ರಣ್‌ಬೀರ್ ಕಪೂರ್‌ಗೆ ಕಿಸ್ ಮಾಡಲು ರಶ್ಮಿಕಾ ಒಪ್ಪಿದ್ದೇಕೆ? 'ಎನಿಮಲ್' ಬಗ್ಗೆ ಏನಂತಾರೆ 'ಗೀತಾಂಜಲಿ'

ರಶ್ಮಿಕಾ ಮಂದಣ್ಣ ಭಾರತದಾದ್ಯಂತ ಫೇಮಸ್ ಆಗಿದ್ದಾರೆ. ನ್ಯಾಷನಲ್ ಕ್ರಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗು, ತಮಿಳು ಅಷ್ಟೇ ಅಲ್ಲದೆ ಹಿಂದಿ ಭಾಷೆಯಲ್ಲಿಯೂ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುತ್ತಿರೋದು ಗೊತ್ತಿದೆ. ರಣ್‌ಬೀರ್ ಕಪೂರ್ ನಟಿಸಿರುವ 'ಎನಿಮಲ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರಗಡ್ ಪಾತ್ರದಲ್ಲಿ ನಟಿಸಿದ್ದಾರೆ.

ತೆರೆಮೇಲೆ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಇಬ್ಬರ ಕೆಮಿಸ್ಟ್ರಿ ಬಗ್ಗೆ ಟೀಸರ್ ರಿಲೀಸ್ ಆದಲ್ಲಿಂದಲೂ ಚರ್ಚೆಯಾಗುತ್ತಲೇ ಇದೆ. ಅದರಲ್ಲೂ ಕಿಸ್ಸಿಂಗ್ ಸೀನ್ ನೋಡಿದ ಮೇಲೆ ರಶ್ಮಿಕಾರನ್ನು ಟ್ರೋಲ್ ಮಾಡಿದ್ದು ಇದೆ. ಅದ್ಯಾವುದಕ್ಕೂ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಈಗ ಸಿನಿಮಾ ಪ್ರಚಾರಕ್ಕೆ ಅಂತ ಬೆಂಗಳೂರಿಗೆ ಬಂದಿರೋ ರಶ್ಮಿಕಾಗೆ ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನೆ ಎದುರಾಗಿತ್ತು.

Actress Rashmika Mandanna reacted on kissing scene in Animal movie in Bengaluru

ಸಿನಿಮಾದಲ್ಲಿ ಕಿಸ್ಸಿಂಗ್ ಅನ್ನು ಹೇಗೆ ಫ್ರೇಮ್ ಮಾಡುತ್ತೀರಾ ಅಂತ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ರಶ್ಮಿಕಾ ಮಂದಣ್ಣ ನಿರ್ದೇಶಕರ ಕಡೆ ಬೆರಳು ಮಾಡಿದ್ದಾರೆ. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಯಾಕೆ ಬೇಕಿತ್ತು? ತಾನೇನು ಆ ಸೀನ್ ಮಾಡಲು ಒಪ್ಪಿಕೊಂಡೆ ಅನ್ನೋದನ್ನು ರಶ್ಮಿಕಾ 'ಎನಿಮಲ್' ಪ್ರೀ ರಿಲೀಸ್ ಪ್ರೆಸ್‌ಮೀಟ್‌ನಲ್ಲಿ ರಿವೀಲ್ ಮಾಡಿದ್ದಾರೆ.

"ಕಿಸ್ಸಿಂಗ್ ಸೀನ್ ಪ್ರೀತಿಯ ಒಂದು ಸಾಧನ"

ಸಿನಿಮಾದಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ರಶ್ಮಿಕಾ ಕಾರಣ ಕೊಟ್ಟಿದ್ದಾರೆ. ಕಿಸ್ಸಿಂಗ್ ಸೀನ್ ಅನ್ನೋದು ನಿರ್ದೇಶಕರು ತಮ್ಮ ಶೈಲಿಯಲ್ಲಿ ಪ್ರೀತಿಯ ಕಥೆಯನ್ನು ಹೇಳುವುದಕ್ಕೆ ಇರುವ ಸಾಧನಾ ಎಂದಿದ್ದಾರೆ.

