4 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳಿದ ಪ್ರೇಮಾ: ಯಾವುದು ಸಿನಿಮಾ?

ಸ್ಯಾಂಡಲ್‌ವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ ಪ್ರೇಮಾ. ಕೊಡಗಿನ ನಟಿ ಅಭಿನಯಿಸಿದ ಒಂದೊಂದು ಸಿನಿಮಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. 'ಸವ್ಯಸಾಚಿ'ಯಿಂದ ಸಿನಿಮಾ ಜರ್ನಿ ಆರಂಭಿಸಿದ ಪ್ರೇಮಾ ಎರಡನೇ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. 1995ರಲ್ಲಿ ತೆರೆಕಂಡ 'ಓಂ' ಪ್ರೇಮಾ ನಟಿಸಿದ ಎರಡನೇ ಸಿನಿಮಾ. ಉಪೇಂದ್ರ ನಿರ್ದೇಶಿಸಿದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿವಣ್ಣ-ಪ್ರೇಮಾ ಕಾಂಬಿನೇಷನ್‌ಗೆ ಪ್ರೇಕ್ಷಕರು ಶಿಳ್ಳೆ ಹಾಕಿದ್ದರು.

'ಓಂ' ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಪ್ರೇಮಾ ಗಟ್ಟಿಯಾಗಿ ನೆಲೆಯೂರಿದ್ದರು. ನಮ್ಮೂರ ಮಂದಾರ ಹೂವೇ, ತುತ್ತಾಮುತ್ತಾ, ಚಂದ್ರಮುಖಿ ಪ್ರಾಣಸಖಿಯಂತಹ ಸಿನಿಮಾಗಳು ಪ್ರೇಮಾಗೆ ವೃತ್ತಿ ಬದುಕಿನಲ್ಲಿ ಯಶಸ್ಸು ತಂದುಕೊಟ್ಟ ಸಿನಿಮಾ. ಉಪೇಂದ್ರ ನಟಿಸಿ, ನಿರ್ದೇಶಿಸಿದ ಸಿನಿಮಾ 'ಉಪೇಂದ್ರ' ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ಅಭಿನಯಿಸಿದ ಯಜಮಾನ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೇ ಬರೆದಿತ್ತು. ಕನಸುಗಾರ, ಆಪ್ತಮಿತ್ರದಂತಹ ಸಿನಿಮಾ ಪ್ರೇಮಾ ವೃತ್ತಿ ಬದುಕಿನ ಅದ್ಭುತ ಸಿನಿಮಾಗಳು. ಆದರೆ, 2009ರ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದರು. ಮತ್ತೆ ಕಮ್‌ ಬ್ಯಾಕ್ ಮಾಡಿದ್ದರೂ ಆದರೂ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈಗ 4 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಮತ್ತೆ ಬಣ್ಣ ಹಚ್ಚಿದ ಕೊಡಗು ನಟಿ ಪ್ರೇಮಾ

2017ರಲ್ಲಿ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಪ್ರೇಮಾ ನಟಿಸಿದ ಕೊನೆ ಸಿನಿಮಾ ಇದೆನೇ. ಆ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆದ್ರೀಗ 'ವೆಡ್ಡಿಂಗ್ ಗಿಫ್ಟ್' ಅನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ನಾಲ್ಕು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಖಡಕ್ ಪಾತ್ರದೊಂದಿಗೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ನಟಿಸಲಿದ್ದಾರೆ. ಇದೊಂದು ವಿಶಿಷ್ಟ ಪಾತ್ರವಾಗಿದ್ದು, ಮತ್ತೆ ಪ್ರೇಮಾರನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

Actress Prema making comeback to films after 4 long years with wedding gift

8 ವರ್ಷ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟಿದ್ದ ಪ್ರೇಮಾ

ಕನ್ನಡ ಸಿನಿಮಾಗಳ ಜೊತೆ ಜೊತೆನೇ ತೆಲುಗು ಸಿನಿಮಾಗಳಲ್ಲೂ ಪ್ರೇಮಾ ನಟಿಸುತ್ತಿದ್ದರು. 2006ರ ಬಳಿಕ ಪ್ರೇಮಾ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆಗೊಳಿಸಿದ್ದರು. ಮದುವೆ ಬಳಿಕ ಸಿನಿಮಾಗೆ ಸಂಪೂರ್ಣ ಬ್ರೇಕ್ ಹಾಕಿದ್ದ ನಟಿ, 2009ರಿಂದ ಸಿನಿಮಾಗಳಿಂದ ದೂರನೇ ಉಳಿದಿದ್ದರು. 2017ರಲ್ಲಿ 8 ವರ್ಷಗಳ ಬಳಿಕ ಉಪೇಂದ್ರ ನಟಿಸಿದ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಆದರೆ, ಈ ಸಿನಿಮಾ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟ ಆಗಿರಲಿಲ್ಲ. ಇಲ್ಲಿಂದ ಮತ್ತೆ ಸೈಲೆಂಟ್ ಆಗಿದ್ದ ನಟಿಯೀಗ ಮತ್ತೆ 'ವೆಡ್ಡಿಂಗ್ ಗಿಫ್ಟ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಸಿನಿಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.

Actress Prema making comeback to films after 4 long years with wedding gift

ವೆಡ್ಡಿಂಗ್ ಗಿಫ್ಟ್‌ಗೆ ಅದ್ಧೂರಿ ಚಾಲನೆ

ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನು ವಿಕ್ರಂ ಪ್ರಭು ಎಂಬುವವರು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದ್ದು, ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೊಡಗು ನಟ ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ವೆಡ್ಡಿಂಗ್ ಗಿಫ್ಟ್ ಅಂತಿದ್ದ ಹಾಗೇ ಕೌಟುಂಬಿಕ ಚಿತ್ರ ಅನಿಸಬಹುದು. ಆದರೆ, ಇದು ಡಾರ್ಕ್ ಥ್ರಿಲ್ಲರ್ ಸಿನಿಮಾ.

Actress Prema making comeback to films after 4 long years with wedding gift

ಸೋನುಗೌಡಗೆ ಈ ಸಿನಿಮಾದಲ್ಲಿ ವಿಶಿಷ್ಟ ಪಾತ್ರ ಸಿಕ್ಕಿದೆ. "ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ ಎಂಬುದೇ ಸಿನಿಮಾ ಕಥೆ. ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು." ಅಂತಾರೆ ನಟಿ ಸೋನು ಗೌಡ.

More from Filmibeat

English summary
Senior Actress Prema last seen with Upendra starrer Upendra Matte Hutti Baa. After this film she again disappear from acting in films. Now she is making come back with Wedding Gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X