಥಾನವೊಂದಕ್ಕೆ ಹೋಗಿದ್ದರು. ಅಲ್ಲಿ ಇಬ್ಬರೂ ಒಟ್ಟಿಗಿದ್ದ ಫೋಟೊಗಳು ವೈರಲ್ ಆಗಿದ್ದವು. ಇದೇ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಗ್ಗೆ ಸುದ್ದಿ ಹಬ್ಬಲು ಕಾರಣ ಎನ್ನಲಾಗಿದೆ.

5 ವರ್ಷದ ಹಳೆಯ ವಿಡಿಯೋ ವೈರಲ್

5 ವರ್ಷದ ಹಳೆಯ ವಿಡಿಯೋ ವೈರಲ್

ಟಾಲಿವುಡ್‌ನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರ ಮದುವೆ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಆದರೆ, ಇಬ್ಬರೂ ಇದೂವರೆಗೂ ಈ ವದಂತಿಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಂತ ಊಹಾಪೋಹಗಳು ಮಾತ್ರ ನಿಂತಿಲ್ಲ. ಸದ್ಯಕ್ಕೀಗ ತೆಲುಗಿನಲ್ಲಿ ಪವಿತ್ರಾ ಲೋಕೇಶ್ ನೀಡಿದ ಸಂದರ್ಶನವೊಂದು ಮತ್ತೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಹಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.

ಸುಚೇಂದ್ರ ಪ್ರಸಾದ್ ಒಳ್ಳೆಯ ವ್ಯಕ್ತಿ

ಸುಚೇಂದ್ರ ಪ್ರಸಾದ್ ಒಳ್ಳೆಯ ವ್ಯಕ್ತಿ

ತೆಲುಗಿನ ಈ ಸಂದರ್ಶನದಲ್ಲಿ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. "ಸುಚೇಂದ್ರ ಪ್ರಸಾದ್ ತುಂಬಾ ದೊಡ್ಡ ವ್ಯಕ್ತಿ. ಅವರು ತುಂಬಾ ಒಳ್ಳೆಯ ವ್ಯಕ್ತಿತ್ವ. ಅಂತಹ ವ್ಯಕ್ತಿಯನ್ನು ಬೇರೆಯವರಲ್ಲಿ ನೋಡಲು ಸಾಧ್ಯವೇ ಇಲ್ಲ. ಅವರಲ್ಲಿ ಒಂದೇ ಒಂದು ಲೋಪವೂ ಕಂಡು ಬರುವುದಿಲ್ಲ." ಎಂದು ಪವಿತ್ರಾ ಲೋಕೇಶ್ ಆ ಸಂದರ್ಶನದಲ್ಲಿ ಹೇಳಿದ್ದರು.

ನಾನು ಅದೃಷ್ಟಶಾಲಿ

ನಾನು ಅದೃಷ್ಟಶಾಲಿ

ಇದೇ ಸಂದರ್ಶನದಲ್ಲಿ ಸುಚೇಂದ್ರ ಪ್ರಸಾದ್ ಅವರನ್ನು ಪತಿಯಾಗಿ ಪಡೆದಿದ್ದಕ್ಕೆ ನಾನು ಅದೃಷ್ಟಶಾಲಿ ಎಂದಿದ್ದರು. " ಸುಚೇಂದ್ರ ಪ್ರಸಾದ್ ಅಂತಹ ಪತಿಯನ್ನು ಪಡೆದಿರುವುದಕ್ಕೆ ನಾನು ತುಂಬಾ ಅದೃಷ್ಟಶಾಲಿ. ಅವರಿಗೆ ಸ್ವಲ್ಪ ಸಮಯ ಸಿಕ್ಕರೂ ಸಾಕು, ನನಗಾಗಿ ಅಡುಗೆ ಮಾಡುತ್ತಾರೆ. ಮನೆಗೆಲಸವನ್ನೆಲ್ಲಾ ಮಾಡುತ್ತಾರೆ" ಎಂದು ಪವಿತ್ರಾ ಹೇಳಿದ್ದರು. ಇದೇ ವಿಡಿಯೋ ಈಗ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

More from Filmibeat

English summary
Actress Pavitra Lokesh Comments About Her Husband In 5 years Old Interview Goes Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X