"ಕಿಸ್ಸಿಂಗ್ ಸೀನ್ ಅನ್ನೋದು ನಿರ್ದೇಶಕರ ಮೇಲೆ ನಿರ್ಧಾರ ಆಗಿದೆ. ಕಿಸ್ ಸೀನ್ ಅನ್ನೋದು ನಿರ್ದೇಶಕರಿಗೆ ಒಂದು ಸ್ಟೋರಿಯನ್ನು ಹೇಳುವುದಕ್ಕೆ ಇರುವ ಒಂದು ಸಾಧನ. ನಿರ್ದೇಶಕರು ಏನು ಅಂದುಕೊಂಡಿದ್ದಾರೋ ಅದನ್ನು ನಾವು ಎಷ್ಟು ಅದ್ಭುತವಾಗಿ ನಟಿಸಿ ತೋರಿಸುತ್ತೇವೆಯೋ ಅದು ಇಲ್ಲಿ ಮುಖ್ಯ ಆಗುತ್ತೆ. ಇದು ನಿರ್ದೇಶಕರ ಮೇಲೆ ನಾವು ಇಟ್ಟಿರುವ ನಂಬಿಕೆ. ಇಲ್ಲ ನಿರ್ದೇಶಕರಿಗೆ ಇದು ಸರಿ ಇದೆಯೋ? ಇಲ್ಲವೋ? ನಾವು ಕೇಳಬಹುದು ಅಷ್ಟೇ?" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Actress Rashmika Mandanna reacted on kissing scene in Animal movie in Bengaluru

"ಕಿಸ್ಸಿಂಗ್ ಸೀನ್ ಬೇಕು ಅಂದ್ರೆ ಮಾಡ್ಬೇಕು"

ಕಿಸ್ಸಿಂಗ್ ಸೀನ್‌ನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗಿತ್ತು. ಕೆಲವರು ರಶ್ಮಿಕಾ ಮಂದಣ್ಣಗೆ ಬೆಂಬಲ ಸೂಚಿಸಿದ್ದರು. ಬೋಲ್ಡ್ ಸೀನ್‌ನಲ್ಲಿ ನಟಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದ್ದರು. ಮತ್ತೆ ಕೆಲವು ಟ್ರೋಲ್ ಮಾಡಿದ್ದರು. ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.

"ನಿರ್ದೇಶಕರಿಗೆ ಅದು ಬೇಕು ಅಂದರೆ, ನಾವು ಮಾಡಬೇಕು. ಹೀಗೆ ಮಾಡುವುದರಿಂದ ಸಿನಿಮಾ ಮ್ಯಾಸಿವ್ ಹಿಟ್ ಆಗುತ್ತೆ ಅಂತ ಮಾಡಿದ್ದಲ್ಲ. ನಿರ್ದೇಶಕರಿಗೆ ಇದು ಬೇಕು ಅಂದಾಗ ಮಾಡುತ್ತೇವೆ. ನಿರ್ದೇಶಕರ ನಿರ್ಧಾರವನ್ನು ಕಣ್ಮುಚ್ಚಿ ಒಪ್ಪಿಕೊಳ್ಳುತ್ತೇವೆ. ಅದನ್ನೇ ನಾನು ಮಾಡಿದ್ದೇನೆ." ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

'ಎನಿಮಲ್' ಜೊತೆ ಗೀತಾಂಜಲಿ

'ಅರ್ಜುನ್ ರೆಡ್ಡಿ', 'ಕಬೀರ್ ಸಿಂಗ್' ಸಿನಿಮಾ ನಿರ್ದೇಶಿಸಿರುವ ಸಂದೀಪ್ ರೆಡ್ಡಿ ವಂಗಾ 'ಎನಿಮಲ್‌'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೂ ಕೂಡ ರಗಡ್ ಸಿನಿಮಾ. ಲವರ್ ಬಾಯ್ ಆಗಿ ಕಂಡಿದ್ದ ರಣ್‌ಬೀರ್ ಕಪೂರ್ ಈ ಸಿನಿಮಾ ಮೂಲಕ ರಗಡ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಷ್ಟೇ ರಗಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

"ನಾನು ಮಾಡುತ್ತಿರುವ ಗೀತಾಂಜಲಿ ಪಾತ್ರ ತುಂಬಾನೇ ಸುಂದರವಾಗಿ, ರಗಡ್ ಆಗಿದೆ. ಯಾವುದೇ ಶುಗರ್ ಕೋಟಿಂಗ್, ಫಿಲ್ಟರ್ ಹಾಕದೆ ರಿಯಲ್ ಆಗಿದೆ. ಇದೂವರೆಗೂ ನಾನು ಮಾಡಿರುವ ಅತ್ಯಂತ ಅದ್ಭುತವಾದ ಪಾತ್ರ. ಇದು ಪ್ರೇಕ್ಷಕರಿಗೆ ಪ್ರೀತಿಯನ್ನು ತಿಳಿಸುವ ಸಂದೀಪ್ ಸರ್ ಅವರ ಒಂದು ವಿಧಾನ." ಎಂದು ತನ್ನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

More from Filmibeat

English summary
Rashmika Mandanna reacted on kissing scene in Animal movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X