Adipurush: ಕರ್ನಾಟಕದಲ್ಲಿ 'ಆದಿಪುರುಷ್' ಕನ್ನಡ ಅವತರಣಿಗೆ ಸಿಕ್ಕ ಸ್ಕ್ರೀನ್ಸ್ ಎಷ್ಟು? ಕೆಆರ್‌ಜಿ ಲೆಕ್ಕವೆಷ್ಟು?
ಇತ್ತೀಚೆಗೆ ಸೂಪರ್‌ಸ್ಟಾರ್ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿವೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್ ಸಿನಿಮಾಗಳು ಬೇರೆ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಬಹುತೇಕ ಕನ್ನಡ ಬಿಟ್ಟು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇರೆ ಭಾಷೆಗಳಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.
ಡಬ್ಬಿಂಗ್ ಸಿನಿಮಾಗಳು,ತೆಲುಗು, ತಮಿಳು, ಹಿಂದಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿವೆ. ಆದರೆ, ಕನ್ನಡಕ್ಕೆ ಡಬ್ ಆದ ಸಿನಿಮಾಗಳಿಗೆ ಮಾತ್ರ ನೀರಸ ಪ್ರತಿಕ್ರಿಯೆ ಸಿಗುತ್ತಿತ್ತು. ಆದ್ರೀಗ ಕೆಆರ್‌ಜಿ ಸ್ಟುಡಿಯೋ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. 'ಆದಿಪುರುಷ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಾಖಲೆ ಸ್ಕ್ರೀನ್‌ಗಳಲ್ಲಿ ಕನ್ನಡ ಡಬ್ ವರ್ಷನ್ ಅನ್ನು ರಿಲೀಸ್ ಮಾಡಿದೆ.

ಇಷ್ಟೊಂದು ಸ್ಕ್ರೀನ್‌ಗಳಲ್ಲಿ ಕನ್ನಡಕ್ಕೆ ಡಬ್ ಆದ ಸಿನಿಮಾ ರಿಲೀಸ್ ಆಗಿರಲೇ ಇಲ್ಲ. ಇದರೊಂದಿಗೆ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 'ಆದಿಪುರುಷ್' ಮೊದಲ ದಿನವೇ ದೊಡ್ಡ ಮೊತ್ತ ಕಲೆ ಹಾಕಿದೆ ಎಂದು ಲೆಕ್ಕಚಾರ ಹಾಕಿದೆ. ಅಷ್ಟಕ್ಕೂ 'ಆದಿಪುರುಷ್' ಎಷ್ಟು ಸ್ಕ್ರೀನ್‌ಗಳಲ್ಲಿ ಕನ್ನಡ ಅವತರಣಿಕೆ ರಿಲೀಸ್ ಆಗಿದೆ? ಯಾವ್ಯಾವ ಭಾಷೆಯಲ್ಲಿ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಆದಿಪುರುಷ್' ಕನ್ನಡ ಎಷ್ಟು ಸ್ಕ್ರೀನ್?
ಕರ್ನಾಟಕದಲ್ಲಿ 'ಆದಿಪುರುಷ್' ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ. ಐದೂ ಭಾಷೆಯಲ್ಲಿ ಕರ್ನಾಟಕ ಏರಿಯಾ ಹಕ್ಕು ಕೆಆರ್‌ಜಿಗೆ ಸಿಕ್ಕಿದೆ. ಈ ವಿಷಯ ಕನ್ನಡಿಗರಿಗೆ ಮುಟ್ಟುತ್ತಿದ್ದಂತೆ, 'ಆದಿಪುರುಷ್' ಕನ್ನಡ ಅವತರಣಿಕೆಗೆ ಕಡಿಮೆ ಸ್ಕ್ರೀನ್‌ಗಳು ನೀಡಲಾಗಿದೆ ಅನ್ನೋ ಆರೋಪ ಮಾಡಲಾಗಿತ್ತು. ಅದಕ್ಕೆ ಸ್ವತ: ಕೆಆರ್‌ಜಿ ಸ್ಟುಡಿಯೋ ಒಂದು ದಿನ ಮುನ್ನವೇ ಅಂಕಿ ಅಂಶಗಳನ್ನು ನೀಡಿತ್ತು.
