For Quick Alerts
  ALLOW NOTIFICATIONS  
  For Daily Alerts

  ದರ್ಶನ್‌ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ನಾಯಕಿ ಆಗಬೇಕು ಅನ್ನೋ ಕನಸು ಅದೆಷ್ಟು ಮಂದಿಗೆ ಇರಲ್ಲ ಹೇಳಿ. ಚಿತ್ರರಂಗದಲ್ಲಿ ಸ್ಟಾರ್ ನಾಯಕಿ ಆಗಬೇಕು ಕನಸು ಕಾಣುತ್ತಿರೋ ಪ್ರತಿಯೊಬ್ಬ ನಟಿಗೂ ದಾಸನಿಗೆ ಹೀರೊಯಿನ್ ಆಗಬೇಕು ಅನ್ನೋ ಆಸೆ ಇದ್ದೇ ಇರುತ್ತೆ.

  ಆದರೆ, 'ಬನಾರಸ್' ನಟಿ ಮಾತ್ರ ಎಂದಿಗೂ ದರ್ಶನ್‌ಗೆ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ.ಈ ಮಾತನ್ನು ಸ್ವತ: ಬನಾರಸ್ ನಟಿ ಸೋನಾಲ್ ಮೊಂತೆರೋಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಖುದ್ದಾಗಿ ಹೇಳಿದ್ದಾರಂತೆ.

  ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'

  ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ಸೋನಾಲ್ ಮೊಂತೆರೋ. ಈಗಾಗಲೇ ಹಲವು ಜನ ಮೆಚ್ಚಿದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ದರ್ಶನ್ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ, ದಾಸನಿಗೆ ಹೀರೊಯಿನ್ ಆಗೋಕೆ ಮಾತ್ರ ಆಗಲ್ಲ. ಅಷ್ಟಕ್ಕೂ ನಟಿ ಸೋನಾಲ್ ಮೊಂತೆರೋಗೆ ಚಾಲೆಂಜಿಂಗ್ ಸ್ಟಾರ್ ತನಗೆ ಹೀರೊಯಿನ್ ಆಗೋಕೆ ಸಾಧ್ಯವೇ ಇಲ್ಲ ಎಂದಿದ್ದು ಏಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಈ ನಟಿ ದರ್ಶನ್‌ಗ್ಯಾಕೆ ನಾಯಕಿ ಆಗೋಕೆ ಆಗಲ್ಲ

  ಈ ನಟಿ ದರ್ಶನ್‌ಗ್ಯಾಕೆ ನಾಯಕಿ ಆಗೋಕೆ ಆಗಲ್ಲ

  ದರ್ಶನ್ ಸಿನಿಮಾದಲ್ಲಿ ಹೀರೊಯಿನ್ ಆಗ್ಬೇಕು ಅನ್ನೋ ಕನಸು 'ಬನಾರಸ್' ನಟಿ ಸೋನಾಲ್‌ಗೆ ತುಂಬಾನೇ ಇಷ್ಟ ಇತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಆ ಆಸೆಯನ್ನು ತಿರಸ್ಕರಿಸಿದ್ದಾರೆ. ಹಾಗಂತ ಇಬ್ಬರ ನಡುವೆ ಏನೋ ವೈಮನಸ್ಸು ಇದೆ ಅಂತಲ್ಲ. ದರ್ಶನ್ ನನ್ನ ನೀನು ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ದಕ್ಕೂ ಒಂದು ಬಲವಾದ ಕಾರಣವಿದೆ. ಅದೇನು ಅನ್ನೋದನ್ನು 'ಪಂಚತಂತ್ರ', 'ಬನಾರಸ್' ಅಂತಹ ಸಿನಿಮಾದಲ್ಲಿ ನಟಿಸಿರೋ ಸೋನಾಲ್ ಮೊಂತೆರೋ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ.

  ನಟಿ ಸೋನಾಲ್ ಹೇಳಿದ್ದೇನು?

