ಮಗು ಬಳಿಕ ಬಳುಕುವ ಬಳ್ಳಿಯಾದ ಕನ್ನಡದ ಮಿಲ್ಕಿ ಬ್ಯೂಟಿ; ಪ್ರಣೀತಾ ಫೋಟೊಶೂಟ್‌ಗೆ ಏನಂದ್ರು ಫ್ಯಾನ್ಸ್?
ನಾಯಕಿಯರು ಮದುವೆ ಬಳಿಕ ನಾಯಕಿಯರು ಕಣ್ಮರೆಯಾಗುತ್ತಾರೆ. ಸಿನಿಮಾಗಳಿಂದ ಕಂಪ್ಲೀಟ್ ಆಗಿ ದೂರವೇ ಉಳಿದು ಬಿಡುತ್ತಾರೆ. ಕೆಲವರಂತೂ ಗುರುತೇ ಸಿಗದ ಹಾಗೇ ಬದಲಾಗಿ ಬಿಡುತ್ತಾರೆ. ಮತ್ತೆ ಕೆಲವರಂತೂ ಮಕ್ಕಳ ಜವಾಬ್ದಾರಿಯನ್ನು ಮುಗಿಸಿದ್ಮೇಲೆ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಕೆಲವೇ ಕೆಲವರು ನಟಿಯರು ಮಾತ್ರ ಮದುವೆ, ಮಕ್ಕಳ ಬಳಿಕವೂ ತಮ್ಮ ದೇಹ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆ.
ಕನ್ನಡದ ನಟಿ ಪ್ರಣೀತಾ ಸುಭಾಷ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿಯೀಗ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಇವರ ಹೊಸ ಫೋಟೊಶೂಟ್ ಅವರ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಬಳುಕುವ ಬಳ್ಳಿಯಂತಾಗಿರುವ ನಟಿಯನ್ನು ಕಂಡು ಫಿದಾ ಆಗಿದ್ದಾರೆ.

ಪ್ರಣೀತಾ ಸುಭಾಷ್ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಪ್ರೆಗ್ನೆನ್ಸಿ, ಮಗು ಅಂತ ಸಿನಿಮಾರಂಗದಿಂದ ದೂರುವೇ ಉಳಿದುಬಿಟ್ಟಿದ್ದರು. ಆದರೆ, ಇತ್ತೀಚೆಗೆ ಮಲಯಾಳಂನ 'ಥಂಕಮಣಿ' ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಇದೇ ವೇಳೆ ಗ್ಲಾಮರಸ್ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಫೋಟೊಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರೆಗ್ನೆನ್ಸಿ ಬಳಿಕ ಮಹಿಳೆಯರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಅದರಲ್ಲೂ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಟಿಯರು ಕೂಡ ಮಗುವಿಗೆ ಜನ್ಮ ನೀಡಿದ ಬಳಿಕ ಫಿಟ್ನೆಸ್ ಅನ್ನುವ ಪದವನ್ನೇ ಮರೆತು ಬಿಡುತ್ತಾರೆ. ಆದರೆ, ಪ್ರಣೀತಾ ಮಾತ್ರ ಫಿಟ್ನಸ್ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಅದಕ್ಕೆ ಈ ಫೋಟೊನೇ ಪ್ರತ್ಯಕ್ಷ ಸಾಕ್ಷಿ.
ಅವರೇ ಹಂಚಿಕೊಂಡಿರುವ ಈ ಫೋಟೊದಲ್ಲಿ ಪ್ರಣೀತಾ ಸುಭಾಷ್ ನೆಕ್ ಟಾಪ್ ಹಾಗೂ ಹೂವಿನ ಶಿಮ್ಮೆರ್ ಡಿಸೈನರ್ ಮಿಡಿಯನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ. ಇದರ ಜೊತೆ ಒಂದು ಮಗುವಿನ ತಾಯಿಯಾಗಿದ್ದರೂ ತಾನೆಷ್ಟು ಫಿಟ್ ಆಗಿದ್ದೇನೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಣೀತಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯುಸಿಯಾಗುವ ಸಾಧ್ಯತೆಯಿದೆ.

ದರ್ಶನ್ ನಟನೆಯ 'ಪೊರ್ಕಿ' ಸಿನಿಮಾ ಮೂಲಕ ಪ್ರಣೀತಾ ಸುಭಾಷ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. 'ಜರಾಸಂಧ','ಭೀಮ ತೀರದಲ್ಲಿ', 'ಅತ್ತಾರಿಂಟಿಕಿ ದಾರೇದಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. 'ಹಂಗಾಮ 2', ಬುರ್ಜ್: ದಿ ಪ್ರೈಡ್ ಆಫ್ ಇಂಡಿಯಾ' ಅಂತಹ ಸಿನಿಮಾಗಳಲ್ಲೂ ನಟಿಸಿದ್ದರು. 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಣೀತಾ ಹೆಚ್ಚಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.
ಈಗ ಪ್ರಣೀತಾ ನಟಿಸಿರೋ 'ರಾಮನ ಅವತಾರ' ರಿಲೀಸ್ ಆಗಬೇಕಿದೆ. 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ಜೊತೆ ಪ್ರಣೀತಾ ನಟಿಸಿದ್ದಾರೆ. ಹಾಗೇ ಮಲಯಾಳಂ ಸಿನಿಮಾ 'ಥಂಕಮಣಿ' ಮೂಲಕ ಸಿನಿಮಾರಂಗ ಮತ್ತೆ ಕ್ಯಾಮ್ ಬ್ಯಾಕ್ ಮಾಡುತ್ತಿದ್ದಾರೆ. ಈಗ ಫುಲ್ ಸ್ಲಿಮ್ ಆಗಿರುವ ಫೋಟೊಗಳನ್ನು ಶೇರ್ ಮಾಡಿರುವ ಪ್ರಣೀತಾ ಸುಭಾಷ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.


Click it and Unblock the Notifications











