»   » ಬಾಲಿವುಡ್ಡಿಗೆ ಹಾರಲಿದ್ದಾರಾ ಹಾಟ್ ಹುಡುಗಿ ಸಂಜನಾ?

ಬಾಲಿವುಡ್ಡಿಗೆ ಹಾರಲಿದ್ದಾರಾ ಹಾಟ್ ಹುಡುಗಿ ಸಂಜನಾ?

Posted By:
Subscribe to Filmibeat Kannada

ನಟಿ ಸಂಜನಾ ಬಣ್ಣದ ಲೋಕಕ್ಕೆ ಕಾಲಿಟ್ಟು ಹತ್ತತ್ರ ಹತ್ತು ವರ್ಷಗಳು ಕಳೆದಿವೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬೆಡಗಿ ಸದ್ದಿಲ್ಲದೇ ಬಾಲಿವುಡ್ ಗೆ ಹಾರುತ್ತಿದ್ದಾರಾ..?

ಈ ಪ್ರಶ್ನೆ ಮೂಡುವುದಕ್ಕೆ ಕಾರಣ, ಖುದ್ದು ಸಂಜನಾ ಬಾಲಿವುಡ್ ನಟ ಅನಿಲ್ ಕಪೂರ್ ಜೊತೆ ಕ್ಲಿಕ್ ಮಾಡಿರುವ ಸೆಲ್ಫಿ. ಈ ಫೋಟೋ ನ ನೋಡಿದ್ರೆ, ಎಂಥವರ ತಲೆಯಲ್ಲೂ ಹುಳ ಬಿಟ್ಟಂಗಾಗುತ್ತೆ. ಸಂಜನಾಗೂ ಅನಿಲ್ ಕಪೂರ್ ಗೂ ಭೇಟಿ ಹೇಗೆ ಸಾಧ್ಯ ಅಂತ.

Sanjjanna

ಅಂತಹ ಭೇಟಿ ಕಲ್ಪಿಸಿಕೊಟ್ಟಿದ್ದು ಮುತ್ತಿನ ನಗರಿ ಹೈದರಾಬಾದ್. ಈವೆಂಟ್ ಒಂದಕ್ಕೆ ಹೈದರಾಬಾದ್ ಗೆ ತೆರಳಿದ್ದ ಸಂಜನಾ, ಅಲ್ಲೇ ಅನಿಲ್ ಕಪೂರ್ ರನ್ನ ಭೇಟಿ ಮಾಡಿದ್ದಾರೆ. ಸಂಜನಾ ತಂಗಿದ್ದ ಹೋಟೇಲ್ ನಲ್ಲೇ ಅನಿಲ್ ಇದ್ದ ಕಾರಣ, ಇಂದು ಮುಂಜಾನೆ ಇಬ್ಬರು ಒಟ್ಟಿಗೆ ತಿಂಡಿ ಕೂಡ ಮಾಡಿದ್ದಾರೆ. [ಸ್ಯಾಂಡಲ್ ವುಡ್ ಬೆಡಗಿಯರು ಯಾರಿಗೇನು ಕಮ್ಮಿ: ಸಂಜನಾ]

''ಅವರಿಂದ ಕಲಿಯೋದು ತುಂಬಾ ಇದೆ. ಡಿಸಿಪ್ಲಿನ್ಡ್ ಪರ್ಸನಾಲಿಟಿ ಅವರದ್ದು'' ಅಂತ ಸಂಜನಾ, ಅನಿಲ್ ಬಗ್ಗೆ ಹಾಡಿ ಹೊಗಳಿದ್ದಾರೆ. ಬಾಲಿವುಡ್ ನಟಿಯರ ರೇಂಜಿಗೆ ಇರುವ ಸಂಜನಾ, ಅನಿಲ್ ಭೇಟಿ ಬಳಿಕ ಬಾಲಿವುಡ್ ಗೆ ಹಾರಿದರೂ ಅಚ್ಚರಿಯಿಲ್ಲ ಅಂತ ಹೇಳುತ್ತಿದೆ ಗಾಂಧಿನಗರ. (ಫಿಲ್ಮಿಬೀಟ್ ಕನ್ನಡ)

English summary
Actress Sanjjanna Galrani, who is currently in Hyderabad for an Event seems to have had a best morning today with Bollywood Actor Anil Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada