»   » ನಟಿ ಸಿಂಧೂ ಮೆನನ್ ತಾಯಿಗೆ ಅಪಘಾತ, ಮಾನವೀಯತೆ ಮರೆತ ಪೊಲೀಸರು

ನಟಿ ಸಿಂಧೂ ಮೆನನ್ ತಾಯಿಗೆ ಅಪಘಾತ, ಮಾನವೀಯತೆ ಮರೆತ ಪೊಲೀಸರು

Posted By:
Subscribe to Filmibeat Kannada

ಆಟೋದಲ್ಲಿ ತೆರಳುತ್ತಿದ್ದ ಬಹುಭಾಷಾ ನಟಿ ಸಿಂಧು ಮೆನನ್ ಅವರ ತಾಯಿ ಶ್ರೀದೇವಿ ಅವರಿಗೆ ಅಪಘಾತವಾಗಿ, ಯಾರೂ ನೆರವಿಗೆ ಧಾವಿಸದ ಘಟನೆ ಇಂದು (ಸೆಪ್ಟೆಂಬರ್ 28) ಯಶವಂತಪುರ ಸಿಗ್ನಲ್ ಬಳಿ ನಡೆದಿದೆ.

ಮತ್ತಿಕೆರೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಿಂದ ಮಲ್ಲೇಶ್ವರಂನಲ್ಲಿರುವ ಮನೆಗೆ ಆಟೋದಲ್ಲಿ ತೆರಳುವಾಗ, ಕ್ಯಾಬ್ ಡಿಕ್ಕಿ ಹೊಡೆದಿದೆ. ಈ ವೇಳೆ ಗಾಯಗೊಂಡ ಶ್ರೀದೇವಿ ಅವರ ಸ್ಥಳದಲ್ಲೇ ಸುಮಾರು ಒಂದು ಗಂಟೆಗೂ ಅಧಿಕ ಸಮಯ ನೋವಿನಿಂದ ನರಳಿದ್ದಾರೆ.

Actress Sindhu Menon's mother Sridevi injured in accident

ಸ್ಥಳದಲ್ಲೇ ಸಂಚಾರಿ ಪೊಲೀಸರು ಇದ್ದರೂ, ಯಾರೂ ಕೂಡ ನೆರವಿಗೆ ಬಂದಿಲ್ಲ. ನಂತರ ಸಿಂಧು ಮೆನನ್ ಅವರ ಕುಟುಂಬದವರೇ ಸ್ಥಳಕ್ಕೆ ಬಂದು, ನಟಿ ತಾಯಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯಶವಂತಪುರ ಸಂಚಾರಿ ಪೊಲೀಸರ ವರ್ತನೆ ಬಗ್ಗೆ ಸಿಂಧು ಮೆನನ್ ಕುಟುಂದವರು ಆಕ್ರೋಶ ವ್ಯಕ್ತಪಡಿಸಿದ್ದು, ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
South Actress Sindhu Menon's mother Sridevi was injured in an accident near Yeshwantpur signal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada