ಕನ್ನಡ ಚಿತ್ರರಂಗದಿಂದ 'ಮೊನಾಲಿಸಾ' ನಟಿ ಸದಾ ದೂರವಾಗಿದ್ದೇಕೆ? ನಟಿ ಕೊಟ್ಟ ಕಾರಣವೇನು?

'ಜಯಂ' ಸಿನಿಮಾ ಮೂಲಕ ಟಾಲಿವುಡ್‌ಗೆ ಇಬ್ಬರು ಸ್ಟಾರ್‌ಗಳ ಪರಿಚಯ ಆಗಿತ್ತು. ಅವರಲ್ಲಿ ಒಬ್ಬರು ಸದಾ ಮತ್ತೊಬ್ಬರು ನಿತಿನ್. ಸದಾ ಮೊದಲ ದಿನದಿಂದಲೇ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿಬಿಟ್ಟರು. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಅದರಲ್ಲೂ 2002ರಿಂದ ಸುಮಾರು ಐದಾರು ವರ್ಷ ತೆಲುಗು ಮಂದಿಯ ಫೇವರಿಟ್ ನಟಿಯಾಗಿದ್ದರು.

ಇದೇ ವೇಳೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ 'ಮೊನಾಲಿಸಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ನಟಿ ಸದಾ ಕಾಲಿಟ್ಟಿದ್ದರು. ಅದಾಗಲೇ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಸದಾ ಕನ್ನಡಕ್ಕೆ ಬಂದಾಗ ರಾಜ ಮರ್ಯಾದೆ ಸಿಕ್ಕಿತ್ತು. ಈ ಸಿನಿಮಾ ಮೂಲಕ ಧ್ಯಾನ್‌ಗೂ ಒಳ್ಳೆಯ ಹೆಸರು ಬಂದಿತ್ತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸದಾ ಕನ್ನಡಿಗರ ಫೇವರಿಟ್ ಆಗಿತ್ತು.

Actress Sadha revealed why she is away from Kannada Films in 20 years of Monalisa event

ಕನ್ನಡದ ಮೊದಲ ಸಿನಿಮಾ ಕೂಡ ಮೆಗಾ ಹಿಟ್ ಆಗಿತ್ತು. ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಇದರ ಬೆನ್ನಲ್ಲೇ ಕನ್ನಡದ ಆರು ಸಿನಿಮಾಗಳಲ್ಲಿ ನಟಿಸಿದ್ದರು. ಅಂದ್ಹಾಗೆ, ಸದಾ ನಟಿಸಿದ ಕೊನೆಯ ಕನ್ನಡ ಸಿನಿಮಾ 'ಆರಕ್ಷಕ'. ಅಲ್ಲಿಂದ ಮತ್ತೆ ಕನ್ನಡ ಚಿತ್ರರಂಗದ ಕಡೆನೂ ಮುಖ ಮಾಡಿಲ್ಲ. ಕನ್ನಡ ಸಿನಿಮಾಗಳಲ್ಲೂ ನಟಿಸಲಿಲ್ಲ. ಅಷ್ಟಕ್ಕೂ 12 ವರ್ಷಗಳಿಂದ ನಟಿ ಸದಾ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದೇಕೆ? ಈ ಪ್ರಶ್ನೆ ಈಗ ಉತ್ತರ ಕೊಟ್ಟಿದ್ದಾರೆ.

'ಮೊನಾಲಿಸಾ' ಸಿನಿಮಾ ತೆರೆಕಂಡು 20 ವರ್ಷಗಳಾಗಿವೆ. ಈ ಖುಷಿಯಲ್ಲಿ ಇಂದ್ರಜಿತ್ ಲಂಕೇಶ್, ಸದಾ ಹಾಗೂ ಧ್ಯಾನ್ ಭಾಗಿಯಾಗಿದ್ದರು. ಸುಮಾರು ದಶಕಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ರತ್ಯಕ್ಷ ಆಗಿರುವ ನಟಿಯನ್ನು ಕಂಡು ಕನ್ನಡಿಗರು ಖುಷಿಯಾಗಿದ್ದಾರೆ. ಹಾಗಂತ ಇದೇ ಖುಷಿಯಲ್ಲಿ ಹೊಸ ಕನ್ನಡ ಸಿನಿಮಾವನ್ನೇನು ಒಪ್ಪಿಕೊಂಡಿದ್ದಾರಾ? ಅಂದರೆ, ಖಂಡಿತಾ ಇಲ್ಲ.

