ಫೇಕ್ ಫೋಟೊ ಸೃಷ್ಟಿಸಿದವರಿಗೆ ರುಕ್ಮಿಣಿ ವಸಂತ್ ವಾರ್ನಿಂಗ್; ಪೋಸ್ಟ್‌ನಲ್ಲಿ ಏನಿದೆ?

ಕಳೆದ ಕೆಲವು ದಿನಗಳಿಂದ ನಟಿ ರುಕ್ಮಿಣಿ ವಸಂತ್ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ರುಕ್ಮಿಣಿ ವಸಂತ್ ಬಿಕಿನಿ ಧರಿಸಿರುವ ಫೋಟೋಗಳು ಹಾಗೂ ವಿಡಿಯೋಗಳು ಕಳೆದ ಕೆಲವು ದಿನಗಳಿಂದ ವೈರಲ್ ಆಗಿದ್ದವು. ಇವುಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ರುಕ್ಮಿಣಿ ವಸಂತ್ ಅವರ ಫೋಟೊಗಳು ಹೌದೋ ಅಲ್ಲವೋ? ನಂಬಬೇಕೋ ಬೇಡವೋ ಅಂತ ಗೊಂದಲಕ್ಕೆ ಬಿದ್ದಿದ್ದರು. ಈ ಫೋಟೊಗಳ ಬಗ್ಗೆ ಖುದ್ದು ರುಕ್ಮಿಣಿ ವಸಂತ್ ಕ್ಲಾರಿಟಿ ಕೊಟ್ಟಿದ್ದಾರೆ. ಜೊತೆಗೆ ಈ ಕೃತ್ಯದಲ್ಲಿ ಭಾಗಿಯಾದವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಬ್ಯುಸಿಯಾಗಿದ್ದಾರೆ. ಇವರ ಕೈಯಲ್ಲೀಗ ಬಿಗ್ ಬಜೆಟ್ ಸಿನಿಮಾಗಳಿವೆ. ಅವುಗಳ ಶೂಟಿಂಗ್‌ನಲ್ಲಿ ನಿರತರಾಗಿರುವ ರುಕ್ಮಿಣಿ ವಸಂತ್‌ಗೆ ಶಾಕ್ ಒಂದು ಎದುರಾಗಿತ್ತು. ಕಿಡಿಗೇಡಿಗಳು ಎಐ ತಂತ್ರಜ್ಞಾನವನ್ನು ಬಳಸಿ ರುಕ್ಮಿಣಿ ವಸಂತ್ ಅವರ ಬಿಕಿನಿ ಫೋಟೊಗಳನ್ನು ಸೃಷ್ಟಿಸಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದರು.

Actress Rukmini Vasanth gave clarity on her fake video and images circulating in internet

ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದವು. ನೆಟ್ಟಿಗರು ತಮ್ಮ ಕಣ್ಣುಗಳನ್ನೇ ತಾವೇ ನಂಬದಾಗಿದ್ದರು. ಕೆಲವರಿಗೆ ಇದು ಎಐ ತಂತ್ರಜ್ಞಾನವನ್ನು ಬಳಸಿ ಮಾಡಿದ ವಿಡಿಯೋ ಹಾಗೂ ಫೋಟೊ ಅನ್ನೋದು ಅರಿವಿಗೆ ಬಂದಿತ್ತು. ಅದ್ಯಾವಾಗ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದವೋ ಕೂಡಲೇ ನಟಿ ರುಕ್ಮಿಣಿ ವಸಂತ್ ತನ್ನ ಎಕ್ಸ್ ಖಾತೆಯಲ್ಲಿ ಕ್ಲಾರಿಟಿ ಜೊತೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ರುಕ್ಮಿಣಿ ವಸಂತ್ ಮಾಡಿದ ಫೋಟೊದಲ್ಲಿ ಏನಿದೆ ಎಂದು ನೋಡುವುದಾರೇ,

