'ಓಲ್ಡ್ ಮಾಂಕ್' ನೋಡಿ 'ಜಸ್ಟ್‌ ಮಾತ್ ಮಾತಲ್ಲಿ' ಸಹೋದರರನ್ನು ನೆನೆದ ರಮ್ಯಾ: ಹೆಂಗೈತಂತೆ ಸಿನಿಮಾ?

ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್‌ ಕಮ್‌ಬ್ಯಾಕ್‌ಗೆ ಕ್ಷಣಗಣನೆ ಆರಂಭ ಆಗಿದೆ. ರಮ್ಯಾ ಹೊಸ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡುತ್ತಾರೋ ಎಂದು ಎದುರು ನೋಡುತ್ತಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ರಮ್ಯಾ ಮತ್ತೆ ಆಗಾಗ ಸಿನಿಮಾ ಮಂದಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ. ಈ ಮಧ್ಯೆ ಕನ್ನಡ ಸಿನಿಮಾಗಳನ್ನೂ ನೋಡುತ್ತಿದ್ದಾರೆ.

ರಾಜಕೀಯದ ಕಡೆ ರಮ್ಯಾ ಒಲವು ಬೆಳೆಸಿಕೊಂಡಿದ್ದರಿಂದ ಸ್ಯಾಂಡಲ್‌ವುಡ್‌ನಿಂದ ದೂರ ಆಗಿದ್ದರು. ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದರು. ಆದ್ರೀಗ ಮತ್ತೆ ಅಭಿಮಾನಿಗಳ ಒತ್ತಾಯಕ್ಕೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಸದ್ಯ ರಮ್ಯಾ ಬಗ್ಗೆ ಮಾಹಿತಿ ಏನಪ್ಪಾ ಅಂದರೆ, ಮೋಹಕತಾರೆ ಇತ್ತೀಚೆಗೆ 'ಓಲ್ಡ್ ಮಾಂಕ್' ಸಿನಿಮಾ ನೋಡಿದ್ದಾರೆ. ಶ್ರೀನಿ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಈ ಸಿನಿಮಾ ನೋಡಿ ಮೆಚ್ಚಿಕೊಂಡಾಡಿದ್ದಾರೆ.

 ಓಲ್ಡ್ ಮಾಂಕ್ ನೋಡಿ ಹೇಳಿದ್ದೇನು?

ಓಲ್ಡ್ ಮಾಂಕ್ ನೋಡಿ ಹೇಳಿದ್ದೇನು?

ಶ್ರೀನಿ ನಿರ್ದೇಶಿಸಿ, ನಟಿಸಿದ ಸಿನಿಮಾ 'ಓಲ್ಡ್ ಮಾಂಕ್' ಸಿನಿಮಾ ಬಗ್ಗೆ ಒಳ್ಳೆ ಅಭಿಪ್ರಾಯಗಳು ಕೇಳಿಬರುತ್ತಿವೆ. ಇತ್ತೀಚೆಗೆ ಇದೇ ಸಿನಿಮಾವನ್ನು ಮೋಹಕ ತಾರೆ ರಮ್ಯಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀನಿ ಸ್ಯಾಂಡಲ್‌ವುಡ್ ಕ್ವೀನ್‌ಗಾಗಿ ವಿಶೇಷವಾಗಿ 'ಓಲ್ಡ್ ಮಾಂಕ್' ಸಿನಿಮಾ ತೋರಿಸಿದ್ದರು. ಈ ಕಾರಣಕ್ಕೆ ಶ್ರೀನಿಗೆ ಮೋಹಕ ತಾರೆ ಧನ್ಯವಾದ ಹೇಳಿದ್ದಾರೆ. " ನನಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ್ದಕ್ಕೆ ಧನ್ಯವಾದಗಳು. ಸಿನಿಮಾವನ್ನು ನಾನು ಎಂಜಾಯ್ ಮಾಡಿದ್ದೇನೆ. ದಯವಿಟ್ಟು ಎಲ್ಲರೂ ಥ್ರಿಯೇಟರ್‌ಗೆ ಹೋಗಿ ಸಿನಿಮಾ ನೋಡಿ. ಸಿನಿಮಾದಲ್ಲಿ ನಗು ಗ್ಯಾರಂಟಿ." ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

 ಸಹೋದರರನ್ನು ನೆನೆದ ರಮ್ಯಾ

ಸಹೋದರರನ್ನು ನೆನೆದ ರಮ್ಯಾ

ಮೋಹಕ ತಾರೆ ಕೇವಲ ಸಿನಿಮಾ ಬಗ್ಗೆ ಅಷ್ಟೇ ಅಲ್ಲ ಮಾತಾಡಿಲ್ಲ. 'ಓಲ್ಡ್ ಮಾಂಕ್' ಸಿನಿಮಾದ ನಿರ್ದೇಶಕ ಹಾಗೂ ನಟ ಶ್ರೀನಿ ಜೊತೆಗಿನ ಹಳೆ ನೆನಪುಗಳನ್ನು ನೆನೆದು ಟ್ವೀಟ್ ಮಾಡಿದ್ದಾರೆ. ರಮ್ಯಾ ನಟಿಸಿದ್ದ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾದಲ್ಲಿ ಶ್ರೀನಿ ಸಹೋದರನ ಮಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಶ್ರೀನಿ ಬೆಳೆದು ನಿಂತಿರುವುದನ್ನು ನೆನಪಿಸಿಕೊಂಡಿದ್ದಾರೆ. " ಜಸ್ಟ್ ಮಾತ್ ಮಾತಲ್ಲಿ ನನ್ನ ಸಹೋದರನ ಪಾತ್ರದಲ್ಲಿ ನಟಿಸಿದ್ದರಿಂದ ಹಿಡಿದು ಈಗ ನಟ, ನಿರ್ದೇಶಕನಾಗಿ ಬೆಳೆದು ನಿಂತಿದ್ದೀಯ. ನೀನು ತುಂಬಾನೇ ದೂರ ಬಂದಿದ್ದೀಯ. ಅದಕ್ಕೆ ನನಗೆ ಖುಷಿಯಾಗಿದೆ." ಎಂದು ಮೋಹಕ ತಾರೆ ರಮ್ಯಾ ತಿಳಿಸಿದ್ದಾರೆ.

 ಓಲ್ಡ್ ಮಾಂಕ್ ಮೆಚ್ಚಿದ ಪ್ರೇಕ್ಷಕ

ಓಲ್ಡ್ ಮಾಂಕ್ ಮೆಚ್ಚಿದ ಪ್ರೇಕ್ಷಕ

'ಓಲ್ಡ್ ಮಾಂಕ್' ಸಿನಿಮಾ ಫೆಬ್ರವರಿ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಫಸ್ಟ್ ಡೇ ಫಸ್ಟ್ ಶೋನೇ ಸಿನಿಮಾಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರಿಗೆ ಚಿತ್ರ ಇಷ್ಟ ಆಗುತ್ತಿದೆ. ಫ್ಯಾಮಿಲಿ ಕಥೆಯ ಜೊತೆ ಜೊತೆಗೆ ಹಾಸ್ಯವನ್ನೂ ಸಿನಿಮಾದಲ್ಲಿ ಬೆರೆಸಲಾಗಿದೆ. ಹೀಗಾಗಿ ಬಿಡುಗಡೆಯಾದ ಸುಮಾರು 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗಳಿಕೆಯಲ್ಲೂ ಸಿನಿಮಾ ಮುನ್ನುಗ್ಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 'ಓಲ್ಡ್ ಮಾಂಕ್' ಫಿಟ್ಟಿಂಗ್ ಮಾಸ್ಟರ್

'ಓಲ್ಡ್ ಮಾಂಕ್' ಫಿಟ್ಟಿಂಗ್ ಮಾಸ್ಟರ್

ಪುರಾಣದಲ್ಲಿ ನಾರದ ಲೋಕ ಸಂಚಾರ ಮಾಡಿ ಅಲ್ಲಿ ಫಿಟ್ಟಿಂಗ್ ಇಟ್ಟು ಬರುತ್ತಾನೆ ಎಂಬುದನ್ನು ಓದಿದ್ದೇವೆ. ಇದೇ ನಾರದ ಶಾಪಕ್ಕೆ ತುತ್ತಾಗಿ ಭೂಮಿಗೆ ಬಂದು ಕ್ವಾಟ್ಲೆ ಇಡುವ ಕಥೆಯೇ 'ಓಲ್ಡ್ ಮಾಂಕ್'. ಈ ಶಾಪಗ್ರಸ್ಥ ಓಲ್ಡ್ ಮಾಂಕ್ ಅದಿನ್ಯಾವ ಮಟ್ಟಿಗೆ ಜೊತೆಯಲ್ಲಿ ಇದ್ದವರಿಗೆ ಕಾಟ ಕೊಡಬಹುದು ಎನ್ನುವುದೇ ಈ ಸಿನಿಮಾದ ಕಥೆ. ಹಾಸ್ಯ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಈ ಚಿತ್ರ ಇಷ್ಟ ಆಗುತ್ತೆ. ಕಚಗುಳಿ ಇಡುವ ಸಂಭಾಷಣೆ, ಚಿತ್ರಕಥೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.

More from Filmibeat

English summary
Actress Politician Ramya praises MG Srinivas Starrer Old Monk Kannada Movie. Ramya also remembers Old Monk hero journey from radio to films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X