ಪೋಸ್ ಕೊಡೋದ್ರಲ್ಲಿ ಅಮ್ಮ-ಮಗಳಲ್ಲಿ ಯಾರು ಬೆಸ್ಟ್? ರಾಧಿಕಾ ಪಂಡಿತ್-ಆಯ್ರಾ ಯಶ್ ಫೋಟೊ ವೈರಲ್!

ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಇದೂವರೆಗೂ ರಾಧಿಕಾ ನಟಿಸಿದ ಸಿನಿಮಾಗಳಿಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಅದಕ್ಕೆ ಸಿನಿಮಾಗಳಿಂದ ಕೊಂಚ ದೂರವಿದ್ದರೂ, ಅಭಿಮಾನಿಗಳ ಸಂಖ್ಯೆ ಏನೂ ಕಮ್ಮಿಯಾಗಿಲ್ಲ.

ಮದುವೆ ಬಳಿಕ ರಾಧಿಕಾ ಪಂಡಿತ್ ಸಿನಿಮಾದಿಂದ ಕೊಂಚ ದೂರವೇ ಉಳಿದಿದ್ದಾರೆ. ಬಣ್ಣ ಹಚ್ಚಿ ವರ್ಷಗಳೇ ಆಗಿವೆ. ಆದರೆ, ಅಭಿಮಾನಿಗಳಿಂದ ದೂರ ಆಗಿಲ್ಲ. ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ.

Actress Radhika Pandit and daughter Ayra Yash Photo Goes on Viral

ಕೆಲವೊಮ್ಮೆ ತಮ್ಮದೇ ಫೋಟೊಗಳನ್ನು ಶೇರ್ ಮಾಡುತ್ತಾರೆ. ಮತ್ತೊಮ್ಮೆ ತಮ್ಮ ಮಗಳು ಆಯ್ರಾ ಯಶ್ ಜೊತೆ ಪ್ರತ್ಯಕ್ಷ ಆಗುತ್ತಾರೆ. ಈಗ ಕೂಡ ರಾಧಿಕಾ ಪಂಡಿತ್ ಹಾಗೂ ಆಯ್ರಾ ಇಬ್ಬರೂ ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಆ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಧಿಕಾ-ಆಯ್ರಾ ಯಶ್ ಫೋಟೊ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್‌ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರು ಶೇರ್ ಮಾಡಿಕೊಳ್ಳುವ ಒಂದೊಂದು ಫೋಟೊಗೂ ಲಕ್ಷ ಲೆಕ್ಕದಲ್ಲಿ ಲೈಕ್ಸ್ ಬರುತ್ತೆ. ಅಲ್ಲದೆ ರಾಧಿಕಾ ಪಂಡಿತ್ ಬಗ್ಗೆ ತಿಳಿದುಕೊಳ್ಳುವುದಕ್ಕೆ ಫ್ಯಾನ್ಸ್ ಕೂಡ ತುದಿಗಾಲಲ್ಲಿ ನಿಂತಿರುತ್ತಾರೆ. ಕೇವಲ 4 ಗಂಟೆಗಳ ಹಿಂದೆ ಮಗಳು ಆಯ್ರಾ ಜೊತೆ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಅದೇ ಫೋಟೊ ಈಗ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪೋಸ್ ಕೊಡೋದ್ರಲ್ಲಿ ಯಾರು ಬೆಸ್ಟ್ ?

ನಟಿ ರಾಧಿಕಾ ಪಂಡಿತ್ ಎಕ್ಸ್‌ಪ್ರೆಷನ್‌ಗೆ ಫ್ಯಾನ್ ಆಗಿರೋರು ಅದೆಷ್ಟೋ ಮಂದಿ. ಆದರೆ, ಈಗ ಶೇರ್ ಮಾಡಿಕೊಂಡಿರೋ ಫೋಟೊದಲ್ಲಿ ಮಗಳು ಆಯ್ರಾ ಕೂಡ ಫೋಸ್ ಕೊಟ್ಟಿದ್ದಾರೆ. ಇಬ್ಬರನ್ನು ನೋಡಿ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. " ಸೋ ಕ್ಯೂಟ್", " ಕ್ಯೂಟ್ ಅಮ್ಮ ಪ್ರಶಸ್ತಿಯನ್ನು ರಾಧಿಕಾ ಪಂಡಿತ್‌ಗೆ ಕೊಡಬೇಕು", ಹಾಗೇ "ಯಶ್ 19 ಅಪ್‌ಡೇಟ್ ಕೊಡಿಸಿ ಅತ್ತಿಗೆ" ಎಂದೂ ಕಮೆಂಟ್ ಮಾಡಿದ್ದಾರೆ.

ಪುತ್ರಿಗೂ ಇದೆ ದೊಡ್ಡ ಅಭಿಮಾನಿ ಬಳಗ

ಯಶ್, ರಾಧಿಕಾ ಪಂಡಿತ್‌ಗಷ್ಟ ಅಭಿಮಾನಿಗಳಿಲ್ಲ. ಪುತ್ರ ಆಯ್ರಾ ಯಶ್‌ಗೂ ಕೂಡ ದೊಡ್ಡ ಅಭಿಮಾನಿ ಬಳಗವಿದೆ. ಆಯ್ರಾ ಕೂಡ ಆಗಾಗ ಅಮ್ಮ ರಾಧಿಕಾ ಪಂಡಿತ್ ಜೊತೆ ಹಾಗೂ ತಂದೆ ಯಶ್ ಜೊತೆ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ ಆಗುತ್ತಲೇ ಇರುತ್ತಾರೆ. ಹೀಗಾಗಿ ಆಯ್ರಾ ಯಶ್‌ಗೂ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಸದ್ಯ ಹಂಚಿಕೊಂಡಿರೊ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾಗೆ ಮರಳುತ್ತಾರಾ ರಾಧಿಕಾ ಪಂಡಿತ್?

ರಾಧಿಕಾ ಪಂಡಿತ್ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ಅಭಿಮಾನಿಗಳ ಆಸೆ. ಆದರೆ, ಆಯ್ರಾ ಹಾಗೂ ಯಥರ್ವ್ ಇಬ್ಬರು ಮಕ್ಕಳ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಯಶ್ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ, ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

More from Filmibeat

English summary
Radhika Pandit and daughter Ayra Yash Photo Goes on Viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X