ಪ್ರೇಮಿಗಳ ಸೆಲೆಬ್ರೆಷನ್‌ಗೆ ಸಾಥ್ ಕೊಟ್ಟ ರಾಧಿಕಾ ಪಂಡಿತ್; "ಅಕ್ಕ ಸಿನಿಮಾ ಯಾವಾಗ" ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್‌ನ ಸಿಂಡ್ರೆಲ್ಲ ರಾಧಿಕಾ ಪಂಡಿತ್ ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಅಭಿಮಾನಿಗಳು ಅದೆಷ್ಟೇ ಬೇಡಿಕೆ ಇಟ್ಟರೂ ಅದ್ಯಾಕೋ ಸಿನಿಮಾದಲ್ಲಿ ನಟಿಸೋ ಮನಸ್ಸು ಮಾಡುತ್ತಿಲ್ಲ. ಹಾಗಂತ ತಮ್ಮ ಅಭಿಮಾನಿಗಳಿಂದ ಏನೂ ದೂರ ಆಗಿಲ್ಲ. ಸದಾ ಅವರೊಂದಿಗೆ ಸಂಪರ್ಕದಲ್ಲಿ ಇರುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ರಾಧಿಕಾ ಪಂಡಿತ್ ಸಿನಿಮಾದಿಂದ ದೂರು ಉಳಿದಿರೋದು ನಿಜ. ಹಾಗಂತ ಅವ್ರಿಗೆ ಇರೋ ಕ್ರೇಜ್ ಕಮ್ಮಿಯಾಗಿಲ್ಲ. ಸಿನಿಮಾಗೆ ಮತ್ತೆ ಕಮ್‌ಬ್ಯಾಕ್ ಮಾಡುವುದನ್ನು ಅವರ ಫ್ಯಾನ್ಸ್ ಎದುರು ನೋಡುತ್ತಲೇ ಇದ್ದಾರೆ. ಆದರೆ ಯಾಕೋ ಇನ್ನೋ ಯಾವುದೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ರಾಧಿಕಾ ಕಮ್‌ಬ್ಯಾಕ್ ಬಗ್ಗೆ ಹೇಳುತ್ತಿರುವುದಕ್ಕೂ ಒಂದು ಕಾರಣವಿದೆ.

Actress Radhika Pandit shared beautiful photos on the eve of Valentines Month

ಸಿನಿಮಾದಿಂದ ದೂರವಿದ್ದರೂ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ನಿನ್ನೆ (ಫೆಬ್ರವರಿ 1) ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ರಾಧಿಕಾ ಕಮ್‌ಬ್ಯಾಕ್ ಬಗ್ಗೆನೂ ಅಭಿಮಾನಿಗಳು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ರಾಧಿಕಾ ಪಂಡಿತ್‌ಗೆ ಹೊಸತೇನು ಅಲ್ಲ. ತಮ್ಮ ಅಭಿಮಾನಿಗಳಿಗೆ ಏನಾದರೂ ಹೇಳಬೇಕು ಅನಿಸಿದರೆ, ತಮ್ಮ ಫೋಟೊಗಳನ್ನು ಶೇರ್ ಮಾಡಿಕೊಂಡು, ಶುಭ ಕೋರುತ್ತಾರೆ. ನಿನ್ನೆ (ಫೆಬ್ರವರಿ 1) ಕೂಡ ಇಂತಹದ್ದೇ ಒಂದು ಉದ್ದೇಶವನ್ನು ಇಟ್ಟುಕೊಂಡು ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು.

ಫೆಬ್ರವರಿ ತಿಂಗಳು ಬಂತದ್ರೆ, ಪ್ರೇಮಿಗಳು ಅಲರ್ಟ್ ಆಗಿಬಿಡುತ್ತಾರೆ. ತಿಂಗಳ ಆರಂಭದಿಂದಲೇ ಸೆಲೆಬ್ರೆಟ್ ಮಾಡುವುದಕ್ಕೆ ರೆಡಿಯಾಗಿ ಬಿಡುತ್ತಾರೆ. ಹೀಗಾಗಿ ತಿಂಗಳ ಆರಂಭದ ದಿನವೇ ರಾಧಿಕಾ ಪಂಡಿತ್ ಪ್ರೇಮಿಗಳ ದಿನವನ್ನು ನೆನಪಿಸಿಕೊಂಡಂತಿದೆ. ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡು "ಪ್ರೇಮಿಗಳ ಮಾಸಕ್ಕೆ ಹಲೋ " ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

2019ರಲ್ಲಿ ತೆರೆಕಂಡಿದ್ದ 'ಆದಿ ಲಕ್ಷ್ಮಿ ಪುರಾಣ' ಸಿನಿಮಾವೇ ಕೊನೆ. ಆ ಸಿನಿಮಾ ಬಳಿಕ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚಿಲ್ಲ. ಹೀಗಾಗಿ ಮತ್ತೆ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡಬೇಕು ಅನ್ನುವುದು ಅವರ ಅಭಿಮಾನಿಗಳ ಆಸೆ. ಇದೂವರೆಗೂ 21 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಅದ್ಧೂರಿ, ಕಡ್ಡಿಪುಡಿ, ಬಹದ್ದೂರು, ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಐರಾ ಹಾಗೂ ಯಥರ್ವ್ ಎಂಬ ಮುದ್ದಾದ ಮಕ್ಕಳಿದ್ದು, ಅವರ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಿದರೂ ಮಾಡಬಹುದು. ಸದ್ಯ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಫೋಟೊಗಳಿಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

"ರಾಧೆ ಓ ರಾಧೆ ನಿನ್ನ ನೋಡಲು ಕಾದೆ. ನನ್ ಪೇಜ್ ಒಮ್ಮೆ ನೋಡ ಬಾರದೆ. ನೋಡಿ ಪೋಸ್ಟ್ ಲ್ಲೈಕ್ ಮಾಡಬಾರದೆ.. ಪ್ಲೀಸ್ ರಾಧೆ" ಎಂತ ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಯಾರಿಲ್ಲ ಯಾರಿಲ್ಲ.. ನಿನ್ನಂತೆ ಯಾರಿಲ್ಲ.. ನಿನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲ." ಹೇಳಿದ್ದಾರೆ. "ರಾಧೆ ಓ ರಾಧೆ ನಿಮಗಾಗಿ ಕಾದೆ.. ನೀವೊಮ್ಮೆ ಕಮೆಂಟ್‌ನ ನೋಡಬಾರದೆ, ನೋಡಿ ರಿಪ್ಲೈ ಮಾಡಬಾರದೇ" ಎಂದೆಲ್ಲ ಸಂದೇಶ ಕಳುಹಿಸಿದ್ದಾರೆ.

More from Filmibeat

English summary
Radhika Pandit shared photos for Valentine's Month:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X