ಎಐ ತಂತ್ರಜ್ಞಾನಕ್ಕೆ ನಟಿಯರು ಸಿಕ್ಕಿಕೊಳ್ಳುತ್ತಿರುವುದು ರುಕ್ಮಿಣಿ ವಸಂತ್ ಮೊದಲೇನಲ್ಲ. ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಆ ವೇಳೆ ಇಡೀ ಭಾರತೀಯ ಚಿತ್ರರಂಗ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದರು. ಈಗ ಕಿಡಿಗೇಡಿಗಳು ರುಕ್ಮಿಣಿ ವಸಂತ್ ಅವರ ಫೇಕ್ ವಿಡಿಯೋ ಹಾಗೂ ಪೋಟೊಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Also Read
ನಟಿ ರುಕ್ಮಿಣಿ ವಸಂತ್‌ಗೆ ಕಿಡಿಗೇಡಿಗಳ ಕಾಟ; ಅಭಿಮಾನಿಗಳ ಅಸಮಾಧಾನ
ನಟಿ ರುಕ್ಮಿಣಿ ವಸಂತ್‌ಗೆ ಕಿಡಿಗೇಡಿಗಳ ಕಾಟ; ಅಭಿಮಾನಿಗಳ ಅಸಮಾಧಾನ

ಇದು ತನ್ನ ಅವರಿಗೆ ಬರುತ್ತಿದ್ದಂತೆ ರುಕ್ಮಿಣಿ ವಸಂತ್ ಎಕ್ಸ್‌ ಖಾತೆಯಲ್ಲಿ ಎಚ್ಚರಿಕೆಯ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. "ನನ್ನದು ಎಂದು ಹೇಳಲಾಗುತ್ತಿರುವ ಕೆಲವು ಎಐ ಜನರೇಟೆಡ್ ನಕಲಿ ಫೋಟೋಗಳು ಅಂತರ್ಜಾಲದಲ್ಲಿ ಹರಡುತ್ತಿರುವುದು ನನ್ನ ಮತ್ತು ನನ್ನ ತಂಡದ ಗಮನಕ್ಕೆ ಬಂದಿದೆ. ಈ ಫೋಟೊಗಳು ಸಂಪೂರ್ಣವಾಗಿ ನಕಲಿ ಹಾಗೂ ಸೃಷ್ಟಿ ಮಾಡಿದ್ದು. ಈ ಫೋಟೊಗಳು ರಿಯಲ್ ಅಲ್ಲ ಎಂದು ನಾನು ನಿಮಗೆ ಸ್ಪಷ್ಟಪಡಿಸುತ್ತಿದ್ದೇನೆ. ಇಂತಹ ಫೋಟೊಗಳನ್ನು ಸೃಷ್ಟಿಸುವುದು ಹಾಗೂ ಅದನ್ನು ಹಂಚಿಕೊಳ್ಳುವುದು ಬೇಜವಾಬ್ದಾರಿ ಕೆಲಸ ಹಾಗೂ ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆ ಆಗಿದೆ." ಎಂದು ನಟಿ ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ.

ಹಾಗೇ "ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಫೇಕ್ ಫೋಟೋಗಳನ್ನು ಸೃಷ್ಟಿಸಿದವರು ಹಾಗೂ ಅದನ್ನು ಹರಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಾಗೇ ಸೈಬರ್ ಕ್ರೈಮ್‌ಗೆ (Cybercrime) ದೂರನ್ನು ನೀಡುತ್ತೇವೆ. ಜನರು ಯಾರೂ ಇಂತಹ ನಕಲಿ ಫೋಟೊಗಳನ್ನು ಹಂಚಿಕೊಳ್ಳಬಾರದು. ಹಾಗೇ ಕಂಟೆಂಟ್‌ಗಳ ಜೊತೆ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ." ಎಂದು ರುಕ್ಮಿಣಿ ವಸಂತ್ ಎಚ್ಚರಿಕೆ ಕೊಟ್ಟಿದ್ದಾರೆ.

English summary
Actress Rukmini Vasanth gave clarity on her fake video and images circulating in internet. "We are taking this matter seriously and initiating the necessary legal and cybercrime action against those involved in creating and spreading these images" she said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X