"ಇವತ್ತು ನಾನು ಸತ್ತೋಗ್ತೀನಿ ಅಂದ್ಕೊಂಡೆ"; ಪ್ಯಾರಿಸ್ ಪ್ರವಾಸ ವೇಳೆ ನಟಿ ತೇಜಸ್ವಿನಿಗೆ ವಿಮಾನದಲ್ಲಿ ಆಗಿದ್ದೇಗೆ?

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ದುರಂತದ ಬಳಿಕ ಒಬ್ಬೊಬ್ಬರೇ ಸೆಲೆಬ್ರೆಟಿಗಳು ತಮಗಾದ ಒಂದೊಂದೇ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೆಲೆಬ್ರೆಟಿಗಳು ಹೆಚ್ಚಾಗಿ ದೇಶ, ವಿದೇಶಗಳಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪ್ರವಾಸ, ಮತ್ತೆ ಕೆಲವೊಮ್ಮೆ ಶೂಟಿಂಗ್ ಅಂತ ವಿಮಾನದಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಈ ವೇಳೆ ಹಲವು ಮಂದಿಗೆ ಭಯ ಹುಟ್ಟಿಸುವಂತಹ ಅನುಭವ ಆಗಿದೆ.

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಜನಪ್ರಿಯ ನಟಿ ತೇಜಸ್ವಿನಿ ಪ್ರಕಾಶ್ ಕೂಡ ವಿಮಾನದ ಪ್ರಯಾಣ ಮಾಡುವಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ಪ್ಯಾರಿಸ್‌ನಿಂದ ಬೆಂಗಳೂರಿಗೆ ಹಿಂತಿರುಗುತ್ತಿರುವಾಗ ಮಧ್ಯದಲ್ಲಿ ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

Actress Tejaswini Prakash reveals terrifying experience during plane turbulence from Paris to Bengaluru

ಕನ್ನಡ ನಟಿ ತೇಜಸ್ವಿನಿ ಪ್ರಕಾಶ್‌ಗೆ ಪ್ರವಾಸ ಮಾಡುವುದು ಅಂದರೆ ಇಷ್ಟ. ಮದುವೆಗೂ ಮುನ್ನ ಸಿಕ್ಕಾಪಟ್ಟೆ ಟ್ರಾವೆಲ್ ಮಾಡುತ್ತಿದ್ದರು. ಆದ್ರೀಗ ಮಗು ಆಗಿದ್ದರಿಂದ ಎಲ್ಲೂ ಪ್ರವಾಸ ಮಾಡಿಲ್ಲ. ಮಗು ಸ್ವಲ್ಪ ದೊಡ್ಡಗಾದಂತೆ ಮತ್ತೆ ಪ್ರಯಾಣವನ್ನು ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಪ್ಯಾರಿಸ್‌ನಿಂದ ಬೆಂಗಳೂರಿಗೆ ಬರುವಾಗ ವಿಮಾನ ಕ್ರ್ಯಾಶ್ ಆಗುತ್ತೆ. ಇನ್ನೇನು ಸತ್ತೇ ಹೋಗುತ್ತೇನೆ ಎಂದು ಅಂದುಕೊಂಡಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

"ನನಗೆ ಟ್ರಾವೆಲ್ ಮಾಡುವುದಕ್ಕೆ ತುಂಬಾನೇ ಇಷ್ಟ. ಅದೆಷ್ಟು ಇಷ್ಟ ಅಂದರೆ, ನಾನು ಟ್ಯಾಟುವನ್ನು ಹಾಕಿಸಿಕೊಂಡಿದ್ದೇನೆ. ಏನೋ ಗೊತ್ತಿಲ್ಲ ನನಗೆ ಸುತ್ತುವುದು ಅಂದರೆ ಹುಚ್ಚು. ಈಗ ಮಗು ಆದ್ಮೇಲೆ ಕಡಿಮೆ ಆಯ್ತು. ಮಗು ದೊಡ್ಡದಾದ್ಮೇಲೆ ಮತ್ತೆ ಬರುತ್ತೇನೆ. ನಾನು ತುಂಬಾನೇ ಸುತ್ತಾಡುತ್ತೇನೆ." ಎಂದು ತಮ್ಮ ಟ್ರಾವೆಲ್ ಕ್ರೇಜ್ ಬಗ್ಗೆ ತೇಜಸ್ವಿನಿ ಪ್ರಕಾಶ್ ಹೇಳಿಕೊಂಡಿದ್ದಾರೆ.