  ನಟಿ ಸೋನಾಲ್ ಹೇಳಿದ್ದೇನು?

  "ದರ್ಶನ್ ಸರ್ ಅವರೇ ಹೇಳಿದ್ದಾರೆ. ನೀನು ನನ್ನ ತಂಗಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ದಾರೆ. ದರ್ಶನ್ ಸರ್ ಜೊತೆ ಹೀರೊಯಿನ್ ಆಗಿ ಸಿನಿಮಾ ಮಾಡಬೇಕು ಅಂತ ಒಂದು ಆಸೆ ಇತ್ತು. ಅವರೇ ಹೇಳಿದ್ದಾರೆ. ನೀನು ನನ್ನ ತಂಗಿ ಕಣೆ. ಹೇಗೆ ಹೀರೊಯಿನ್ ಮಾಡೋಕೆ ಆಗುತ್ತೆ ಅಂತ. ಆದರೂ ನಾನು ಖುಷಿಯಾಗಿದ್ದೇನೆ. ಸಿನಿಮಾಗಿಂತ ನನ್ನನ್ನು ಒಪ್ಪಿಕೊಂಡಿದ್ದಾರಲ್ಲ. ಅದು ತುಂಬಾನೇ ಖುಷಿ ಕೊಡುತ್ತೆ." ಎಂದು ಸೋನಾಲ್ ಮೊಂತೆರೋ ಯಾಕೆ ದರ್ಶನ್ ಹೀರೊಯಿನ್ ಆಗೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

  'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಜೊತೆ ನಟನೆ

  'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಜೊತೆ ನಟನೆ

  ಸೋನಾಲ್ ಮೊಂತೆರೋ 'ರಾಬರ್ಟ್' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ದರ್ಶನ್‌ಗೆ ತಂಗಿಯಾಗಿ ನಟಿಸಿದ್ದರು. ಹೀಗಾಗಿ ದರ್ಶನ್ ಇವರನ್ನು ತಂಗಿ ಅಂತಲೇ ಭಾವಿಸಿದ್ದಾರೆ. ಅಲ್ಲದೆ ಜನರು ಕೂಡ ದರ್ಶನ್ ತಂಗಿಯಾಗಿ ನೋಡಿದ್ದರಿಂದ ನಾಯಕಿಯಾಗೋಕೆ ಸಾಧ್ಯವೇ ಇಲ್ಲ ಅಂತ ಹೇಳಿದ್ದಾರಂತೆ. ಅದನ್ನೇ ಸೋನಾಲ್ ಮಾಂತೆರೋ ಈಗ ರಿವೀಲ್ ಮಾಡಿದ್ದು, ತಂಗಿಯಾಗಿದ್ದಕ್ಕೆ ಖುಷಿಯಾಗಿದ್ದಾರೆ.

  'ಬನಾರಸ್'ಬಳಿಕ ಎರಡು ಸಿನಿಮಾದಲ್ಲಿ ಬ್ಯುಸಿ

  'ಬನಾರಸ್'ಬಳಿಕ ಎರಡು ಸಿನಿಮಾದಲ್ಲಿ ಬ್ಯುಸಿ

  ಸೋನಾಲ್ ಮಾಂತೆರೋ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಸದ್ಯ ಝೈರ್ ಖಾನ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದ 'ಬನಾರಸ್' ಸಿನಿಮಾ ರಿಲೀಸ್ ಆಗಿದೆ. ಇವರ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿವೆ. 'ಶುಗರ್ ಫ್ಯಾಕ್ಟರಿ' ಹಾಗೂ 'ಬುದ್ಧಿವಂತ 2' ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದು, ಆ ಸಿನಿಮಾಗಳ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

  English summary
  Actress Sonal Monteiro revealed why she never acted as the female lead in the Darshan movie,Know More.
  Saturday, January 21, 2023, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X