ವೈಷ್ಣವಿ ಗೌಡ ಅಭಿನಯದ ಬಹುಕೃತ ವೇಷಂ ಅಮೆರಿಕದಲ್ಲೂ ರಿಲೀಸ್
ಕಿರುತೆರೆಯಲ್ಲಿ ವೈಷ್ಣವಿ ಗೌಡ ಜನಪ್ರಿಯರಾಗಿದ್ದಾರೆ. ಈ ಸಿನಿಮಾ ಕಡೆಗೂ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಸದ್ಯ ವೈಷ್ಣವಿ ಗೌಡ 'ಬಹುಕೃತ ವೇಷಂ' ಅನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದೇ ಫೆಬ್ರವರಿ 18ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹೌದು, 'ಬಹುಕೃತ ವೇಷಂ' ವಿದೇಶದಲ್ಲೂ ಬಿಡುಗಡೆಯಾಗುತ್ತಿದೆ.
'ಬಹುಕೃತ ವೇಷಂ' ಒಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ಕಿರುತೆರೆ ನಟಿ ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾದ ಕತೆಯನ್ನು ಹೆಣೆಯಲಾಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರುವಂತೆ ಮಾಡುತ್ತದೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ. ಈ ಕಾನ್ಫಿಡೆನ್ಸ್‌ನಲ್ಲೇ ವಿದೇಶದಲ್ಲೂ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ರಾಜ್ಯದ 70 ಥಿಯೇಟರ್‌ನಲ್ಲಿ ರಿಲೀಸ್
'ಬಹುಕೃತ ವೇಷಂ' ಸಿನಿಮಾ ಹೆಸರು ಹೇಳಲು ಕೊಂಚ ಕಷ್ಟ ಅಂತ ಅನಿಸಬಹುದು. ಇನ್ನು ಸ್ಟೋರಿ ಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದರೂ ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ಸಿನಿಮಾ ನೋಡಬಹುದಾಗಿದೆ. ಇದೇ ಫೆಬ್ರವರಿ 18ರಂದು 'ಬಹುಕೃತ ವೇಷಂ' ಸಿನಿಮಾ ಕರ್ನಾಟಕದಲ್ಲಿ ಸುಮಾರು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಹಳ ಉತ್ಸಾಹದಲ್ಲಿರುವ ಚಿತ್ರತಂಡ ಸಿನಿಮಾವನ್ನು ಕರ್ನಾಟಕದಲ್ಲಿಅಷ್ಟೇ ಅಲ್ಲದೆ ವಿದೇಶದಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಅಮೆರಿಕಾದ 25 ಕಡೆ ಸಿನಿಮಾ ರಿಲೀಸ್
'ಬಹುಕೃತ ವೇಷಂ' ಸಿನಿಮಾ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಅಮೆರಿಕಾದಲ್ಲೂ ಬಿಡುಗಡೆಯಾಗುತ್ತಿದೆ. ಸುಮಾರು 25ಕ್ಕೂ ಹೆಚ್ಚು ಕಡೆ ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಟ್ರೈಲರ್ ನೋಡಿದ ಬಳಿಕ ಅಮೆರಿಕಾದ ನಿವಾಸಿಯೊಬ್ಬರು 'ಬಹುಕೃತ ವೇಷಂ' ಸಿನಿಮಾವನ್ನು ಯು.ಎಸ್.ಎ ನಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರಂತೆ. ಹೀಗಾಗಿ ಅಮೆರಿಕಾ ಕನ್ನಡಿಗರೂ ಈ ಸಿನಿಮಾವನ್ನು ಫೆಬ್ರವರಿ 18ರಂದು ವೀಕ್ಷಿಸಲಿದ್ದಾರೆ.

'ಬಹುಕೃತ ವೇಷಂ' ಟೈಟಲ್ ಬಂದಿದ್ದೇಗೆ?
'ಬಹುಕೃತ ವೇಷಂ' ಸಿನಿಮಾ ಟೈಟಲ್ ವಿಭಿನ್ನವಾಗಿದ್ದು ಟೈಟಲ್ ಹುಟ್ಟಿದ್ದರ ಬಗ್ಗೆ ನಟಿ ವೈಷ್ಣವಿ ಗೌಡ ಕೆಲವ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. "ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. "ಉದರ ನಿಮಿತ್ತಂ ಬಹುಕೃತ ವೇಷಂ" ಎಂಬುದರಿಂದ ಈ ಚಿತ್ರದ ಶೀರ್ಷಿಕೆ ತೆಗೆದುಕೊಂಡಿದ್ದೇವೆ. ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ. ಇದೇ ಈ ಸಿನಿಮಾದ ಕಥೆಯ ತಿರುಳು." ಎನ್ನುತ್ತಾರೆ ನಟಿ ವೈಷ್ಣವಿ ಗೌಡ.

'ಬಹುಕೃತ ವೇಷಂ' ಭರ್ಜರಿ ಪ್ರಚಾರ
'ಬಹುಕೃತ ವೇಷಂ' ಸಿನಿಮಾ ಬಗ್ಗೆ ಚಿತ್ರತಂಡ ಸದ್ದಿಲ್ಲದೆ ಪ್ರಚಾರ ಮಾಡುತ್ತಿದೆ. ರಾಜ್ಯಾದ್ಯಂತ ಎರಡು ವಾಹನಗಳು 'ಬಹುಕೃತ ವೇಷಂ' ಸಿನಿಮಾದ ಪ್ರಚಾರ ಮಾಡುತ್ತಾ ಸಂಚರಿಸುತ್ತಿವೆಯಂತೆ.
'ಬಹುಕೃತ ವೇಷಂ' ಡಿಲೇರಿಯಂ ಫೋಬಿಯಾ ಎನ್ನುವ ವಿಚಿತ್ರ ಖಾಯಿಲೆಯ ಮೇಲೆ ಹೆಣೆದ ಚಿತ್ರ. ಒಬ್ಬ ವ್ಯಕ್ತಿ ಅವನ ವಿರುದ್ಧ ಅವನೇ ಫೈಟ್ ಮಾಡುತ್ತಾನೆ. ಅಂದ್ಹಾಗೆ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿರುವುದು ಅಧ್ಯಾಯ ತೇಜ್. ಫೆಬ್ರವರಿ 18ರಂದು ಬಿಡುಗಡೆಯಾಗುತ್ತಿರುವ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೇ ಸಿನಿಮಾ.


Click it and Unblock the Notifications











