ನಟಿ ಪೂಜಾಗಾಂಧಿ ಸ್ವಂತ ಬ್ಯಾನರ್ ಚಿತ್ರ ಆರಂಭ

By Rajendra

ಸದ್ಯಕ್ಕೆ ಮದುವೆ ಆಲೋಚನೆ ಕೈಬಿಟ್ಟಿರುವ ಪೂಜಾಗಾಂಧಿ ಅವರು ಈಗ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಅವರ ಹೋಂ ಬ್ಯಾನರ್ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಶ್ರೀಕೃಷ್ಣ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ.

ಈ ಹೆಸರನ್ನು ಅವರು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆಶಾಢ ಮಾಸ ಬರುತ್ತಿರುವ ಕಾರಣ ಈಗ ಹೆಸರನ್ನು ನೋಂದಾಯಿಸಿಕೊಂಡಿದ್ದೇನೆ. ಚಿತ್ರವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಪೂಜಾಗಾಂಧಿ ಹೇಳಿಕೊಂಡಿದ್ದಾರೆ.

ಅವರ ಚೊಚ್ಚಲ ಹೋಂ ಬ್ಯಾನರ್ ಚಿತ್ರಕ್ಕೆ ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಉಳಿದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದರು ಪೂಜಾಗಾಂಧಿ.

ತಮ್ಮ ನಿರ್ಮಾಣದ ಹೊಸ ಚಿತ್ರದಲ್ಲಿ ಅವರು ಅಭಿನಯಿಸುತ್ತಿಲ್ಲ. ಕೇವಲ ನಿರ್ಮಾಣ ಜವಾಬ್ದಾರಿಯನ್ನು ಮಾತ್ರ ಹೊತ್ತಿದ್ದಾರೆ. ಪೂಜಾಗಾಂಧಿ ಅವರು ಇತ್ತೀಚೆಗೆ ಮಾತನಾಡುತ್ತಾ, ಜನ ಸೇವೆಗಾಗಿ ತಾವು ಚಿತ್ರರಂಗವನ್ನೂ ತೊರೆಯಲು ಸಿದ್ಧ ಎಂದಿದ್ದರು.

ಚಿತ್ರರಂಗದಲ್ಲಿ ತಾನು ಸಾಕಷ್ಟು ಹಣ ಗಳಿಸಿದ್ದೇನೆ. ಉತ್ತಮ ಜೀವನವನ್ನೂ ನಡೆಸುತ್ತಿದ್ದೇನೆ. ಹಣ ಅಥವಾ ಹೆಸರುಗಳಿಸುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬರಲಿಲ್ಲ ಎಂದು ಅವರು ಈ ಹಿಂದೊಮ್ಮೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

More from Filmibeat

English summary
Kannada actress Pooja Gandhi starts home banner film. Recently the actress registered her home banner in Karnataka Film Chamber of Commerce. Sree Krishna Productions is the name of her production house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X