Actress Sadha revealed why she is away from Kannada Films in 20 years of Monalisa event

ಇಂದ್ರಜಿತ್ ಲಂಕೇಶ್ ಡಬಲ್ ಸಂಭ್ರಮದಲ್ಲಿದ್ದರು. ಒಂದ್ಕಡೆ 'ಮೊನಾಲಿಸಾ'ಗೆ 20 ವರ್ಷದ ಸಂಭ್ರಮ. ಇನ್ನೊಂದು ಕಡೆ 'ಗೌರಿ' ಸಿನಿಮಾದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೇ ವೇಳೆ 'ಮೊನಾಲಿಸಾ' 20 ವರ್ಷದ ಸಂಭ್ರಮವನ್ನು ಕೇಕ್ ಕಟ್ ಮಾಡಿ ಆಚರಣೆ ಮಾಡಲಾಗಿತ್ತು. ನಾಯಕ ನಟ ಧ್ಯಾನ್, ನಾಯಕ ನಟಿ ಸದಾ, ಹಾಸ್ಯ ನಟನಾಗಿದ್ದ ಶರಣ್ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಅಷ್ಟಕ್ಕೂ ನಟಿ ಸದಾಗೆ 12 ವರ್ಷಗಳಿಂದ ಒಂದೇ ಒಂದು ಕನ್ನಡ ಸಿನಿಮಾವನ್ನು ಯಾಕೆ ಮಾಡಿಲ್ಲ? ಅವರ ಕನ್ನಡ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿಲ್ಲವೋ? ಅಥವಾ ಕನ್ನಡದ ನಿರ್ದೇಶಕರೇ ಆಫರ್ ಕೊಟ್ಟಿಲ್ಲವೋ? ಈ ಪ್ರಶ್ನೆ ಹುಟ್ಟಿಕೊಳ್ಳುವುದಂತೂ ನಿಜ. ಅದಕ್ಕೆ 'ಮೊನಾಲಿಸಾ' 20 ವರ್ಷಗಳ ಸಂಭ್ರಮದ ವೇಳೆ ಫಿಲ್ಮಿ ಫಸ್ಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

"ನೀವು ಪ್ರಶ್ನೆಯನ್ನು ನಿರ್ಮಾಪಕರು, ನಿರ್ದೇಶಕರ ಬಳಿ ಕೇಳಬೇಕು. ನನ್ನ ಹತ್ತಿರ ಅಲ್ಲ. ನನಗೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅದ್ಭುತ ಪ್ರಾಜೆಕ್ಟ್‌ಗಳು ಸಿಕ್ಕಿಲ್ಲ. ಅದಕ್ಕೆ ನನಗೆ ಆರಕ್ಷಕ ಸಿನಿಮಾ ಬಳಿಕ ಮತ್ತೊಂದು ಕನ್ನಡ ಸಿನಿಮಾ ಮಾಡಬೇಕು ಅಂತ ಅನಿಸಲಿಲ್ಲ. ಅಂತಹ ಒಳ್ಳೆಯ ಸಬ್ಜೆಕ್ಟ್ ಸಿಕ್ಕಿದರೆ ಯಾಕೆ ಮಾಡಬಾರದು?" ಎಂದು ನಟಿ ಸದಾ ಪ್ರತಿಕ್ರಿಯೆ ನೀಡಿದ್ದಾರೆ.

40 ವರ್ಷದ ನಟಿ ಸದಾ ಸದ್ಯ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. 2023ರಲ್ಲಿ ನಟಿ ಸದಾ ನಟಿಸಿದ 'ಅಹಿಂಸಾ' ಹಾಗೂ 'ಆದಿಕೇಶವ' ಎರಡು ಸಿನಿಮಾಗಳು ರಿಲೀಸ್ ಆಗಿತ್ತು. ಆದರೆ, ಈ ವರ್ಷ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿಲಿಲ್ಲ. ಹೀಗಾಗಿ ಹೊಸ ಸಿನಿಮಾಗಳು ಅಧಿಕೃತವಾಗಿಯೂ ಅನೌನ್ಸ್ ಆಗಿಲ್ಲ. ಮುಂದಿನ ದಿನಗಳಲ್ಲಿ ಸದಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರಾ ಅನ್ನೋದನ್ನು ಭವಿಷ್ಯವೇ ಹೇಳಲಿದೆ.

More from Filmibeat

English summary
Actress Sadha ready to do Kannada movies:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X