ಇನ್‌ಸ್ಟಾಗ್ರಾಂನಲ್ಲಿ ನಿಂದಿಸಿದ ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ರಮ್ಯಾ: ಸೈಬರ್ ಪೊಲೀಸರಿಗೆ ದೂರು!
ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಇಂದು ವಿಭಿನ್ನ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಕಾವ್ಯಾ ಶಾ ಅವರ ಮದುವೆಯಲ್ಲಿ ಕಾಣಿಸಿಕೊಂಡಿದ್ದ ರಮ್ಯಾ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಪೊಲೀಸ್ ಠಾಣೆಯಲ್ಲಿ ಮೆಟ್ಟಿಲೇರಿ ದೂರನ್ನೂ ದಾಖಲಿಸಿದ್ದಾರೆ.
ನಟಿ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರನ್ನು ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಂನಲ್ಲಿ ನಟಿ ರಮ್ಯಾಗೆ ನಿಂದನೆ ಮಾಡಿರುವ ಆರೋಪದ ಮೇಲೆ ವಿರುದ್ಧ ದೂರು ನೀಡಿದ್ದಾರೆ. ತಾವೇ ಸ್ವತಃ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲು ಮಾಡಿದ್ದಾರೆ.

ಸ್ಕ್ರೀನ್ ಶಾಟ್ ಅನ್ನೇ ಸಾಕ್ಷಿಯಾಗಿ ನೀಡಿದ ರಮ್ಯಾ
ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಅಪರೂಪ ಫೋಟೊಗಳು, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ನಿಂದನಾತ್ಮಕವಾಗಿ ಕೆಲವು ಪದಗಳನ್ನು ಹಾಕಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ನಿಂದಿಸಿಯ ವ್ಯಕ್ತಿ ಬಳಸಿದ ಭಾಷೆಯ ಸ್ಕ್ರೀನ್ ಶಾಟ್ ತೆಗೆದುಕೊಂಡು ಬಂದ ರಮ್ಯಾ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ನಿಂದಿಸಿದ ವ್ಯಕ್ತಿ ಯಾರು?
ಮೋಹಕ ತಾರೆ ರಮ್ಯಾ ಸೈಬರ್ ಪೊಲೀಸರಿಗೆ ದೂರನ್ನು ನೀಡಿದ್ದೇನೋ ನಿಜ. ಆದರೆ, ಮೋಹಕ ತಾರೆಯನ್ನೇ ನಿಂದಿಸುತ್ತಿರುವ ಆ ವ್ಯಕ್ತಿ ಯಾರು? ಎಂಬ ಕುತೂಹಲವಿದ್ದೇ ಇರುತ್ತೆ. ಆದರೆ, ಆ ವ್ಯಕ್ತಿ ಯಾರು? ಎಂಬ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ಸೈಬರ್ ಪೊಲೀಸರು ಕೂಡ ರಮ್ಯಾ ನೀಡಿದ ದೂರನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಎಫ್‌ಐಆರ್ ಕೂಡ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಮ್ಯಾ ಫುಲ್ ಆಕ್ಟಿವ್
ರಾಜಕೀಯ ಹಾಗೂ ಸಿನಿಮಾ ಎರಡರಿಂದೂ ದೂರ ಉಳಿದಿರುವ ರಮ್ಯಾ ಇತ್ತೀಚೆಗೆ ಕಾಂಗ್ರೆಸ್ ಮುಖಂಡರ ವಿರುದ್ಧವೇ ತಿರುಗಿಬಿದ್ದರು. ಕೆಲವು ದಿನಗಳ ಹಿಂದೆ ಎಂ ಬಿ ಪಾಟೀಲ್ ಹಾಗೂ ಸಚಿವ ಸಿ ಎನ್ ಅಶ್ವಥ್ ನಾರಾಯಣ ಭೇಟಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಆಗ ಡಿ ಕೆ ಶಿವಕುಮಾರ್ ನೀಡಿದ ಹೇಳಿಕೆಗೆ ರಮ್ಯಾ ಪ್ರತಿಕ್ರಿಯಿಸಿದ್ದರು. ಆಗ ಕಾಂಗ್ರೆಸ್ ಯುವ ನಾಯಕ ನಲಪಾಡ್ ಕೂಡ ಅಖಾಡಕ್ಕಿಳಿದಿದ್ದರು. ಈ ವೇಳೆ ರಮ್ಯಾ ಹಾಗೂ ನಲಪಾಡ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾದ-ವಿವಾದ ನಡೆದಿತ್ತು. ಅಲ್ಲಿಂದ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ.

ರಾಂಗ್ ಆಗಿದ್ದ ಮೋಹಕತಾರೆ
ಮೋಹಕತಾರೆ ರಮ್ಯಾ ಕಾಂಗ್ರೆಸ್ ಪಕ್ಷದಲ್ಲಿ ಸೋಶಿಯಲ್ ಮೀಡಿಯಾವನ್ನು ನಿರ್ವಹಿಸಿದ ಅನುಭವವಿದೆ. ಆದರೆ, ಕೆಲವು ದಿನಗಳು ಈ ಎಲ್ಲದರಿಂದ ಹೊರಗುಳಿದಿದ್ದರು. ಈ ಮತ್ತೆ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಆಗಿದ್ದು, ರಮ್ಯಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ವೇಳೆ ರಾಜ್ಯ ನಾಯಕತ್ವದ ವಿರುದ್ಧವೂ ಕಿಡಿಕಾರಿದ್ದರು. ಆಗ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು.


Click it and Unblock the Notifications











