ಒಂದು ಕೆಜಿ ಚಿನ್ನ ಸಾಗಿಸಿದರೆ ರನ್ಯಾಗೆ ಸಿಗುತ್ತಿದ್ದ ಕಮಿಷನ್ ಎಷ್ಟು? 40 ಬಾರಿ ದುಬೈ ಪ್ರವಾಸ.. ಸಾಗಿಸಿದ್ದು ಎಷ್ಟು ಕೆಜಿ ಗೋಲ್ಡ್

ಕಿಚ್ಚನ 'ಮಾಣಿಕ್ಯ' ಸಿನಿಮಾದ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಅಂದುಕೊಂಡಂತೆ ಇಲ್ಲ. ಈ ಕೇಸ್ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇರುವಂತೆ ಗೋಚರವಾಗಿತ್ತಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.8 ಕೆಜಿ ಚಿನ್ನದೊಂದಿಗೆ ಸಿಕ್ಕಿ ಬಿದ್ದ ನಟಿಯ ಬಗ್ಗೆ ರೋಚಕ ಸಂಗತಿಗಳು ಹೊರಬೀಳುತ್ತಿವೆ. ದಿನದಿಂದ ದಿನಕ್ಕೆ ಹೊಸ ವಿಷಯ ರಿವೀಲ್ ಆಗುತ್ತಿದೆ.

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮಾಡುತ್ತಿದೆ. ಇದರೊಂದಿಗೆ ಸಿಬಿಐ ಕೂಡ ಸೇರಿಕೊಂಡಿದ್ದು, ಮೊದಲ ಡಿಆರ್‌ಐ ತನಿಖೆಯನ್ನು ನಡೆಸುತ್ತಿದೆ. ಈ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ರನ್ಯಾ ರಾವ್ ಕೆಲವು ಮಹತ್ವದ ಸಂಗತಿಗಳನ್ನು ತಿಳಿಸಿದ್ದಾರೆಂದು ವರದಿಗಳಾಗಿವೆ.

Actress Ranya Rao paid 3 8 lakhs per kg commission for the gold smuggling report

ಅದರಲ್ಲಿ ರನ್ಯಾ ರಾವ್ ಒಂದು ಕೆಜಿ ಗೋಲ್ಡ್ ಅನ್ನು ಸಾಗಾಟ ಮಾಡುವುದಕ್ಕೆ ಎಷ್ಟು ಕಮಿಷನ್ ಪಡೆಯುತ್ತಿದ್ದರು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ. ಇದೂವರೆಗೂ ಎಷ್ಟು ಕೆಜಿ ಚಿನ್ನವನ್ನು ಸಾಗಾಟ ಮಾಡಿದ್ದಾರೆ? ಅದರಿಂದ ಅವರಿಗೆ ಸಿಕ್ಕಿರುವ ಕಮಿಷನ್ ಎಷ್ಟು? ಅನ್ನೋದು ವರದಿಯಾಗಿದ್ದು, ಈ ಕಮಿಷನ್ ಮೊತ್ತವನ್ನು ಕೇಳಿ ಡಿಆರ್‌ಐ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ರನ್ಯಾ ಸಿಗುತ್ತಿದ್ದ ಕಮಿಷನ್ ಎಷ್ಟು?

ದುಬೈನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆ ರನ್ಯಾ ರಾವ್ ಬಳಿ 14.8 ಕೆಜಿ ಚಿನ್ನ ಸಿಕ್ಕಿತ್ತು. ಅದರ ಬೆಲೆ ಸುಮಾರು 15 ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿತ್ತು. ಅಸಲಿಗೆ ದುಬೈನಿಂದ ತಂದ ಚಿನ್ನವನ್ನು ರನ್ಯಾ ರಾವ್ ಯಾರಿಗೆ ಕೊಡುತ್ತಿದ್ದರು. ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರು ಅನ್ನೋದು ಇನ್ನೂ ತನಿಖೆಯಿಂದ ಹೊರಬೀಳಬೇಕಿದೆ. ಆದರೆ. ರನ್ಯಾ ಒಂದು ಕೆಜಿ ಚಿನ್ನ ಕಳ್ಳಸಾಗಾಟಕ್ಕೆ ಎಷ್ಟು ಕಮಿಷನ್ ಪಡೆಯುತ್ತಿದ್ದರು ಅನ್ನೋದು ನಿಬ್ಬೆರಗಾಗಿಸುತ್ತೆ.

