ಅಗಲಿದ ತಂದೆಯನ್ನು ನೆನೆದು ಭಾವುಕರಾದ ನಟಿ ತೇಜಸ್ವಿನಿ ಪ್ರಕಾಶ್
ನಟಿ ತೇಜಸ್ವಿನಿ ಪ್ರಕಾಶ್ ಅವರ ತಂದೆ ಪ್ರಕಾಶ್ ಏಪ್ರಿಲ್ ತಿಂಗಳ 23ರ ಸಂಜೆ ಅನಾರೋಗ್ಯದಿಂದಾಗಿ ಬೆಂಗಳೂರಿನ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಂದೆಯ ಅಗಲುವಿಕೆಯ ನೋವು ಎಷ್ಟರಮಟ್ಟಿಗೆ ತಮ್ಮನ್ನು ಕಾಡುತ್ತಿದೆ ಎಂಬುದನ್ನು ತೇಜಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Recommended Video
ತಂದೆಯ ಸಾವಿನ ಆಘಾತದಿಂದ ಅವರಿನ್ನೂ ಹೊರಬಂದಿಲ್ಲ. ತಮ್ಮ ಮನಸನ್ನು ಬೇರೆಡೆಗೆ ಹೊರಳಿಸುವ ಪ್ರಯತ್ನ ಮಾಡಿದರೂ ಆ ನೋವು ಅವರನ್ನು ಪದೇ ಪದೇ ಕಾಡುತ್ತಿದೆ ಎಂಬುದಕ್ಕೆ ಅವರು ಹಂಚಿಕೊಳ್ಳುತ್ತಿರುವ ಫೋಟೊಗಳು ಮತ್ತು ಬರಹಗಳು ಸಾಕ್ಷಿ. ಈ ಮೊದಲು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಇತರೆ ಚಟುವಟಿಕೆಗಳ ಸಂತಸ ಫೋಟೊಗಳನ್ನು ಹಾಕುತ್ತಿದ್ದ ಅವರು, ಈಗ ಸಾಲು ಸಾಲಾಗಿ ತಂದೆಯ ನೆನಪಿನ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮುಂದೆ ಓದಿ...

ದಯವಿಟ್ಟು ಮರಳಿ ಬನ್ನಿ
ತಂದೆಯ ನಿಧನದ ಸುದ್ದಿಯನ್ನು ತೇಜಸ್ವಿನಿ, 'ರಿಪ್ ಅಪ್ಪಾ' ಎಂದು ಫೇಸ್ಬುಕ್‌ನಲ್ಲಿ ಬರೆದುಕೊಂಡು ತಿಳಿಸಿದ್ದರು. 'ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ದಯವಿಟ್ಟು ಮರಳಿ ಬನ್ನಿ' ಎಂದು ಮರುದಿನ ಅವರು ಬರೆದುಕೊಂಡಿದ್ದರು.

ಹೇಳಬೇಕಿರುವುದು ತುಂಬಾ ಇದೆ
ತಂದೆ ಮತ್ತು ತಾಯಿಯ ಜತೆಗೆ ಇರುವ ಫೋಟೊಗಳಲ್ಲಿನ ಅವರ ನಗು ಮನಕಲಕುವಂತಿದೆ. ನಿಮ್ಮ ಮಾತುಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ ಎನ್ನುವ ಮೂಲಕ ತಂದೆಯನ್ನು ಕಳೆದುಕೊಂಡ ಕಹಿಯ ಎಷ್ಟು ತೀವ್ರವಾಗಿದೆ ಎಂದು ತಿಳಿಸಿದ್ದಾರೆ. ನನ್ನ ಅಪ್ಪನಿಗೆ ನಾನು ಹೇಳಬೇಕಾದ ಅನೇಕ ಸಂಗತಿಗಳಿವೆ. ಅವುಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೇನೆ ಎಂಬುದಾಗಿ ಬರೆದುಕೊಂಡಿದ್ದಾರೆ.

