Dacoit Movie: ಬೆಂಗಳೂರಿಗೆ ಬಂದ 'ಡಕಾಯತ್'; ರಾಮೇಶ್ವರಂ ಕೆಫೆ ದೋಸೆ.. ಫ್ಯಾನ್ಸ್ ಜೊತೆ ಹರಟೆ
ತೆಲುಗಿನ ಸ್ಟಾರ್ ನಟ ಅಡವಿ ಶೇಷ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ನಟನೆಯ ತೆಲುಗು ಸಿನಿಮಾ 'ಡಕಾಯತ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇದೇ ಏಪ್ರಿಲ್ 10 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿತ್ತು. ರಿಲೀಸ್‌ಗೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದ್ದ ಸಿನಿಮಾ ಹಿಂದಿ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ತಂಡ ಬೆಂಗಳೂರಿಗೆ ಬಂದಿದೆ.
'ಡಕಾಯತ್' ಬಿಡುಗಡೆ ಬಳಿಕ ಸಿನಿಮಾದ ನಾಯಕ ಅಡವಿ ಶೇಷ್ ಹಾಗೂ ಬಾಲಿವುಡ್ ನಟ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಇಂದು (ಏಪ್ರಿಲ್ 18) ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ಬಂದಿದ್ದಾರೆ. ಅಲ್ಲದೆ ಡಕಾಯತ್ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ.

ಬೆಂಗಳೂರಿಗೆ ಯಾರೇ ಬಂದರೂ ಇಲ್ಲಿನ ಇಡ್ಲಿ, ದೋಸೆಯನ್ನು ಸವಿಯದೆ ಹಿಂತಿರುಗುವುದಿಲ್ಲ. 'ಡಕಾಯತ್' ಸಿನಿಮಾ ತಂಡ ಕೂಡ ಪ್ರಚಾರ ಮಾಡುವುದಕ್ಕೂ ಮುನ್ನ ಅಡವಿ ಶೇಷ್ ರಾಮೇಶ್ವರಂ ಕೆಫೆಗೆ ವಿಸಿಟ್ ಹಾಕಿದ್ದರು. ಅಲ್ಲಿ ತಮ್ಮ ತಂಡದೊಂದಿಗೆ ರಾಮೇಶ್ವರಂ ಕಫೆಯ ಜೊತೆ ಐಕಾನಿಕ್ ದೋಸೆಯನ್ನು ಸವಿದು ಎಂಜಾಯ್ ಮಾಡಿದರು. ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಎಲ್ಲಾ ಭಾಷೆಯ ಸಿನಿಮಾಗಳಿಗೂ ಬೆಂಗಳೂರು ಒಂಥರಾ ಹಾಟ್‌ಸ್ಟಾಟ್ ಇದ್ದಂತೆ. ಇಲ್ಲಿನ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಗೆದ್ದರೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡೋದು ಗ್ಯಾರಂಟಿ. ಹಾಗಾಗಿ ಪ್ರತಿಯೊಂದು ಸಿನಿಮಾ ತಂಡ ಬೆಂಗಳೂರನ್ನು ತಮ್ಮ ಪ್ರಚಾರದ ಒಂದು ಭಾಗವಾಗಿ ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಬಿಡುಗಡೆಗೂ ಮುನ್ನ ಮಿಸ್ ಮಾಡಿದರೆ, ಸಿನಿಮಾ ರಿಲೀಸ್ ಆದ ನಂತರವನ್ನೂ ವಿಸಿಟ್ ಹಾಕೇ ಹಾಕುತ್ತಾರೆ.
ಹೀಗಾಗಿ 'ಡಕಾಯತ್' ಸಿನಿಮಾದ ನಾಯಕ ಅಡವಿ ಶೇಷ್ ಬೆಂಗಳೂರಿಗೆ ವಿಸಿಟ್ ಹಾಕಿದ್ದಾರೆ. ಈ ವೇಳೆ ತಮ್ಮ ಪ್ರತಿ ಸಿನಿಮಾಗೂ ಕನ್ನಡಿಗರು ಸಪೋರ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಪ್ರತಿ ಸಿನಿಮಾದ ಪ್ರಚಾರವನ್ನ ಬೆಂಗಳೂರಿನಲ್ಲಿ ಮಾಡಿರುವುದಾಗಿ ಅಡವಿ ಶೇಷ್ ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಬೆಂಗಳೂರಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದು ಅಭಿಮಾನಿಗಳ ಜೊತೆ ಒಂದಿಷ್ಟು ಸಮಯ ಕಾಲ ಕಳೆದಿದ್ದಾರೆ. ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಸಿನಿಮಾ ನೋಡಿ ಸಪೋರ್ಟ್ ಮಾಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಇನ್ನು ಇದೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ-ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. "ಈಗ ನಾನು ಬೆಂಗಳೂರಿನವನೇ.. ನನ್ನನ್ನು ಸ್ವಾಗತ ಮಾಡುವ ಅವಶ್ಯಕತೆ ಇಲ್ಲ" ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗೇ "ಡಕಾಯತ್ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟ್ರೈಲರ್ ನೋಡಿದ್ರೆ ಇದು ಮಾಸ್ ಸಿನಿಮಾ ಅನ್ಸುತ್ತೆ. ಆದರೆ, ಇದರಲ್ಲಿ ಒಂದೊಳ್ಳೆಯ ಲವ್ ಸ್ಟೋರಿ ಇದೆ. ಬೆಂಗಳೂರಿನ ಜನತೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದೀರ ನಮಗೆ ಖುಷಿ ಇದೆ" ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ಇಷ್ಟೇ ಅಲ್ಲ ಜಿಟಿ ಮಾಲ್‌ನಲ್ಲಿ 'ಡಕಾಯತ್' ಸಿನಿಮಾ ನೋಡಲು ಬಂದ ಜನರನ್ನು ಅಡವಿ ಶೇಷ್ ಹಾಗೂ ಅನುರಾಗ್ ಕಶ್ಯಪ್ ಭೇಟಿ ಮಾಡಿ ಖುಷಿ ಪಟ್ಟರು. 'ಡಕಾಯತ್' ಸಿನಿಮಾದಲ್ಲಿ ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಸುನೀಲ್, ಅತುಲ್ ಕುಲಕರ್ಣಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಶನೀಲ್ ಡಿಯೋ ನಿರ್ದೇಶನ ಮಾಡಿದ್ದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇನ್ನೂ ಹೆಚ್ಚು ಗಳಿಕೆಯ ನಿರೀಕ್ಷೆ ಮಾಡಿದ್ದರು.


Click it and Unblock the Notifications