Take a Poll

ಫಸ್ಟ್ ನ್ಯೂಸ್ ವರದಿಯ ಪ್ರಕಾರ, ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಒಂದು ಕೆಜಿ ಚಿನ್ನವನ್ನು ಸಾಗಾಟ ಮಾಡಿದರೆ, 3.80 ಲಕ್ಷ ರೂಪಾಯಿ ಕಮಿಷನ್ ಪಡೆಯುತ್ತಿದ್ದರು. ಹಾಗೆ ಇದೂವರೆಗೂ ರನ್ಯಾ ರಾವ್ ಸುಮಾರು 40 ಬಾರಿ ದುಬೈಗೆ ಪ್ರಯಾಣ ಮಾಡಿದ್ದು, 520 ಕೆಜಿ ಚಿನ್ನವನ್ನು ಸಾಗಿಸಿದ್ದಾರೆ ಎಂದು ಹೇಳಲಾಗಿದೆ. ಒಂದು ಕೆಜಿಯಂತೆ 520 ಕೆಜಿ ಚಿನ್ನ ಸಾಗಿಸಿದ್ದರೆ, 19 ಕೋಟಿ 76 ಲಕ್ಷ ಕಮಿಷನ್ ಪಡೆದಿರುವ ಸಾಧ್ಯತೆಯಿದೆ ಎಂದು ಅಂದಾಜು ಲೆಕ್ಕ ಹಾಕಬಹುದು. ಆದರೆ, ಈ ಬಗ್ಗೆ ಡಿಆರ್‌ಐ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

Actress Ranya Rao paid 3 8 lakhs per kg commission for the gold smuggling report

ಪೊಲೀಸ್ ಅಧಿಕಾರಿಗಳ ಪಾತ್ರವಿದ್ಯಾ?

ಕಂದಾಯ ಗುಪ್ತಚರ ನಿರ್ದೇಶನಾಲಯದ ತನಿಖೆ ವೇಳೆ ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಪೊಲೀಸರ ಕೈವಾಡವಿದೆ ಎಂದು ರನ್ಯಾ ರಾವ್ ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ. ಇನ್ನು ಡಿಆರ್‌ಐ ಜೊತೆಗೆ ಸಿಬಿಐ ಅಧಿಕಾರಿಗಳು ಕೂಡ ಈ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ. ಡಿಆರ್‌ಐ ಹಾಗೂ ಸಿಬಿಐ ಎರಡೂ ಸಂಸ್ಥೆಗಳು ಜೊತೆಯಲ್ಲಿ ತನಿಖೆ ಮಾಡಲಿದೆ ಎಂದೂ ಹೇಳಲಾಗುತ್ತಿದೆ.

ಈಗಾಗಲೇ ರನ್ಯಾ ರಾವ್ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿಯನ್ನು ಇಟ್ಟುಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಈ ಗೋಲ್ಡ್ ಸ್ಮಗ್ಲಿಂಗ್ ಹಿಂದೆ ಇರುವವರಿಗೆ ಬಲೆ ಬೀಸಲಾಗಿದೆ. ಈಗಾಗಲೇ ಏರ್‌ಪೋರ್ಟ್ ಸಿಬ್ಬಂದಿ, ಟ್ರಾವೆಲ್ ಏಜೆನ್ಸಿ ಸೇರಿದಂತೆ ರನ್ಯಾ ರಾವ್ ಸಂಪರ್ಕದಲ್ಲಿ ಇದ್ದವರ ಹಿಂದೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಆದರೆ, ಡಿಆರ್‌ಐ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

More from Filmibeat

English summary
Actress Ranya Rao paid 3.8 lakhs per kg commission for the gold smuggling report
Read more about: controversy case ranya rao
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X