"ಸಂಜನಾ ಬುರ್ಕಾ ಹಾಕೊಂಡು ಏನ್ಮಾಡ್ತಿದ್ದಾರೆ ಅಂದ್ಕೊಂಡ್ರಾ?" ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ನಟಿ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಕೌಟುಂಬಿಕ ಜೀವನದಲ್ಲಿ ಮುಳುಗಿ ಹೋಗಿದ್ದಾರೆ. ಗಂಡ, ಮಗು ಅಂತ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಆಗಾಗ, ಯೂಟ್ಯೂಬ್ ಚಾನೆಲ್ ಆರಂಭಿಸಿ ಆಗಾಗ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಸಂಜನಾ ಗಲ್ರಾನಿ ಮದುವೆ ಬಳಿಕವೂ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕವೂ ಮಗುವಿನ ಲಾಲನೆ-ಪಾಲನೆ ಮಾಡಿದ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಈಗ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದಾಗ, ಅವರು ಮದುವೆ ವಿಷಯ ಹೊರಬಿದ್ದಿತ್ತು. ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ ಎಂಬುವವರನ್ನು ವಿವಾಹವಾಗಿರುವ ರಹಸ್ಯ ಬಯಲಾಗಿತ್ತು. ಗಂಡುವಿಗೆ ಜನ್ಮ ನೀಡಿದ ಬಳಿಕ ಸಂಜನಾ ತಮ್ಮ ಆಧ್ಯಾತ್ಮಿಕ ಪಯಣದ ಬಗ್ಗೆ ವಿಡಿಯೋ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈಗ ಏನ್ಮಾಡ್ತಿದ್ದಾರೆ ಸಂಜನಾ ಗಲ್ರಾನಿ?
ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ ಪ್ರಕರಣದ ಸಂಬಂಧ ಕೆಲ ದಿನ ಜೈಲು ಸೇರಬೇಕಾಗಿತ್ತು. ಜೈಲಿನೊಳಗಿರುವಾಗಲೇ ಸಂಜನಾ, ವೈದ್ಯ ಡಾ. ಅಜೀಜ್ ಪಾಷಾರನ್ನು ಮದುವೆ ಆಗಿದ್ದ ಮ್ಯಾಟರ್ ರಿವೀಲ್ ಆಗಿತ್ತು. ಅದಲ್ಲಿಂದ ಮರಳುತ್ತಿದ್ದಂತೆ ಸಂಜನಾ ಸಾಂಸಾರಿಕ ಜೀವನಕ್ಕೆ ಮರಳಿದ್ದರು.
ಸಂಜನಾ ಗಲ್ರಾನಿ ಸದ್ಯ ಸಿನಿಮಾದಿಂದ ದೂರವೇ ಉಳಿದಿದ್ದು, ಪತಿ ಹಾಗೂ ಮಗುವಿನೊಂದಿಗೆ ಸಂತೋಷದಿಂದ ಇದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಸಂಜನಾ, ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈಗಲೂ ಅಷ್ಟೇ ತಮ್ಮ ಮೊದಲ ಆಧ್ಯಾತ್ಮಿಕ ಪಯಣದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೆಕ್ಕಾ ಮದೀನಾಗೆ ಹೊರಟ ಸಂಜನಾ
ಹೌದು, ಸಂಜನಾ ಗಲ್ರಾನಿ ಬುರ್ಕಾ ಧರಿಸಿದ್ದಕ್ಕೆ ಕಾರಣವಿದೆ. ಅವರೇ ಹೇಳಿರುವಂತೆ ಶೀಘ್ರದಲ್ಲಿಯೇ ಮುಸ್ಲೀಮರ ಪವಿತ್ರ ಆಧ್ಯಾತ್ಮಿಕ ಸ್ಥಳ ಮೆಕ್ಕಾ ಹಾಗೂ ಮದೀನಾಗೆ ಹೊರಟಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತ ಹೇಳಿಕೊಂಡಿದ್ದಾರೆ.
"ಎಲ್ಲರಿಗೂ ನಮಸ್ಕಾರ.. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ ಹಾಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಮೆಕ್ಕಾ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ಈ ಪಯಣದ ಪ್ರತಿಯೊಂದು ವಿಡಿಯೋವನ್ನು ನಾನು ಈ ಇಡೀ ವಾರ ಹಾಗೂ ಬರೋ ವಾರ ನನ್ನ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವು ಇರಲಿ." ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.
ಇಸ್ಲಾಂ ಧರ್ಮಕ್ಕೆ ಬದಲಾದ್ರಾ ಸಂಜನಾ?
ಮೂರು ವರ್ಷಗಳ ಹಿಂದೆ ಡಾಕ್ಯೂಮೆಂಟ್ ಒಂದು ಹರಿದಾಡಿತ್ತು. ಆ ದಾಖಲೆಯ ಪ್ರಕಾರ, ಸಂಜನಾ ಗಲ್ರಾನಿ 2018ರಲ್ಲಿ ತಮ್ಮ ಹೆಸರನ್ನು ಸಂಜನಾ ಬದಲು ಮಹೀರಾ ಎಂದು ಬದಲಾಯಿಸಿಕೊಂಡಿದ್ದಾಗಿ ಹೇಳಲಾಗಿದೆ. ಆದರೆ, ಈ ದಾಖಲೆಗಳ ಬಗ್ಗೆಯಾಗಲಿ, ಇಸ್ಲಾಂ ಧರ್ಮ ಬದಲಾದ ಬಗ್ಗೆ ಸಂಜನಾ ಗಲ್ರಾನಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.
ಆದರೆ, ಅವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹೆಸರು ಸಂಜನಾ ಗಲ್ರಾನಿ ಅಂತಲೇ ಇದೆ. ಸದ್ಯ ಸಂಜನಾ ತಮ್ಮ ಮೊದಲ ಆಧ್ಯಾತ್ಮಿಕ ಪಯಣದ ಅನುಭವ ಪಡೆಯುವುದರಲ್ಲಿ ಇದ್ದಾರೆ. ಅದನ್ನು ತಮ್ಮ ಯೂಟ್ಯೂನಬ್ ಚಾನೆಲ್‌ನಲ್ಲಿ ಶೇರ್ ಕೂಡ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











