ದರ್ಶನ್ 3 ಸಿನಿಮಾಗಳಲ್ಲಿ ಸಹಿ ಮಾಡಿದ್ದರೂ ರಾಗಿಣಿ ಕೈ ತಪ್ಪಿದ್ದೇಗೆ? ಈ ಪ್ರಾಜೆಕ್ಟ್ ಅನ್ನು ತಪ್ಪಿಸಿದವರು ಯಾರು?

ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಅಂತಲೇ ಫೇಮಸ್ ಆಗಿರುವ ನಟಿ ರಾಗಿಣಿ ದ್ವಿವೇದಿ. ಕನ್ನಡ ಚಿತ್ರರಂಗದಲ್ಲಿ ಎತ್ತರವಿರುವ ಕೆಲವೇ ಕೆಲವು ನಟಿಯರಲ್ಲಿ ರಾಗಿಣಿ ಕೂಡ ಒಬ್ಬರು. ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ರಾಗಿಣಿ ಹೈಟ್ ಬಗ್ಗೆನೇ ಹೆಚ್ಚು ಚರ್ಚೆಯಾಗಿತ್ತು. ಎತ್ತರದ ಹೀರೋಯಿನ್‌ ಸಿಗದೆ ಪರದಾಡುತ್ತಿದ್ದ ಸುದೀಪ್, ದರ್ಶನ್ ಅಂತಹ ಸ್ಟಾರ್ ಹೀರೋಗಳಿಗೆ ರಾಗಿಣಿ ಪರ್ಫೆಕ್ಟ್ ಮ್ಯಾಚ್ ಅಂದುಕೊಂಡಿದ್ದರು.

ಅದಕ್ಕೆ ತಕ್ಕಂತೆ ಎರಡನೇ ಸಿನಿಮಾದಲ್ಲಿಯೇ ಕಿಚ್ಚ ಸುದೀಪ್ ಜೊತೆ ನಟಿಸುವ ಅವಕಾಶಗಳು ಸಿಕ್ಕಿತ್ತು. 'ವೀರ ಮದಕರಿ' ಸಿನಿಮಾದಲ್ಲಿ ರಾಗಿಣಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದರು. ಕನ್ನಡ ಸಿನಿಮಾದಲ್ಲಿ ಒಂದರ ಹಿಂದೊಂದು ಅವಕಾಶಗಳು ಸಿಗುತ್ತಿದ್ದಂತೆ ಅಷ್ಟೇ ಬೇಗ ಕನ್ನಡವನ್ನೂ ಕಲಿತು ಅಚ್ಚರಿ ಮೂಡಿಸಿದ್ದರು. ಇಲ್ಲಿಂದ ರಾಗಿಣಿ ಪ್ರತಿಯೊಬ್ಬ ಕನ್ನಡಿಗರೂ ಗೊತ್ತು ಅನ್ನುವಷ್ಟು ಬೆಳೆದಿದ್ದಾರೆ.

Actress Ragini Dwivedi revealed why she didn t act with Darshan after signing three movies

ರಾಗಿಣಿ ದ್ವಿವೇದಿ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಒಂದಲ್ಲ ಎರಡಲ್ಲ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದರು. ಆದರೂ, ಆ ಮೂರು ಸಿನಿಮಾಗಳಲ್ಲಿ ರಾಗಿಣಿ ಕಾಣಿಸಿಕೊಳ್ಳಲೇ ಇಲ್ಲ. ಅಷ್ಟಕ್ಕೂ ಅಂತಹದ್ದೇನಾಯ್ತು? ಯಾಕೆ ನಟಿಸಲಿಲ್ಲ? ಅನ್ನೋದನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

ದರ್ಶನ್ ಹೈಟ್‌ಗೆ ರಾಗಿಣಿ ಪರ್ಫೆಕ್ಟ್ ಹೀರೋಯಿನ್ ಅನ್ನುವುದರಲ್ಲಿ ಡೌಟೇ ಇಲ್ಲ. ಒಂದ್ವೇಳೆ ದರ್ಶನ್ ಜೊತೆ ರಾಗಿಣಿ ಆ ಮೂರು ಸಿನಿಮಾಗಳಲ್ಲಿ ನಟಿಸಿದ್ದರೆ, ಇಬ್ಬರ ಅಭಿಮಾನಿಗಳಿಗೂ ಗ್ಯಾರಂಟಿ ಖುಷಿಯಾಗಿರುತ್ತಿತ್ತು. ದರ್ಶನ್ ನಟಿಸುತ್ತಿದ್ದ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದರೂ ಯಾಕೆ ನಟಿಸಲಿಲ್ಲ ಅನ್ನೋದು ರಾಗಿಣಿ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆದರೆ, ಆ ಸಿನಿಮಾಗಳು ಯಾವುವು? ಅನ್ನೋದನ್ನು ರಿವೀಲ್ ಮಾಡಿಲ್ಲ.

Actress Ragini Dwivedi revealed why she didn t act with Darshan after signing three movies

"ದರ್ಶನ್ ಅವರೊಂದಿಗೆ ನಾನು ಮೂರು ಸಿನಿಮಾ ಸಹಿ ಮಾಡಿ ಶೂಟ್ ಮಾಡಿಲ್ಲ. ಆ ಸಿನಿಮಾಗಳ ಹೆಸರನ್ನು ಹೇಳುವುದಕ್ಕೆ ನಾನು ಇಷ್ಟ ಪಡುವುದಿಲ್ಲ" ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ರಾಜೇಶ್ ಜೊತೆಗಿನ ಸಂದರ್ಶನದಲ್ಲಿ ರಾಗಿಣಿ ರಿವೀಲ್ ಮಾಡಿದ್ದಾರೆ.

ದರ್ಶನ್ ಜೊತೆ ಯಾಕೆ ಆ ಮೂರು ಸಿನಿಮಾಗಳಲ್ಲಿ ನಟಿಸಲಿಲ್ಲ? ಆ ಸಿನಿಮಾಗಳು ಕೈ ತಪ್ಪಿ ಹೋಗುವುದಕ್ಕೆ ಕಾರಣವೇನು? ಅನ್ನೋದನ್ನು ಹೇಳಿಕೊಂಡಿದ್ದಾರೆ. "ಯಾಕೆ ಸಿನಿಮಾ ಮಾಡಿಲ್ಲ ಅಂದರೆ, ಪಾಲಿಟಿಕ್ಸ್. ಅದಕ್ಕೆ ಆಂತರಿಕ ರಾಜಕೀಯ ಅಂತ ಹೇಳಬಹುದು. ಒಳಗೊಳಗೆ ಗೇಮ್ ಆಡೋರು. ಚೀಪ್ ಗಿಮಿಕ್ಸ್ ಮಾಡೋರು. ಕೆಲವರ ಬದುಕಿನ ಉದ್ದೇಶನೇ ಅದು. ಹಾಗೆಲ್ಲ ಮಾಡುವವರು ಇದ್ದಾರೆ. ನಿಮ್ಮ ಕೆಲಸವನ್ನು ಹೇಗೆ ಹಾಳು ಮಾಡೋದು. ಒಬ್ಬರು ಇನ್ನೊಬ್ಬರೊಂದಿಗೆ ಕೆಲಸ ಮಾಡಬಾರದು ಅಂತ ಮಾಡೋದು. ಅದೇ ಜೀವನ ಅವರದ್ದು" ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಹಾಗೇ ಚಿತ್ರರಂಗದ ಕೋ-ಸ್ಟಾರ್‌ಗಳ ಜೊತೆಗೆ ತನ್ನ ಸಂಬಂಧ ಚೆನ್ನಾಗಿದೆ ಎಂದೂ ಹೇಳಿಕೊಂಡಿದ್ದಾರೆ. "ನನ್ನ ಎಲ್ಲಾ ಸಹ ನಟರೊಂದಿಗೆ ನನ್ನ ಸಂಬಂಧ ಚೆನ್ನಾಗಿದೆ. ಹೀರೊಗಳು, ಅವರ ಕುಟುಂಬ, ಹೀರೋಯಿನ್ ಬಗ್ಗೆ ಬರೋದಾರೆ, ರಕ್ಷಿತಾ ಅವರೊಂದಿಗೆ ತುಂಬಾ ಒಳ್ಳೆಯ ಸಂಬಂಧವಿದೆ. ರಮ್ಯಾ ಅವರೊಂದಿಗೆ ಕಮ್ಯೂನಿಕೇಷನ್ ಇದೆ. ಪೂಜಾ ಗಾಂಧಿ ಅವರೊಂದಿಗೆ ಉತ್ತಮ ಬಾಂಡಿಂಗ್ ಇತ್ತು. ದರ್ಶನ್, ಸುದೀಪ್, ಅವರ ಪತ್ನಿ ಪ್ರಿಯಾ ಜೊತೆ ಉತ್ತಮ ಬಾಂಧವ್ಯವಿದೆ. ಉಪೇಂದ್ರ ಅವರೊಂದಿಗೆ ಎರಡು ಸಿನಿಮಾ ಮಾಡಿದ್ದೇನೆ. ಪ್ರಿಯಾಂಕಾ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ಪ್ರೇಮ್, ದಿಗಂತ್, ಐಂದ್ರಿಯಾ ರೇ ಅವರೊಂದಿಗೆ ಸಂಬಂಧ ಚೆನ್ನಾಗಿದೆ." ಎಂದಿದ್ದಾರೆ.

More from Filmibeat

English summary
Actress Ragini Dwivedi about Darshan and politics in Kannada industry:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X