ಏರ್ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೆ ಜನರು ಭಯ ಪಡುವಂತಾಗಿದೆ. ನಟಿ ತೇಜಸ್ವಿನಿ ಪ್ರಕಾಶ್‌ಗೂ ಪ್ಯಾರಿಸ್‌ನಿಂದ ಬೆಂಗಳೂರಿಗೆ ಹಿಂತಿರುಗುವಾಗ ಇಂತಹದ್ದೇ ಒಂದು ಅನುಭವ ಆಗಿತ್ತು. "ಒಂದು ದಿನ ಏನಾಯ್ತು. ನಾನು ಎಲ್ಲೋ ಸುತ್ತಾಡಿಕೊಂಡು ಪ್ಯಾರಿಸ್‌ಗೆ ಬಂದಿದ್ದೆ. ಅಲ್ಲಿಂದ ಬೆಂಗಳೂರಿಗೆ ಫ್ಲೈಟ್ ಇತ್ತು. ಹೆವೀ ಟರ್ಬುಲೆನ್ಸ್. ಪ್ಯಾರಿಸ್‌ನಿಂದ ಬೆಂಗಳೂರಿಗೆ ಬರುವ ಮಧ್ಯದಲ್ಲಿ ಶುರುವಾಗಿತ್ತು. ಇನ್ನೂ ಬೆಂಗಳೂರು ರೀಚ್ ಆಗುವುದಕ್ಕೆ ಇನ್ನೂ ಆರೇಳು ಗಂಟೆ ಇತ್ತು. ಅದೊಂತರ ಕೆಟ್ಟ ಫೀಲಿಂಗ್. ನಾನು ಟ್ರಾವೆಲ್ ಮಾಡುವುದಕ್ಕೂ ಮುನ್ನ ಫೈನಲ್ ಡೆಸ್ಟಿನೇಷನ್ ಸಿನಿಮಾ ನೋಡಿಕೊಂಡು ಬೇರೆ ಹೋಗಿದ್ದೆ. ಆ ಸೀನ್‌ಗಳೆಲ್ಲ ತಲೆಯಲ್ಲಿ ಇತ್ತು. ಫ್ಲೈಟ್ ಹೇಗೆ ಶೇಕ್ ಆಗುತ್ತಿದೆ ಅಂದರೆ, ಲಗೇಜ್ ಡೋರ್ ಎಲ್ಲಾ ಓಪನ್ ಆಗುತ್ತಿದೆ. ಸೂಟ್‌ಕೇಸ್ ಎಲ್ಲಾ ಅಲ್ಲಾಡುತ್ತಿದೆ. ನನಗೆ ಇವತ್ತು ಫ್ಲೈಟ್ ಕ್ರ್ಯಾಶ್ ಆಗಿಬಿಡುತ್ತೆ ಅನ್ನೋದು ನನ್ನ ತಲೆಗೆ ಬಂದು ಬಿಡ್ತು. ನಾನು ಸತ್ತೋಗ್ತಿನಿ ಅನ್ನೋ ಫೀಲಿಂಗ್ ಬಂದು ಬಿಡ್ತು." ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

Actress Tejaswini Prakash reveals terrifying experience during plane turbulence from Paris to Bengaluru

ವಿಮಾನ ಹಾರಾಡುವಾಗ ಹವಾಮಾನ ವೈಪರೀತ್ಯ ಆದರೆ, ಅಂದರೆ, ಗಾಳಿಯ ತೀವ್ರ ಏರಿಳಿತದಿಂದ ಫ್ಲೈಟ್ ಅಲ್ಲಾಡುವುದಕ್ಕೆ ಶುರುವಾಗುತ್ತೆ. ಈ ಸನ್ನಿವೇಶದಲ್ಲಿ ಕೆಲವೊಮ್ಮೆ ವಿಮಾನ ದುರಂತಕ್ಕೀಡಾಗುವ ಸಾಧ್ಯತೆನೂ ಇದೆ. ಅಂತಹ ಸನ್ನಿವೇಶದಲ್ಲಿ ತೇಜಸ್ವಿನಿ ಪ್ರಕಾಶ್ ಸಿಕ್ಕಿಕೊಂಡಿದ್ದರು. "ಪಕ್ಕದಲ್ಲಿ ಯಾರೂ ಗೊತ್ತಿರೋರು ಇಲ್ಲ. ಏರ್ ಹೋಸ್ಟರ್ಸ್‌ ಅನೌನ್ಸ್ ಮಾಡುತ್ತಲೇ ಇದ್ದಾರೆ. ಟಿವಿ ಸ್ಕ್ರೀನ್‌ ಎಲ್ಲಾ ಶೇಕ್ ಆಗುತ್ತಿದೆ. ಮುಗೀತು ಇವತ್ತು ಸತ್ತೆ ಅಂದ್ಕೊಂಡೆ. ಇವತ್ತು ಪ್ರಾಣ ಹೋಯ್ತು ಅಂತ ನಿರ್ಧರಿಸಿಬಿಟ್ಟೆ. ನಾನು ಎಲ್ಲರಿಗೂ ಗಿಫ್ಟ್ ತೆಗೆದುಕೊಂಡು ಬಂದಿದ್ದೆ. ಕೂತ್ಕೊಂಡು ಇದನ್ನೆಲ್ಲ ಹೇಗೆ ಕೊಡೋದು ಅಂತ ಆ ಸಮಯದಲ್ಲಿ ಯೋಚನೆ ಮಾಡುತ್ತಿದ್ದೇನೆ. ವಿಮಾನ ಕ್ರ್ಯಾಶ್ ಆಗಿಬಿಟ್ಟರೆ, ಎಲ್ಲವೂ ಸುಟ್ಟು ಹೋಗುತ್ತೆ. ಆದರೆ, ನನ್ನ ತಲೆಯಲ್ಲಿ ಅದು ಹೋಗಿಲ್ಲ. ಅವತ್ತು ಒಂದು ಐದು ನಿಮಿಷಗಳ ಕಾಲ ನಾನು ನಡುಗಿ ಹೋಗಿದ್ದೆ. ಆಮೇಲೆ ವಿಮಾನ ಹತೋಟಿಗೆ ಬಂತು. ಆಗ ನಾನು ಬದುಕಿದೆ ಅಂತ ಅನಿಸಿತು." ಎಂದು ತೇಜಸ್ವಿನಿ ಪ್ರಕಾಶ್ ಹೇಳಿಕೊಂಡಿದ್ದಾರೆ.

