ತಮಿಳು ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ; ಎಲ್ಲಿ-ಯಾವಾಗ?

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಲೇ ಇತ್ತು. ಬಹು ದಿನದ ಗೆಳೆಯ ತಮಿಳಿನ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಶರ್ಮಿಳಾ ನಿನ್ನೆ (ಜುಲೈ 12) ರಂದು ವೈವಾಹಿಕ ಜೀವನಕ್ಕೆ ಅದ್ಧೂರಿಯಾಗಿ ಕಾಲಿಟ್ಟಿದ್ದಾರೆ. ಚಿತ್ರರಂಗದ ನಟ-ನಟಿಯರು, ಗಣ್ಯರು ಹಾಗೂ ಅವರ ಆಪ್ತರು ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಸುಮಾರು ಎರಡು ದಿನಗಳ ಕಾಲ ಈ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಸೆಲೆಬ್ರೆಟಿಗಳ ಫೇವರಿಟ್ ವೆಡ್ಡಿಂಗ್ ಡೆಸ್ಟಿನೇಷನ್ ಆಗಿರುವ ರಾಜಸ್ಥಾನದ ಜೈಪುರದಲ್ಲಿ ಈ ಜೋಡಿ ವೈವಾಹಿಕ ಜೀವನದಕ್ಕೆ ಕಾಲಿಟ್ಟಿದೆ. ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಇತ್ತೀಚೆಗಷ್ಟೇ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಅಲ್ಲಿಂದ ಇವರ ಮದುವೆ ಬಗ್ಗೆ ಚರ್ಚೆಗಳಾಗಿದ್ದವು.

Actress Sharmiela Mandre tie the knot with Tamil Producer Sudhan Sundaram in Jaipur

ರಾಜಸ್ಥಾನದ ಜೈಪುರದಲ್ಲಿರುವ ಐತಿಹಾಸಿಕ 'ಸಮೋದ್ ಪ್ಯಾಲೇಸ್' ಈ ಜೋಡಿ ಅದ್ಧೂರಿ ಮದುವೆ ಸಾಕ್ಷಿಯಾಗಿತ್ತು. ಕನ್ನಡ ಚಿತ್ರರಂಗದಿಂದ ಶರ್ಮಿಳಾ ಮಾಂಡ್ರೆಯ ಸ್ನೇಹಿತೆ ಮೋಹಕತಾರೆ ರಮ್ಯಾ, ದೊಡ್ಮೆನೆಯ ಮಗಳು ಪೂರ್ಣಿಮಾ ರಾಮ್‌ ಕುಮಾರ್ ಹಾಗೂ ಅವರ ಪುತ್ರಿ ಧನ್ಯಾ ರಾಮ್‌ ಕುಮಾರ್ ಭಾಗಿಯಾಗಿದ್ದರು. ಈ ತಾರಾ ಜೋಡಿಯ ವಿವಾಹ ಮಹೋತ್ಸವದ ಕ್ಷಣಗಳನ್ನು ಧನ್ಯಾ ರಾಮ್ ಕುಮಾರ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಶರ್ಮಿಳಾ-ಸುಧನ್ 2 ದಿನಗಳ ಮದುವೆ ಸಂಭ್ರಮ

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ನಟಿಯರು ಇತ್ತೀಚೆಗೆ ರಾಜಸ್ಥಾನದಲ್ಲಿ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಜೈಪುರ ಸೆಲೆಬ್ರೆಟಿಗಳ ನೆಚ್ಚಿನ ಮದುವೆ ತಾಣವಾಗಿದೆ. 'ಗಾಳಿಪಟ 2' ನಟಿ ಶರ್ಮಿಳಾ ಮಾಂಡ್ರೆ ಕೂಡ ಪ್ಯಾಲೇಸ್‌ಗಳ ತವರು ಜೈಪುರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ದಿನಗಳ ಕಾಲ ಈ ಅದ್ಧೂರಿ ಸಮಾರಂಭ ನಡೆದಿದೆ. ಜುಲೈ 11 ರಂದು ಹಳದಿ, ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದಿವೆ. ಹಾಗೇ ಜುಲೈ 12ರಂದು ಶರ್ಮಿಳಾ ಹಾಗೂ ಸುಧನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈದಿಕ ಸಂಪ್ರದಾಯದಂತೆ ಮದುವೆ

ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಅವರ ವಿವಾಹ ಜುಲೈ 12 ಭಾನುವಾರದಂದು ದಕ್ಷಿಣ ಭಾರತದ ವೈದಿಕ ಆಚರಣೆಯಂತೆ ನಡೆದಿದೆ. ಇಬ್ಬರೂ ದಕ್ಷಿಣ ಭಾರತದ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮದುವೆಯ ನಂತರ ಸಂಜೆ ಅದ್ಧೂರಿ ರಿಸೆಪ್ಷನ್ ಆಯೋಜಿಸಲಾಗಿದ್ದು ಎಂದು ವರದಿಗಳಾಗಿವೆ. ಅಂದ್ಹಾಗೆ ಇವರಿಬ್ಬರೂ ಜೂನ್ 25, 2026 ರಂದು ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

Actress Sharmiela Mandre tie the knot with Tamil Producer Sudhan Sundaram in Jaipur

ರಮ್ಯಾ-ಧನ್ಯಾ ಉಪಸ್ಥಿತಿ

ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಇಬ್ಬರೂ ಸಿನಿಮಾ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿ ಚಿತ್ರರಂಗದಲ್ಲಿ ಅವರ ಆಪ್ತರಿಗೆ ಆಹ್ವಾನವನ್ನು ನೀಡಲಾಗಿತ್ತು. ಕನ್ನಡ ಚಿತ್ರರಂಗದಿಂದ ಮೋಹಕ ತಾರೆ ರಮ್ಯಾ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದರು. ಹಾಗೇ ಧನ್ಯಾ ರಾಮ್‌ಕುಮಾರ್ ಹಾಗೂ ಅವರ ಅಮ್ಮ ಪೂರ್ಣಿಮಾ ರಾಮ್‌ಕುಮಾರ್ ಉಪಸ್ಥಿತಿಯಿತ್ತು. ಧನ್ಯಾ ರಾಮ್ ಕುಮಾರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಹಾಗೇ ನಿರ್ದೇಶಕ ಅಟ್ಲಿ, ನಟ ವಿಜಯ್ ಸೇತುಪತಿ ಸೇರಿದಂತೆ ಹಲವು ಗಣ್ಯರು ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ ಎನ್ನಲಾಗಿದೆ.

ಶರ್ಮಿಳಾ-ಸುಧನ್ ಪ್ರೇಮಕಥೆ

ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಇಬ್ಬರೂ ಹಲವು ದಿನಗಳಿಂದ ಸ್ನೇಹಿತರು. ನಿರ್ಮಾಪಕ ಸುಧನ್ ಮಾರ್ಚ್ ತಿಂಗಳಲ್ಲಿ ನಟಿ ಶರ್ಮಿಳಾ ಮಾಂಡ್ರೆ ಜೊತೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಹಾಗಂತ ಇದು ಸಿನಿಮಾ ಶೈಲಿಯ ಪ್ರಪೋಸ್ ಆಗಿರಲಿಲ್ಲ. ಅವರ ವಿನಯ ಹಾಗೂ ಸರಳ ಸ್ವಭಾವ ಇಷ್ಟ ಆಯ್ತು ಎಂದು ಹೇಳಿಕೊಂಡಿದ್ದರು. ಶರ್ಮಿಳಾ ಮಾಂಡ್ರೆ, 2007ರಲ್ಲಿ 'ಸಜನಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ 'ಕೃಷ್ಣ', 'ನವಗ್ರಹ', 'ಗಾಳಿಪಟ 2', 'ದಿ ಡೆವಿಲ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನು ಸುಧನ್ ಸುಂದರಂ 'ಪ್ಯಾಷನ್ ಸ್ಟುಡಿಯೋಸ್' ಮಾಲೀಕರಾಗಿದ್ದು, ವಿಜಯ್ ಸೇತುಪತಿ ನಟಿಸಿದ್ದ 'ಮಹಾರಾಜ', 'ಪಾರ್ಕಿಂಗ್', 'ತಾಯ್ ಕೆಳವಿ','ಆಸೈ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

English summary
Actress Sharmiela Mandre tie the knot with Tamil Producer Sudhan Sundaram in Jaipur. Dhanya Ramkumar shared Sharmiela Mandre and Sudhan Sundaram wedding photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X