'ಆದಿಪುರುಷ್' ಸಿನಿಮಾದ ಕನ್ನಡ ವರ್ಷನ್ ಅನ್ನು ಸುಮಾರು 146 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿದೆ. ಕನ್ನಡಕ್ಕೆ ಡಬ್ ಆದ ಸಿನಿಮಾವನ್ನು ಇಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಿದ್ದು ಇದೇ ಮೊದಲು. ಹೀಗಾಗಿ ಕರ್ನಾಟಕದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ.
ಯಾವ್ಯಾವ ಭಾಷೆಗೆ ಎಷ್ಟೆಷ್ಟು ಸ್ಕ್ರೀನ್"
ಕರ್ನಾಟಕದಲ್ಲಿ ಬೇರೆ ಭಾಷೆಯ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದ್ದರೂ, ಓರಿಜಿನಲ್ ವರ್ಷನ್‌ಗೆ ಹೆಚ್ಚು ಸ್ಕ್ರೀನ್‌ಗಳು ಸಿಗುತ್ತವೆ. 'ಆದಿಪುರುಷ್' ಕೂಡ ಇದರಿಂದ ಹೊರತಾಗಿಲ್ಲ. ತೆಲುಗು ವರ್ಷನ್ ಹೆಚ್ಚು ರಿಲೀಸ್ ಆಗಿದೆ. ಆದರೆ, ಈ ಹಿಂದೆ ತೆರೆಕಂಡ ಡಬ್ ಸಿನಿಮಾಗಳಿಗೆ ಸಿಕ್ಕ 5 ರಿಂದ 10 ಸ್ಕ್ರೀನ್‌ಗಳಿಗೆ ಹೋಲಿಸಿದರೆ, ಇದು ಮೈಲಿಗಲ್ಲು ಎನ್ನಬಹುದು.
ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ನೀಡುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ರಿಲೀಸ್ ಆದ ಥಿಯೇಟರ್‌ಗಳ ಸಂಖ್ಯೆ ಹೀಗಿದೆ.
ಕನ್ನಡದ 146 (ಸ್ಕ್ರೀನ್ಸ್)
ತೆಲುಗು 192 (ಸ್ಕ್ರೀನ್ಸ್)
ಹಿಂದಿ 98 (ಸ್ಕ್ರೀನ್ಸ್)
ತಮಿಳು 18 (ಸ್ಕ್ರೀನ್ಸ್)
ಮಲಯಾಳಂ 03 (ಸ್ಕ್ರೀನ್ಸ್)
ಒಟ್ಟು 457 (ಸ್ಕ್ರೀನ್ಸ್)
ಮೊದಲ ದಿನದ ಕಲೆಕ್ಷನ್ ಎಷ್ಟು?
'ಆದಿಪುರುಷ್' ಬಿಗ್ ಬಜೆಟ್ ಸಿನಿಮಾ. ಅಲ್ಲದೆ ಪೌರಾಣಿಕ ಸಿನಿಮಾ ಕೂಡ ಹೌದು. ಬಹಳ ದಿನಗಳಿಂದ ಪೌರಾಣಿಕ ಸಿನಿಮಾ ತೆರೆಕಂಡಿರಲಿಲ್ಲ. ಹೀಗಾಗಿ ಜನರು ಸಿನಿಮಾ ನೋಡುವ ಸಾಧ್ಯಗಳಿವೆ ಎಂದು ನಿರೀಕ್ಷೆ ಮಾಡಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಅಡ್ವಾನ್ಸ್ ಬುಕಿಂಗ್ ಅಂತ ಮೊದಲ ದಿನ ಕರ್ನಾಟಕದಲ್ಲಿ 1,15 ಸಾವಿರದ ಟಿಕೆಟ್‌ಗಳು ಮಾರಾಟ ಆಗಿವೆ. '
ಹೀಗಾಗಿ ನಿರೀಕ್ಷೆಯಂತೆ ಆದಿಪುರುಷ್ ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಅಂದಾಜು ಹಾಕಲಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ, 'ಆದಿಪುರುಷ್' ಕರ್ನಾಟಕದಲ್ಲಿ ಸುಮಾರು 3 ರಿಂದ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಮುಂದೆನಾಗುತ್ತೋ ನೋಡಬೇಕಿದೆ.


Click it and Unblock the Notifications