ಇದೊಂದೇ ಅಲ್ಲ ಸಿನಿಮಾ ಶೂಟಿಂಗ್ ಮಾಡುವಾಗ ಆದ ಅನುಭವವನ್ನೂ ಶೇರ್ ಮಾಡಿದ್ದಾರೆ. "ಗೋವಾದಲ್ಲಿ ಒಂದು ಸೀನ್ ಶೂಟ್ ಮಾಡುತ್ತಿದ್ವಿ. ಮೋಟರ್ ಬೋಟ್ ಇರುತ್ತಲ್ಲ ಅದು ಸೀನ್. ನಾರ್ಮಲ್ ಬೋಟ್‌ನಲ್ಲಿ ಕ್ಯಾಮರಾಮ್ಯಾನ್ ಅವರೆಲ್ಲ ಬರುತ್ತಿದ್ದಾರೆ. ಮೋಟರ್ ಬೋಟ್‌ನಲ್ಲಿ ನಾನು ಹಾಗೂ ನಾಗಕಿರಣ್ ಅಂತ ನನಗೆ ಜೋಡಿಯಾಗಿದ್ದರು. ಇನ್ನೊಂದು ವಾಟರ್‌ ಬೋಟ್‌ನಲ್ಲಿ ಪ್ರಜ್ವಲ್, ದೀಪ್ತಿ ಇದ್ದರು. ಕ್ಯಾಮರಾಮ್ಯಾನ್ ಹೇಳಿದ್ರು. ನಿಮ್ಮ ಪಾಡಿಗೆ ನೀವು ಹೋಗಿ. ನಾವು ಫಾಲೋ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ನಾಗಕಿರಣ್ ಒಂದು ಸಮಯದಲ್ಲಿ ಎಕ್ಸ್‌ಲೆಟರ್ ಜಾಸ್ತಿ ಕೊಟ್ಟಿದ್ದಕ್ಕೆ ಉಲ್ಟಾ ಬಿದ್ದು ಹೋಯ್ತು. ನನಗೆ ಸ್ವಿಮ್ಮಿಂಗ್ ಬರಲ್ಲ. ಅದು ಎತ್ತಿ ಹಾಕಿದ್ದಕ್ಕೆ ಮೊದಲು ನನ್ನ ತಲೆ ನೀರಿನೊಳಗೆ ಹೋಯ್ತು. ನಾನು ನೀರು ಕುಡಿದುಬಿಟ್ಟದ್ದೆ. ಉಸಿರಾಡುವುದಕ್ಕೆ ಕಷ್ಟ ಆಗುತ್ತಿತ್ತು. ಆಗಲೂ ಅಷ್ಟೇ ಸತ್ತೇ ಹೋದೆ ಅಂದುಕೊಂಡು. ಸಾವಿಗೆ ಹತ್ತಿರ ಹೋಗಿ ವಾಪಸ್ ಬಂದ ಅನುಭವ ಅದು" ಎಂದು ನಟಿ ತೇಜಸ್ವಿನಿ ಹೇಳಿದ್ದಾರೆ.

More from Filmibeat

English summary
Actress Tejaswini Prakash reveals terrifying experience during plane turbulence from Paris to Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X