ನಟಿ ತೇಜಸ್ವಿನಿ ಪ್ರಕಾಶ್ ತಂದೆ ಅನಾರೋಗ್ಯದಿಂದ ನಿಧನ

ಕನ್ನಡದ ಪ್ರತಿಭಾನ್ವಿತ ನಟಿ ತೇಜಸ್ವಿನಿ ಪ್ರಕಾಶ್ ಅವರ ತಂದೆ ಪ್ರಕಾಶ್ ಅವರು ಗುರುವಾರ ಸಂಜೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏ. 23ರಂದು ಕೊನೆಯುಸಿರೆಳೆದರು.

Recommended Video

ಇದಕ್ಕೆ ಅಲ್ವಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರೇಟ್ ಅನ್ಸೋದು | Filmibeat Kannada

ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬೆಂಗಳೂರಿನ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆಯ ಅಗಲುವಿಕೆಯ ಮಾಹಿತಿಯನ್ನು ತೇಜಸ್ವಿನಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನೀಡಿದ್ದಾರೆ. 'ರಿಪ್ ಅಪ್ಪಾ' ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್ ಅವರ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಜತೆಗೆ ತೇಜಸ್ವಿನಿ ಅವರಿಗೆ ಸಮಾಧಾನದ ಮಾತುಗಳನ್ನಾಡಿದ್ದಾರೆ. ಮುಂದೆ ಓದಿ.

ನಿರ್ದೇಶಕ ಕೆಎಂ ಚೈತನ್ಯ ಸಂತಾಪ

ನಿರ್ದೇಶಕ ಕೆಎಂ ಚೈತನ್ಯ ಸಂತಾಪ

'ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸಿಕೊಳ್ಳುವ ಶಕ್ತಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೊರಕಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಹೇಳಿದ್ದಾರೆ.

ಪ್ರತಿ ಜೀವಿಗೂ ಸಾವು ಬರುತ್ತದೆ

ಪ್ರತಿ ಜೀವಿಗೂ ಸಾವು ಬರುತ್ತದೆ

'ಪ್ರತೀ ಜೀವಿಗೂ ಸಾವು ಇದೆ. ಯಾವತ್ತಾದರೂ ಸಾಯಲೇ ಬೇಕು. ದೇಹಕ್ಕೆ ವಿಶ್ರಾಂತಿ ಅಷ್ಟೇ ವಿನಾ ಅವರ ನೆನಪು ಸದಾ ಹಸಿಯಾಗಿ ಇರುತ್ತದೆ' ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ಅವರು ಸರಳ ವ್ಯಕ್ತಿ

ಅವರು ಸರಳ ವ್ಯಕ್ತಿ

'ಸಾವು ಎನ್ನುವುದು ಕೇವಲ ದೇಹಕ್ಕೆ ಬರುತ್ತದೆ ಹೊರತು ಆತ್ಮಕ್ಕೆ ಅಲ್ಲ. ಅವರು ಯಾವಾಗಲೂ ನಿಮ್ಮ ಜೊತೆಯಲ್ಲಿ ಇರುತ್ತಾರೆ. ಈ ವಿಷಯ ಕೇಳಿ ಬಹಳ ನೋವಾಗಿದೆ. ಆದರೆ ಎಂಥ ಸಿರಿವಂತನೇ ಆಗಲಿ ಅಥವಾ ಕಡು ಬಡವನು ಆಗಲಿ ವಿಧಿಯ ಮುಂದೆ ತಲೆಬಾಗಲೇ ಬೇಕು ಈ ಸೃಷ್ಟಿಯಲ್ಲಿ ಯಾವುದು ಶಾಶ್ವತ ಅಲ್ಲ ಇಂದು ಅವರು ನಾಳೆ ನಾವು. ಅವರ ಸರಳತೆ ಜೀವನ ಸಾಧನೆ ಮಾಡಿದ ವ್ಯಕ್ತಿ ಅವರ ಜೀವನದಲ್ಲಿ ಕಷ್ಟ, ನೋವು, ಸೋಲು-ಗೆಲುವು ಸುಖ-ಸಂತೋಷ ಎಲ್ಲಾ ತರವಾದ ಕ್ಷಣವನ್ನು ನೋಡಿದವರು' ಎಂದು ಅವರಿಗೆ ಆಪ್ತರಾಗಿದ್ದವರು ಹೇಳಿದ್ದಾರೆ.

ರಾಬರ್ಟ್ ಚಿತ್ರದಲ್ಲಿ ನಟನೆ

ರಾಬರ್ಟ್ ಚಿತ್ರದಲ್ಲಿ ನಟನೆ

ತೇಜಸ್ವಿನಿ ಅವರು ಪ್ರಸ್ತುತ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು, ಮಾತಾಡ್ ಮಾತಾಡ್ ಮಲ್ಲಿಗೆ, ಗಜ, ಬಂಧು ಬಳಗ, ನಿತ್ಯ ಜತೆ ಸತ್ಯ, ಅರಮನೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Kannada actress Tejaswini Prakash's father Prakash passed away on Thursday evening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X