ನರೇಶ್ ಜೊತೆ ಬಂದು ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ಪವಿತ್ರಾ ಲೋಕೇಶ್: ಸಿನಿಮಾದಿಂದ ಗುಡ್ ಬೈ ಹೇಳ್ತಾರಾ?
ಕನ್ನಡದ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ವಿವಾದಿಂದಲೇ ಸುದ್ದಿಯಲ್ಲಿದ್ದಾರೆ. ತೆಲುಗಿನ ಹಿರಿಯ ನಟ ವಿಕೆ ನರೇಶ್ ಜೊತೆಗಿನ ಸಂಬಂಧದ ವಿಚಾರವಾಗಿ ಕಳೆದ ಹಲವು ತಿಂಗಳಿನಿಂದ ಭಾರೀ ಚರ್ಚೆಯಲ್ಲಿದ್ದಾರೆ. ಅಲ್ಲದೇ 'ಮಳ್ಳಿ ಪೆಳ್ಳಿ' ಸಿನಿಮಾದಿಂದಲೂ ಇವರಿಬ್ಬರ ಹೆಸರು ಹೆಚ್ಚು ಚಾಲನೆಯಲ್ಲಿತ್ತು.
'ಮಳ್ಳಿ ಪೆಳ್ಳಿ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾ ಪ್ರಚಾರದ ವೇಳೆ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿ ಇರೋದನ್ನು ಒಪ್ಪಿಕೊಂಡಿದ್ದರು.

ಇಷ್ಟೇ ಅಲ್ಲದೆ, ವೈಯಕ್ತಿಕ ವಿಚಾರ, ಮುಂದಿನ ಭವಿಷ್ಯ ಎಲ್ಲವನ್ನೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮುಕ್ತವಾಗಿಯೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ಈಗ ಪವಿತ್ರಾ ಲೋಕೇಶ್ ತಮ್ಮ ಬದುಕಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಿಎಚ್‌ಡಿ ಪಡೆಯುವುಕ್ಕೆ ಮನಸ್ಸು ಮಾಡಿದ್ದಾರೆ.
ಹಂಪಿ ವಿಶ್ವವಿದ್ಯಾಲಯದಲ್ಲಿ ಪವಿತ್ರಾ-ನರೇಶ್
ಕಳೆದ ವಾರವಷ್ಟೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕತ್ತು. ಆದರೆ, ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಕೂಡ ಚೆನ್ನಾಗಿದೆ ಎಂದು ವರದಿಯಾಗಿತ್ತು.

'ಮಳ್ಳಿ ಪೆಳ್ಳಿ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ, ಪವಿತ್ರಾ ಲೋಕೇಶ್ ಹೊಸ ನಿರ್ಧಾರ ಕೈಗೊಂಡಿದ್ದಾರೆ. ಪಿಎಚ್‌ಡಿ ಪಡೆಯುವುದಕ್ಕೆ ಪವಿತ್ರಾ ಲೋಕೇಶ್ ನಿರ್ಧರಿಸಿದ್ದು, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ಹೊಸ ಶೈಕ್ಷಣಿಕ ಹಾದಿಯ ಕಡೆಗೆ ಮನಸ್ಸು ಮಾಡಿದ್ದಾರೆ.
ಸಾಹಿತ್ಯ ಕೃಷಿಗೆ ಮುಂದಾದ ಪವಿತ್ರಾ ಲೋಕೇಶ್
ಪವಿತ್ರಾ ಲೋಕೇಶ್ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ. ಹೀಗಿದ್ದರೂ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯ ವಿಚಾರವಾಗಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ತೆಲುಗು ನಟ ನರೇಶ್ ಕೂಡ ಜೊತೆಯಲ್ಲಿ ಇದ್ದರು.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಮೇಲೆ ಆರೋಪ ಮಾಡಿದ ಬಳಿಕ ಪವಿತ್ರಾ ಲೋಕೇಶ್ ಟೀಕೆಗೆ ಗುರಿಯಾಗಿದ್ದರು. ಇದೇ ವಿಚಾರವಾಗಿ 'ಮಳ್ಳಿ ಪೆಳ್ಳಿ' ಪ್ರಚಾರದ ವೇಳೆ ಪವಿತ್ರಾ ಲೋಕೇಶ್ ಹಾಗೂ ವಿಕೆ ನರೇಶ್ ಪ್ರತಿಕ್ರಿಯೆ ನೀಡಿದ್ದರು.
ಸಿನಿಮಾದಿಂದ ದೂರ ಉಲಿಯುತ್ತಾರಾ ಪವಿತ್ರಾ?
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಹೊರಬೀಳುತ್ತಿದ್ದಂತೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎದ್ದಿತ್ತು. ಈ ವಿಷಯ ಹೊರ ಬೀಳುತ್ತಿದ್ದಂತೆ ಪವಿತ್ರಾ ಲೋಕೇಶ್‌ಗೆ ಟಾಲಿವುಡ್‌ನಲ್ಲಿ ಆಫರ್‌ಗಳು ಕಡಿಮೆಯಾಗಿದ್ದವು ಎಂದು ಸುದ್ದಿಯಾಗಿತ್ತು. ರಮ್ಯಾ ರಘುಪತಿ ಆರೋಪ ಮಾಡಿದ್ದಲ್ಲಿಂದ ಪವಿತ್ರಾ ಲೋಕೇಶ್ ಸಿನಿಮಾ ಕಾಣಿಸಿಕೊಳ್ಳುವುದು ಕೂಡ ಕಡಿಮೆಯಾಗಿದೆ.
ಇತ್ತ ಪಿಎಚ್‌ಡಿ ಪ್ರವೇಶ ಪರೀಕ್ಷೆ ಬೇರೆ ಬರೆದಿದ್ದಾರೆ. ಹೀಗಾಗಿ ಸಿನಿಮಾ ದೂರ ಉಳಿಯಲು ಪವಿತ್ರಾ ಲೋಕೇಶ್ ನಿರ್ಧರಿಸಿದ್ದಾರಾ? ಸಿನಿಮಾ ಗುಡ್ ಬೈ ಹೇಳಿ ಡಾಕ್ಟರೇಟ್ ಪದವಿ ಪಡೆಯುವುದಕ್ಕೆ ನಿರ್ಧರಿಸಿದ್ದಾರಾ? ಅನ್ನೋ ಅನುಮಾನ ಶುರುವಾಗಿದೆ.


Click it and Unblock the Notifications











