"ಮುಂದಿನ ಪೀಳಿಗೆಯೂ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ 'ದಿ ಕೇರಳ ಸ್ಟೋರಿ' ನೋಡಿ": ಫೋಟೊ ವೈರಲ್

'ದಿ ಕೇರಳ ಸ್ಟೋರಿ' ಸಿನಿಮಾ ಇಡೀ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿದೆ. ಈ ಸಿನಿಮಾಗೆ ಹಿಂದೂಪರ ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೊಂದು ಕಡೆ ವಿರೋಧ ವ್ಯಕ್ತವಾಗುತ್ತಿದೆ. ದಕ್ಷಿಣ ಭಾರತದ ಹಲವೆಡೆ ಸಿನಿಮಾ ಸರಿಯಾಗಿ ರಿಲೀಸ್ ಆಗದೇ ಹೋದರೂ, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ.

ಕೆಲವು ದಿನ 'ದಿ ಕೇರಳ ಸ್ಟೋರಿ' ಬಗೆಗಿನ ಸುದ್ದಿಗಳು ತಣ್ಣಗಾಗಿದ್ದವು. ಆದರೆ, ಆದ್ರೀಗ ಮತ್ತೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಆದರೆ, ಈ ಬಾರಿ ಸುದ್ದಿಯಾಗಿರೋದು ಕೇರಳದಲ್ಲಿ ಅಲ್ಲ. ತಮಿಳುನಾಡಿನಲ್ಲಿ ಅಲ್ಲ. ಬದಲಿಗೆ ಕರ್ನಾಟಕದಲ್ಲಿ.

The Kerala Story Movie

ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೂ 'ದಿ ಕೇರಳ ಸ್ಟೋರಿ' ತಲುಪಿದೆ. ಹಾಗಂತ ಇಲ್ಲೇನು ಸಿನಿಮಾ ಪ್ರದರ್ಶನ ಆಗುತ್ತಿಲ್ಲ. ಬದಲಾಗಿ ವಿಭಿನ್ನವಾಗಿ ಸಿನಿಮಾವನ್ನು ಪ್ರಚಾರ ಮಾಡಲಾಗುತ್ತಿದೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೂಕಾಂಬಿಕೆ ಸನ್ನಿಧಿಯಲ್ಲಿ 'ದಿ ಕೇರಳ ಸ್ಟೋರಿ'

ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಬಗ್ಗೆ ಕೊಲ್ಲೂರಿನ ಮೂಕಾಂಬಿಕೆ ಸನ್ನಿಧಾನದಲ್ಲಿ ಪ್ರಚಾರ ಮಾಡಲಾಗುತ್ತಿದೆ. 'ದಿ ಕೇರಳ ಸ್ಟೋರಿ' ಸಿನಿಮಾದ ಫ್ಲೆಕ್ಸ್ ಅನ್ನು ಮೂಕಾಂಬಿಕೆ ದೇವಿ ಇರುವ ಆವರಣದಲ್ಲಿ ಹಾಕಲಾಗಿದೆ. ಈ ಮೂಲಕ ಅಲ್ಲಿಗೆ ಬರುವ ಪ್ರವಾಸಿಗರಿಗೆ ಸಿನಿಮಾ ನೋಡುವಂತೆ ಹೇಳಲಾಗುತ್ತಿದೆ.

ಕೊಲ್ಲೂರಿನಲ್ಲಿ 'ದಿ ಕೇರಳ ಸ್ಟೋರಿ' ಫ್ಲೆಕ್ಸ್‌ ಅಲ್ಲಲ್ಲಿ ಕಾಣಿಸುತ್ತಿವೆ. ಇಂಗ್ಲಿಷ್ ಹಾಗೂ ಮಲಯಾಳಂ ಎರಡೂ ಭಾಷೆಯಲ್ಲೂ " ಮುಂದಿನ ಪೀಳಿಗೆಯೂ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ 'ದಿ ಕೇರಳ ಸ್ಟೋರಿ' ನೋಡಿ" ಎಂದು ಈ ಫ್ಲೆಕ್ಸ್‌ನಲ್ಲಿ ಬರೆಯಲಾಗಿದೆ.

The Kerala Story Movie

ಮಲಯಾಳಿಗಳೇ ಗುರಿ

'ದಿ ಕೇರಳ ಸ್ಟೋರಿ' ಸಿನಿಮಾದ ಫ್ಲೆಕ್ಸ್ ಅನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಕಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ಹೆಸರು ಈ ಬ್ಯಾನರ್ ಹಿಂದೆ ಇದೆ ಎಂದು ಹೇಳಲಾಗುತ್ತಿದೆ.

ಕೊಲ್ಲೂರು ಮೂಕಾಂಬಿಕೆ ಸನ್ನಿಧಾನಕ್ಕೆ ಕೇರಳದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೀಗಾಗಿ ಅವರನ್ನು ಗುರಿಯಾಗಿಸಿಕೊಂಡೇ 'ದಿ ಕೇರಳ ಸ್ಟೋರಿ' ಸಿನಿಮಾದ ಫ್ಲೆಕ್ಸ್ ಹಾಕಲಾಗಿದೆ. ಹೀಗಾಗಿ ಈ ಫ್ಲೆಕ್ಸ್ ಇನ್ಯಾವ ರೀತಿ ವಿವಾದಕ್ಕೆ ಎಡೆ ಮಾಡಿಕೊಡುತ್ತೆ? ಅನ್ನೋದು ಆತಂಕ ಶುರುವಾಗಿದೆ.

ಬಾಕ್ಸಾಫೀಸ್‌ನಲ್ಲೂ ಭರ್ಜರಿ ರೆಸ್ಪಾನ್ಸ್

'ದಿ ಕೇರಳ ಸ್ಟೋರಿ' ಸಿನಿಮಾಗೆ ಬಾಕ್ಸಾಫೀಸ್‌ನಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ಕೇರಳದಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ತಮಿಳುನಾಡಿನಲ್ಲಿ ಕೆಲವೇ ಕಡೆಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕ ಬಿಟ್ಟರೆ, ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಹೀಗಿದ್ದರೂ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿದೆಸ.

'ದಿ ಕೇರಳ ಸ್ಟೋರಿ' ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಎರಡನೇ ವಾರದ ಹೊತ್ತಿಗೆ ಸಿನಿಮಾದ ಕಲೆಕ್ಷನ್ 150 ಕೋಟಿ ರೂ. ಸಮೀಪದಲ್ಲಿದೆ. ಅಂದಾಜು ಲೆಕ್ಕಾಚಾರದ ಪ್ರಕಾರ, ಇದೂವರೆಗೂ ಸುಮಾರು 136.74 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

More from Filmibeat

English summary
Adah Sharma Starrer The Kerala Story Movie Flex Seen In Near Mookambika Temple Kollur Udupi, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X