ಕಣ್ಣೀರಿನೊಂದಿಗೆ ನಗು ಮೂಡುತ್ತದೆ
'ನೀವು ಎಂದೆಂದಿಗೂ ಇಲ್ಲಿ ಇರುವುದಿಲ್ಲ ಎಂಬುದನ್ನು ಯೋಚಿಸುವುದೇ ನೋವು ಉಂಟುಮಾಡುತ್ತದೆ. ನನ್ನಿಂದ ಬೇರೇನನ್ನೂ ಮಾಡಲಾಗದೆ ಇದ್ದರೂ ನೀವು ಜೀವಂತ ಇದ್ದಾಗ ನಮ್ಮ ಜೀವನದ ಕ್ಷಣಗಳನ್ನು ಜತೆಯಾಗಿ ಹೇಗೆ ಸಂಭ್ರಮಿಸಿದ್ದೆವು ಎಂಬುದನ್ನು ನೆನಪಿಸಿಕೊಂಡಾಗ ನನ್ನ ಕಣ್ಣಲ್ಲಿ ನೀರಿನ ಜತೆಗೆ ಸಣ್ಣದೊಂದು ನಗು ಮೂಡುತ್ತದೆ' ಎಂದು ಭಾವುಕರಾಗಿ ಹೇಳಿದ್ದಾರೆ.

ಅಮ್ಮನ ಕಾಲೆಳೆಯುವ ತಮಾಷೆ
'ನಾನು ಎಷ್ಟು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಾದರೆ ಆಶ್ಚರ್ಯವಾಗಬಹುದು' ಎಂದಿದ್ದಾರೆ. ಪ್ರತಿ ಚಿತ್ರವೂ ಒಂದು ಕಥೆಯನ್ನು ಹೇಳುತ್ತದೆ. ಅಮ್ಮನಿಗೆ ಕೀಟಲೆ ಮಾಡುವುದರಲ್ಲಿ ನಾನು ಮತ್ತು ಅಪ್ಪ ಯಾವಾಗಲೂ ಮುಂದೆ. ಅವರಿಗೆ ಸಿಟ್ಟು ತರಿಸುವುದು ಬಹಳ ಸುಲಭವಾಗಿತ್ತು' ಎಂದು ಮತ್ತೊಂದು ಫೋಟೊ ಹಂಚಿಕೊಂಡಿದ್ದಾರೆ.

ಅಮ್ಮಂದಿರ ದಿನದ ಖುಷಿ
ಈ ನಡುವೆ ಇತ್ತೀಚೆಗೆ ಅಮ್ಮಂದಿರ ದಿನದಂದು ಅವರು ಹಂಚಿಕೊಂಡಿದ್ದ ಪೋಸ್ಟ್ ಗಮನ ಸೆಳೆಯುವಂತಿತ್ತು. ಕೃತಕ ಮೀಸೆ ಅಂಟಿಸಿಕೊಂಡು ಅಮ್ಮನೊಂದಿಗೆ ಕುಳಿತ ಫೋಟೊದೊಂದಿಗೆ ಅಮ್ಮನ ಬಗ್ಗೆ ಪ್ರೀತಿಯ ಬರಹ ಬರೆದುಕೊಂಡಿದ್ದರು. ಜತೆಗೆ ಚಿಕ್ಕಮ್ಮ ಮತ್ತು ಅಮ್ಮನೊಂದಿಗೆ ಇರುವ ಮತ್ತೊಂದು ಫೋಟೊಕ್ಕೆ ನಾನು ನನ್ನ ಚಿಕ್ಕಮ್ಮನಂತೆಯೇ ಹೆಚ್ಚು ಕಾಣಿಸುತ್ತೇನೆ ಎಂದಿದ್ದರು.

ಸಾಂತ್ವನ ಹೇಳಿದ ಅಭಿಮಾನಿಗಳು
ತೇಜಸ್ವಿನಿ ಅವರು ತಂದೆಯ ಅಗಲುವಿಕೆಯ ದುಃಖದಿಂದ ಹೊರಬರಲು ಇನ್ನಷ್ಟು ಸಮಯ ಬೇಕಾಗಬಹುದು. ನಿಮ್ಮ ದುಃಖ ಕಡಿಮೆ ಮಾಡಿಕೊಳ್ಳಿ. ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಅನೇಕರು ಅವರಿಗೆ ಸಲಹೆ ನೀಡುತ್ತಿದ್ದಾರೆ. ನಗುಮೊಗದ ನಟಿಯ ನೋವಿನೊಂದಿಗೆ ಇರುವುದನ್ನು ನೋಡಲು ಆಗುತ್ತಿಲ್ಲ. ನೀವು ಮೊದಲಿನಂತೆ ಇರಬೇಕು ಎಂದು ಸಮಾಧಾನಪಡಿಸುತ್ತಿದ್ದಾರೆ.


Click it and Unblock the Notifications











