ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ರಮ್ಯಾ
ರಮ್ಯಾ ಹಾಗೂ ಜಗ್ಗೇಶ್ ಟ್ವಿಟ್ಟರ್ ವಾರ್ ನಂತರ ಈಗ ಫೇಕ್ ಅಕೌಂಟ್ ಸಮರ ಶುರುವಾಗಿದೆ. ನಿನ್ನೆ ಸಂಜೆಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಫೇಕ್ ಅಕೌಂಟ್ ಕ್ರಿಯೆಟ್ ಮಾಡುವುದು ಹೇಗೆ ಮತ್ತು ಅದರಿಂದ ಆಗುವ ಉಪಯೋಗವೇನು ಎನ್ನುವುದರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಸಭೆಯಲ್ಲಿ ಭಾಗಿ ಆಗಿದ್ದವರೇ ವಿಡಿಯೋ ಮಾಡಿ ಸರಿಯಾದ ಸಮಯ ನೋಡಿ ರಿಲೀಸ್ ಮಾಡಿದ್ದಾರೆ. ಸದ್ಯ ವಿಡಿಯೋದಲ್ಲಿರುವ ಫೇಕ್ ಅಕೌಂಟ್ ಬಗ್ಗೆ ರಮ್ಯಾ ಮಾತನಾಡಿರುವುದನ್ನ ಅನೇಕರು ಒಪ್ಪಿದ್ದಾರೆ. ಇನ್ನೂ ಅನೇಕರು ಇದು ಎಡಿಟ್ ಮಾಡಿರುವ ವಿಡಿಯೋ ಅಂತಿದ್ದಾರೆ.
ವೈರಲ್ ಆಗಿರುವ ವಿಡಿಯೋ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ತಾವು ಯಾವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಾವುದನ್ನ ಎಡಿಟ್ ಮಾಡಲಾಗಿದೆ ಎನ್ನುವ ವಿಚಾರವನ್ನ ತಿಳಿಸಿದ್ದಾರೆ. ರಮ್ಯಾ ವಿಡಿಯೋ ಬಗ್ಗೆ ಏನೆಂದು ಟ್ವಿಟ್ ಮಾಡಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಮಾತಿಗೂ ವಿಡಿಯೋಗೂ ಸಂಬಂಧವಿಲ್ಲ
ರಮ್ಯಾ ವೈರಲ್ ಆಗಿರುವ ವಿಡಿಯೋ ಬಗ್ಗೆ ಮೂರು ಅಂಶಗಳನ್ನ ಹೇಳಿದ್ದಾರೆ. ವಿಡಿಯೋವನ್ನ ಸಂಪೂರ್ಣವಾಗಿ ಎಡಿಟ್ ಮಾಡಲಾಗಿದೆ. ನಾನು ಮಾತನಾಡುತ್ತಿರುವ ಮಾತಿಗೂ ಈಗ ಬಿಡುಗಡೆ ಆಗಿರುವ ವಿಡಿಯೋಗೂ ಸಂಬಂಧವೇ ಇಲ್ಲ ಎಂದಿದ್ದಾರೆ.

ಪ್ರಶ್ನೆಗೆ ಉತ್ತರಿಸುವಾಗ ತೆಗೆದಿರುವ ವಿಡಿಯೋ
ಸಭೆಯಲ್ಲಿ ನಾನು ನಕಲಿ ಅಕೌಂಟ್ ಮತ್ತು ಹೆಚ್ಚು ಅಕೌಂಟ್ ಗಳನ್ನ ಹೊಂದಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದೆ. ಅದನ್ನ ಬಿಟ್ಟು ಫೇಕ್ ಅಕೌಂಟ್ ಹೇಗೆ ಕ್ರಿಯೇಟ್ ಮಾಡುವುದು ಎಂದು ಹೇಳುತ್ತಿರಲಿಲ್ಲ.

ಅಧಿಕೃತ ಅಕೌಂಟ್ ಗಳನ್ನ ಬಳಸಬೇಡಿ
ಆ ವಿಡಿಯೋದಲ್ಲಿ ನಾನು ನಿಮ್ಮ ಅಭಿಪ್ರಾಯವನ್ನು ನಿಮ್ಮ ಖಾತೆಯಿಂದ ಟ್ವಿಟ್ ಮಾಡಿ, ಅಧಿಕೃತವಾಗಿರುವ ಯಾವುದೇ ಪಕ್ಷದ ಅಥವಾ ವ್ಯಕ್ತಿಗಳ ಅಕೌಂಟ್ ಹ್ಯಾಂಡಲ್ ಬಳಸಬೇಡಿ ಎಂದು ಹೇಳುತ್ತಿದೆ ಎಂದು ರಮ್ಯಾ ಟ್ವಿಟ್ ಮಾಡಿದ್ದಾರೆ.

ಮುಂದುವರೆಯುತ್ತಿದೆ ಟ್ವಿಟ್ ವಾರ್
ಒಟ್ಟಾರೆ ನಿನ್ನೆ ಸಂಜೆಯಿಂದ ಪ್ರಾರಂಭವಾಗಿರುವ ಟ್ವಿಟ್ಟರ್ ವಾರ್ ಹಾಗೆಯೇ ಮುಂದುವರೆಯುತ್ತಿದೆ. ರಮ್ಯಾ ಅಭಿಮಾನಿಗಳು ಹಾಗೂ ಜಗ್ಗೇಶ್ ಅಭಿಮಾನಿಗಳು ಪರಸ್ಪರ ವಾದ ಮಾಡುತ್ತಲೇ ಇದ್ದಾರೆ.


Click it and Unblock the Notifications











