ರಕ್ತದಾನ ಮಾಫಿಯಾ ಬೇಧಿಸಲು ಹೊರಟ ಎಸ್.ನಾರಾಯಣ್; '5D'ರಿಲೀಸ್‌ಗೆ ಕೌಂಟ್‌ಡೌನ್!
ಕಲಾ ಸಾಮ್ರಾಟ್ ಎಸ್ ನಾರಾಯಣ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. '5D' ಸಿನಿಮಾದ ಅದ್ಭುತ ಕಥೆಯೊಂದಿಗೆ ನಿರ್ದೇಶಕರು ನಿರೀಕ್ಷೆಯನ್ನು ಮೂಡಿಸಿದ್ದಾರೆ. ಕಲಾ ಸಾಮ್ರಾಟ್ ಕಮ್‌ಬ್ಯಾಕ್ ಸಿನಿಮಾದಲ್ಲಿ ಆದಿತ್ಯ, ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾ ಎಸ್.ನಾರಾಯಣ್ ನಿರ್ದೇಶಿಸಿದ 50ನೇ ಸಿನಿಮಾವಿದು. ಇದು ಫೆಬ್ರವರಿ 16ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
'5D' ಸಿನಿಮಾ ಟೈಟಲ್‌ನಿಂದಲೇ ಕುತೂಹಲವನ್ನು ಕೆರಳಿಸಿದೆ. ಈ ಟೈಟಲ್ ಹೇಳುವಂತೆ ಸಿನಿಮಾದ ಕತೆ ಐದು ಡೈಮೆನ್ಷನ್‌ಗಳಲ್ಲಿ ಹೇಳಿರಬಹುದು ಎಂದು ಹಲವರು ಊಹೆ ಮಾಡುತ್ತಿದ್ದಾರೆ. ಈ ಸಿನಿಮಾ ಬೇರೆಯದ್ದೇ ಆಯಾಮದಲ್ಲಿ ಕಥೆಯನ್ನು ಹೇಳಿರುವುದಾಗಿ ನಿರ್ದೇಶಕ ಎಸ್. ನಾರಾಯಣ್ ಭರವಸೆ ಕೊಟ್ಟಿದ್ದಾರೆ. ಆಕ್ಷನ್ ಸೀಕ್ವೆನ್ಸ್, ಮ್ಯೂಸಿಕ್ ಕಂಪೋಸಿಷನ್, ಕಾಮಿಡಿ, ರೊಮ್ಯಾನ್ಸ್ ಮತ್ತು ಫ್ಯಾಮಿಲಿ ಡ್ರಾಮ ಇವುಗಳಿಗಂತ ಈ ಸಿನಿಮಾ ವಿಭಿನ್ನವಾಗಿದೆ.

ಈ ಸಿನಿಮಾದಲ್ಲಿ ಆದಿತ್ಯ ಪಾತ್ರ ಗಂಭೀರದ್ದಾಗಿದೆ. ಈ ಹಿಂದೆ ಆದಿತ್ಯ ನಟಿಸಿದ ಕಾಮಿಡಿ ಹಾಗೂ ರೊಮ್ಯಾಂಟಿಕ್ ಪಾತ್ರಗಳಿಗಿಂತ ವಿಭಿನ್ನವಾಗಿದೆ. ಆದಿತ್ಯ ಪರ್ಫಾಮೆನ್ಸ್ ಬಗ್ಗೆ ಎಸ್. ನಾರಾಯಣ್ ತೃಪ್ತಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಆದಿತ್ಯ ಡೆಡಿಕೇಷನ್ ಹಾಗೂ ಪಾತ್ರ ನಿರ್ವಹಣೆಯ ಬಗ್ಗೆನೂ ಖುಷಿಯಾಗಿದ್ದಾರೆ.
ಎಸ್.ನಾರಾಯಣ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಜ್ಯೋತಿ ರೈ ಹಾಗೂ ರಾಜೇಶ್ ಎಸ್ ರಾವ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಈ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರ ವಿಭಾಗದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ತೀರ್ಮಾನಿಸಿದ್ದಾರೆ.

ರಕ್ತದಾನದ ಹಿನ್ನೆಲೆಯನ್ನಿಟ್ಟುಕೊಂಡು '5D' ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ರಕ್ತದಾನ ಮಾಡಿದ ಬಳಿಕ ಹೇಗೆ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತೆ ಅನ್ನೋದನ್ನು ಈ ಸಿನಿಮಾ ಹೇಳಲಾಗಿದೆ. '5D'ಸಿನಿಮಾದ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾದ ನಿರೂಪಣೆ ಟೈಟ್ ಆಗಿದೆ ಅನ್ನೋ ಸುಳಿವು ಸಿಗುತ್ತಿದೆ. ಈ ಸಿನಿಮಾ ಮೂಲಕ ಎಸ್ ನಾರಾಯಣ್ ಪವರ್‌ಫುಲ್ ಸಂದೇಶವನ್ನು ಮನರಂಜನೆಯ ಜೊತೆಗೆ ರವಾನೆ ಮಾಡುತ್ತಿರೋದಾಗಿ ಹೇಳಲಾಗುತ್ತಿದೆ.
ಕನ್ನಡ ಪ್ರೇಕ್ಷಕರು ಹೊಸ ಆಲೋಚನೆ ಹಾಗೂ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಾರೆ ಅನ್ನೋದು ಎಸ್ ನಾರಾಯಣ್ ನಂಬಿಕೆ. ಹಾಗೇ ಈ ಸಿನಿಮಾದ ಹೊಸ ಕಥಾಹಂದರಕ್ಕೂ ಮೆಚ್ಚುಗೆ ಸೂಚಿಸುತ್ತಾರೆ ಅನ್ನೋ ನಂಬಿಕೆ ಅವರದ್ದು. ಕನ್ನಡಿಗರು ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ. ಜೊತೆ ತಮ್ಮ ಸಿನಿಮಾ ಬೆಂಬಲ ಕೊಡುತ್ತಾರೆ ಅನ್ನೋ ನಂಬಿಕೆ ಇವರದ್ದು.
ಎಸ್.ನಾರಾಯಣ್ ವೃತ್ತಿ ಬದುಕಿಗೆ '5D' ಸಿನಿಮಾ ಹೊಸ ಮೈಲಿಗಲ್ಲಾಗುತ್ತೆ ಅನ್ನೋ ನಿರೀಕ್ಷೆಯನ್ನು ಹುಟ್ಟಾಕಿದೆ. ಅವರ ನಿರ್ದೇಶನಕ್ಕೆ ಈ ಸಿನಿಮಾ ಹೊಸ ಡೈಮೆನ್ಷನ್ ಸಿಗಬಹುದೆಂಬ ನಿರೀಕ್ಷೆಯಿದೆ. ಕನ್ನಡ ಪ್ರೇಕ್ಷಕರಿಗೆ ಒಗ್ಗಟ್ಟಾಗಿ ಒಂದೊಳ್ಳೆಯ ಈ ಸಿನಿಮಾವನ್ನು ನೀಡಿದ್ದೇವೆ ಅನ್ನೋ ನಂಬಿಕೆಯಿದೆ. ಹಾಗೇ ನಿರ್ದೇಶಕ ಎಸ್.ನಾರಾಯಣ್ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಆಶಾವಾದ ವ್ಯಕ್ತಪಡಿಸಿದ್ದಾರೆ.


Click it and Unblock the Notifications











