Shubha Poonja: ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ
ಸ್ಯಾಂಡಲ್‌ವುಡ್‌ನ ಮತ್ತೊಂದು ವಿಚ್ಛೇದನ ಕೇಸ್ ದಾಖಲಾಗಿದೆ. ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಶುಭಾ ಪೂಂಜಾ ಹಾಗೂ ಪತಿ ಸುಮಂತ್ ಬಿಲ್ಲವ ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಮುಂದಾಗಿದ್ದಾರೆಂದು ವರದಿಯಾಗಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಇಬ್ಬರೂ ಡಿವೋರ್ಸ್‌ಗೆ ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದಾರೆ. ಇದು ಶುಭಾ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ಶುಭಾ ಪೂಂಜಾ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟಿದ್ದ ಈ ಜೋಡಿ ಈಗ ಬೇರೆಯಾಗುತ್ತಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಶುಭಾ ಹಾಗೂ ಸುಮಂತ್ ಇಬ್ಬರೂ ಅನ್ನೋನ್ಯವಾಗಿದ್ದರು. ಕೆಲ ಟಾಕ್ ಶೋಗಳಲ್ಲಿ ಭಾಗಿ, ವೈವಾಹಿಕ ಜೀವನದ ಬಗ್ಗೆ ಖುಷಿ ಖುಷಿಯಾಗಿ ಮಾಹಿತಿಯನ್ನು ಹಂಚಿಕೊಂಡಿದ್ದರು.

'ಮೊಗ್ಗಿನ ಮನಸು' ಸೇರಿದಂತೆ ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಶುಭಾ ಪೂಂಜಾ ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ವಿವಾಹವಾಗಿದ್ದರು. 2022ರಲ್ಲಿ ಜನವರಿಯಲ್ಲಿ ಪ್ರೀತಿಸಿದ ಸುಮಂತ್ ಜೊತೆ ಸಪ್ತಪದಿ ತುಳಿದಿದ್ದರು. 2022ರ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಬಗ್ಗೆ ನೆಗೆಟಿವ್ ಸುದ್ದಿ ಹರಿದಾಡಿಲ್ಲ. ಈ ಬಗ್ಗೆ ಒಂದೇ ಒಂದು ಸುಳಿವು ಕೂಡ ಇರಲಿಲ್ಲ. ಅಷ್ಟಕ್ಕೂ ವಿಚ್ಛೇದನಕ್ಕೆ ಕಾರಣವೇನು?
ನಾಲ್ಕೇ ವರ್ಷಕ್ಕೆ ದಾಂಪತ್ಯ ಅಂತ್ಯ
ಶುಭಾ ಪೂಂಜಾ ವಿವಾಹವಾದ ಬಳಿಕ ಸಿನಿಮಾಗಳಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ, ಸೋಶಿಯಲ್ ಮೀಡಿಯಾ ಹಾಗೂ ರಿಯಾಲಿಟಿ ಶೋಗಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಿವಾಹದ ಆರಂಭದಲ್ಲಿ ಅನ್ನೋನ್ಯವಾಗಿದ್ದ ಜೋಡಿ ಕೇವಲ ನಾಲ್ಕೇ ವರ್ಷಕ್ಕೆ ಬೇರೆಯಾಗಲು ನಿರ್ಧರಿಸಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಕಾರಣ ನಿಗೂಢ
ಈಗಾಗಲೇ ವರದಿಯಾಗಿರುವಂತೆ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಬ್ಬರೂ ಜಂಟಿಯಾಗಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಂದಿನ ವಿಚಾರಣೆಗೆ ಶುಭಾ ಪೂಂಜಾ ಹಾಗೂ ಸುಮಂತ್ ಇಬ್ಬರೂ ಒಟ್ಟಿಗೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಇದೆ. ಇಬ್ಬರೂ ದಾಂಪತ್ಯವನ್ನು ಮುರಿದುಕೊಳ್ಳುವುದಕ್ಕೆ ನಿಖರವಾದ ಕಾರಣವೇನೆಂಬುದು ಇನ್ನು ಬಹಿರಂಗವಾಗಿಲ್ಲ.

ಫೋಟೊಗಳು ಡಿಲೀಟ್
ಶುಭಾ ಪೂಂಜಾ ವಿಚ್ಛೇದನಕ್ಕೆ ಮುಂದಾಗಿರುವ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದ ಪತಿಯೊಂದಿನ ಫೋಟೊಗಳನ್ನು ಡಿಲೀಟ್ ಮಾಡಲಾಗಿದೆ. ಪರಸ್ಪರ ಒಪ್ಪಂದದ ಮೇರೆಗೆ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿರುವ ವಿಷಯವನ್ನು ಶುಭಾ ಪೂಂಜಾ ಆಗಲಿ, ಸುಮಂತ್ ಆಗಿ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ.
ಕರಿಯರ್ ಕಡೆಗೆ ಗಮನ
ನಟಿ ಶುಭಾ ಪೂಂಜಾ ತಮ್ಮ ಕರಿಯರ್ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಶುಭಾ ಪೂಂಜಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಜೊತೆಗೆ ಸಿನಿಮಾ ಹಾಗೂ ಕನ್ನಡ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸದಾ ಹಸನ್ಮುಖಿಯಾಗಿರುವ ನಟಿಯ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆ ನಡೆದಿದ್ದು, ಅವರ ಅಪ್ಪಟ ಅಭಿಮಾನಿಗಳಿಗೆ ತೀವ್ರ ನಿರಾಶೆ ತಂದಿದೆ.


Click it and Unblock the Notifications