ಅಪ್ಪುಗೆ ಹಾಸ್ಟೆಲ್ ಹುಡುಗರಿಂದ ಗೌರವ: ಮೋಹಕತಾರೆ ರಮ್ಯಾ ಹೇಳಿದ್ದೇನು?
ಇನ್ನು ಎರಡನೇ ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡುತ್ತಾರೆ. ಅಪ್ಪು ಹುಟ್ಟುಹಬ್ಬವನ್ನು ಹಿಂದೆಂದೂ ನೋಡಿರದ ಹಾಗೆ ಆಚರಣೆ ಮಾಡುತ್ತಾರೆ. ಇದೇ ವೇಳೆ 'ಜೇಮ್ಸ್' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಪುನೀತ್ ಅಭಿಮಾನಿಗಳು ಕಳೆದ ಒಂದು ತಿಂಗಳಿನಿಂದ ಈ ವಿಶೇಷ ದಿನವನ್ನು ವಿಭಿನ್ನವಾಗಿ ಸಂಭ್ರಮಿಸಲು ಮುಂದಾಗಿದ್ದಾರೆ. ಇದೇ ವೇಳೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಕೂಡ ಅಪ್ಪುಗೆ ಗೌರವ ಸೂಚಿಸಲು ವಿಡಿಯೋ ಒಂದನ್ನು ರಿಲೀಸ್ ಮಾಡಿದೆ.
Recommended Video

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡದ ಜೊತೆ ಅಪ್ಪು ಮೊದಲಿನಿಂದಲೂ ನಿಂತಿದ್ದರು. ಸಿನಿಮಾದ ಪೋಸ್ಟರ್ ರಿಲೀಸ್ ಅನ್ನು ವಿಭಿನ್ನವಾಗಿ ಮಾಡಿಕೊಟ್ಟಿದ್ದರು. ಪುನೀತ್ ಜೊತೆನೂ ಈ ತಂಡಕ್ಕೆ ವಿಶೇಷವಾದ ಬಾಂಧವ್ಯವನ್ನು ಹೊಂದಿತ್ತು. ಈ ಕಾರಣಕ್ಕೆ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಇದೇ ವಿಡಿಯೋವನ್ನು ಮೋಹಕತಾರೆ ರಮ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಪುನೀತ್‌ರಾಜ್‌ಕುಮಾರ್‌ರನ್ನು ನೆನಪಿಸಿಕೊಂಡಿದ್ದಾರೆ.

ಹಾಸ್ಟೆಲ್ ಹುಡುಗರ ಗೌರವಕ್ಕೆ ರಮ್ಯಾ ಸಾಥ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಅಪ್ಪು ಹುಟ್ಟುಹಬ್ಬಕ್ಕೆ ಎರಡು ದಿನ ಮುನ್ನವೇ 'ಅಪ್ಪು ವಿ ಮಿಸ್ ಯು' ಅನ್ನುವ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪುನೀತ್ ಅಭಿನಯಿಸಿದ ಸಿನಿಮಾಗಳ ಹಾಡುಗಳನ್ನು ಹಾಸ್ಟೆಲ್ ಹುಡುಗರು ಅಂತ್ಯಾಕ್ಷರಿ ಹಾಡುತ್ತಾ ಬಸ್‌ನಲ್ಲಲಿ ಪ್ರಯಾಣ ಮಾಡುತ್ತಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್‌ಗೆ ಗೌರವ ನೀಡಿದ್ದಾರೆ. ಇದೇ ವಿಡಿಯೋವನ್ನು ಮೋಹಕತಾರೆ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. " ಸದಾ ಹೊಳೆಯುವ ನಟ ಅಪ್ಪುಗೆ ಚಿಕ್ಕದೊಂದು ಗೌರವ" ಎಂದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ರಮ್ಯಾ ಬರೆದುಕೊಂಡಿದ್ದಾರೆ.

ಹುಡುಗರಿಗೆ ಅಪ್ಪು ಸಾಥ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಆರಂಭದ ದಿನದಿಂದಲೂ ಪುನೀತ್ ರಾಜ್‌ಕುಮಾರ್ ಸಿನಿಮಾ ತಂಡದೊಂದಿಗೆ ನಿಂತಿದ್ದರು. ಈ ಸಿನಿಮಾ ಪೋಸ್ಟರ್ ಲಾಂಚ್ ಮಾಡಿದ್ದೂ ಕೂಡ ಅಪ್ಪುನೇ. ಅಲ್ಲಿಂದ ಸಿನಿಮಾ ಚಿತ್ರೀಕರಣದ ಪ್ರತಿಯೊಂದು ಹಂತದಲ್ಲೂ ಪುನೀತ್ ರಾಜ್‌ಕುಮಾರ್ ಇಡೀ ತಂಡಕ್ಕೆ ಬೆಂಬಲ ನೀಡುತ್ತಲೇ ಇದ್ದರು. ಈ ಕಾರಣಕ್ಕೆ ಅಪ್ಪು ಜೊತೆ ಈ ಸಿನಿಮಾ ತಂಡ ವಿಶೇಷವಾದ ಸಂಬಂಧವನ್ನು ಹೊಂದಿದ್ದರು. ಹೀಗಾಗಿ ಅವರ ನೆನಪಿನಲ್ಲಿ ಹುಟ್ಟುಹಬ್ಬಕ್ಕೆಂದೇ ಈ ವಿಶೇಷ ವಿಡಿಯೋವನ್ನು ಶೂಟ್ ಮಾಡಿ ಬಿಡುಗಡೆ ಮಾಡಲಾಗಿದೆ.

ಎರಡು ಬಾರಿ ಡೇಟ್ ಕೊಟ್ಟಿದ್ದ ಅಪ್ಪು
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಟೈಟಲ್ ಲಾಂಚ್ ಮಾಡುವುದಕ್ಕೆ ಇಡೀ ಅಪ್ಪು ಭೇಟಿ ಮಾಡಿತ್ತು. ಆಗ ಇದೇ 'ಜೇಮ್ಸ್' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. "ಪುನೀತ್ ಕೂಡಲೇ ಅದೇ ಶೂಟಿಂಗ್ ಸ್ಪಾಟ್‌ಗೆ ಕರೆಸಿಕೊಂಡು ಟೈಟಲ್ ಲಾಂಚ್‌ನಲ್ಲಿ ವಿಡಿಯೋದಲ್ಲಿ ನಟಿಸಿದ್ದರು. ಆದರೆ, ಆ ವಿಡಿಯೋ ಸರಿಯಾಗಿ ಬಂದಿರಲಿಲ್ಲ. ಬಳಿಕ ಮತ್ತೆ ನಮ್ಮ ತಂಡವನ್ನು ಅವರ ಆಫೀಸ್‌ಗೆ ಕರೆಸಿಕೊಂಡು ಎರಡೂವರೆ ಗಂಟೆ ಟೈಮ್ ಕೊಟ್ಟು ಟೈಟಲ್ ಲಾಂಚ್ ವಿಡಿಯೋದಲ್ಲಿ ನಟಿಸಿದ್ದರು. ಈ ಸಹಾಯವನ್ನು ನಮ್ಮ ಚಿತ್ರತಂಡ ಎಂದಿಗೂ ಮರೆಯೋದಿಲ್ಲ." ಎನ್ನುತ್ತಾರೆ ನಿರ್ಮಾಪಕ ವರುಣ್.

ಅಪ್ಪು ನೆನಪಿನಲ್ಲೇ ಸಿನಿಮಾ ರಿಲೀಸ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಗುಲ್‌ಮೊಹರ್ ಫಿಲಂಸ್ ಹಾಗೂ ವರುಣ್ ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು,ಬಿಡುಗಡೆ ಸಜ್ಜಾಗಿದೆ. ಪುನೀತ್ ರಾಜ್‌ಕುಮಾರ್ ಅಂದು ಹೊಸಬರ ತಂಡಕ್ಕೆ ನೀಡಿದ ಬೆಂಬಲದಿಂದಲೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಇಡೀ ತಂಡ ಸಜ್ಜಾಗಿದೆ. ಸದ್ಯ ಈ ಹೊಸಬರ ತಂಡಕ್ಕೆ ಮೋಹಕ ತಾರೆ ರಮ್ಯಾ ಸಾಥ್ ಕೊಟ್ಟಿದ್ದಾರೆ.


Click it and Unblock the Notifications











