'ವಿಕ್ರಾಂತ್ ರೋಣ' ಲೈನ್ ಕ್ಲಿಯರ್: ಕಿಚ್ಚನ ಮುಂದೆ ನಿಲ್ಲೋರೇ ಇಲ್ಲ!

ಹೆಚ್ಚು ಕಡಿಮೆ ಇನ್ನೊಂದು ವಾರ.. ಇಡೀ ವಿಶ್ವದಲ್ಲಿ ಮತ್ತೊಂದು ಕನ್ನಡ ಸಿನಿಮಾ ಸದ್ದು ಮಾಡಲಿದೆ. ಅದುವೇ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ'. ಈಗಾಗಲೇ ಸಿನಿಮಾದ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿದೆ.

'ವಿಕ್ರಾಂತ್ ರೋಣ' ಸಿನಿಮಾ ಒಂದಲ್ಲ ಎರಡಲ್ಲ ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. 'ಕೆಜಿಎಫ್ 2' ಐದು ಭಾಷೆಯಲ್ಲಿ ರಿಲೀಸ್ ಆಗಿದ್ದರೆ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆರು ಭಾಷೆಯಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ 'ವಿಕ್ರಾಂತ್ ರೋಣ'ಗೆ ಟಕ್ಕರ್ ಕೊಡಬಹುದಾದ ಸಿನಿಮಾಗೆಲ್ಲಾ ಮಕಾಡೆ ಮಲಗಿವೆ.

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಯಾವ್ಯಾವ ಭಾಷೆಯಲ್ಲಿ ಯಾವ್ಯಾವ ಸಿನಿಮಾ ಎದುರಾಗಬಹುದು? ಈ ಸಿನಿಮಾಗಳು ಗೆದ್ದರೆ, 'ವಿಕ್ರಾಂತ್ ರೋಣ' ಏಟು ಕೊಡಬಹುದಾ? ಎಂಬ ಆತಂಕವಿತ್ತು. ಆದ್ರೀಗ ಕಿಚ್ಚ ಸುದೀಪ್‌ ಎದುರು ನಿಲ್ಲೋರೇ ಇಲ್ಲ ಎನ್ನಲಾಗುತ್ತಿದೆ. ಅಷ್ಟಕ್ಕೂ 'ವಿಕ್ರಾಂತ್ ರೋಣ' ಎದುರಿಗೆ ಯಾರು ನಿಲ್ಲೋದೇ ಇಲ್ವಾ? ಡಿಟೈಲ್ಸ್‌ಗಾಗಿ ಮುಂದೆ ಓದಿ.

ಬಾಲಿವುಡ್‌-ಟಾಲಿವುಡ್‌ ಲೈನ್ ಕ್ಲಿಯರ್!

ಬಾಲಿವುಡ್‌-ಟಾಲಿವುಡ್‌ ಲೈನ್ ಕ್ಲಿಯರ್!

ಈ ವಾರ ಬಾಲಿವುಡ್‌ನಲ್ಲಿ ದೊಡ್ಡ ಸಿನಿಮಾ ರಿಲೀಸ್ ಆಗಿತ್ತು.ರಣ್‌ಬೀರ್ ಕಪೂರ್ ಹಾಗೂ ಸಂಜಯ್ ದತ್ ಕಾಂಬಿನೇಷನ್‌ ಸಿನಿಮಾ 'ಶಂಷೇರಾ' 4300ಕ್ಕೂ ಅಧಿಕ ಸ್ಕ್ರೀ‍ನ್‌ಗಳಲ್ಲಿ ರಿಲೀಸ್ ಆಗಿದೆ. ಇನ್ನೊಂದು ಕಡೆ ಟಾಲಿವುಡ್‌ನಲ್ಲಿ ನಾಗ ಚೈತನ್ಯ ಸಿನಿಮಾ 'ಥ್ಯಾಂಕ್‌ ಯೂ' ಬಿಡುಗಡೆಯಾಗಿದೆ. ಈ ಎರಡೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದರೆ 'ವಿಕ್ರಾಂತ್ ರೋಣ'ಗೆ ಥಿಯೇಟರ್‌ ಸಮಸ್ಯೆ ಆಗಬಹುದಾ? ಎಂಬ ಆತಂಕವಿತ್ತು. ಆದ್ರೀಗ 'ವಿಕ್ರಾಂತ್ ರೋಣ' ಆ ಆತಂಕದಿಂದ ಹೊರಬಂದಿದೆ.

'ಶಂಷೇರಾ', 'ಥ್ಯಾಂಕ್ ಯೂ'ಗೆ ಸೋಲು?

'ಶಂಷೇರಾ', 'ಥ್ಯಾಂಕ್ ಯೂ'ಗೆ ಸೋಲು?

ರಣ್‌ಬೀರ್ ಕಪೂರ್ ಅಭಿನಯದ 'ಶಂಷೇರಾ' ಹಾಗೂ ನಾಗ ಚೈತನ್ಯ 'ಥ್ಯಾಂಕ್ ಯೂ' ಈ ಎರಡೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿದೆ. 'ಶಂಷೇರಾ' 4300 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದರೂ, ಮೊದಲ ದಿನ ಗಳಿಸಿದ್ದು ಕೇವಲ 10 ಕೋಟಿ ರೂ. ಅಲ್ಲದೆ, ಕೆಲವೆಡೆ ಶೋಗಳನ್ನೇ ಕ್ಯಾನ್ಸಲ್ ಮಾಡಲಾಗಿದೆ. ಇನ್ನೊಂದು ಕಡೆ 'ಥ್ಯಾಂಕ್ ಯೂ' ಸಿನಿಮಾ ಕೂಡ ಬರೀ 7 ಕೋಟಿ ರೂ.ಗೆ ತೈಪ್ತಿ ಪಟ್ಟುಕೊಂಡಿದೆ. ಈಗಾಗಿ 'ವಿಕ್ರಾಂತ್ ರೋಣ' ಕ್ಲಿಯರ್ ಆಗಿದೆ ಎನ್ನಲಾಗಿದೆ.

'ವಿಕ್ರಾಂತ್ ರೋಣ'ಗೆ ಎದುರು ನಿಲ್ಲೋರೇ ಇಲ್ವಾ?

'ವಿಕ್ರಾಂತ್ ರೋಣ'ಗೆ ಎದುರು ನಿಲ್ಲೋರೇ ಇಲ್ವಾ?

'ವಿಕ್ರಾಂತ್ ರೋಣ' ಎದುರಿಗೆ ನಿಲ್ಲೋರು ಯಾರೂ ಇಲ್ವಾ? ಅನ್ನೋ ಪ್ರಶ್ನೆಗೆ ಉತ್ತರ ಇದೆ. ಕಿಚ್ಚ ಸುದೀಪ್ ಎದುರು ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಎರಡು ಸಿನಿಮಾ ನಿಲ್ಲಲಿದೆ. ಬಾಲಿವುಡ್‌ನ ಹಿಟ್ ಸಿನಿಮಾ 'ಏಕ್‌ ವಿಲನ್' ಸೀಕ್ವೆಲ್ 'ಏಕ್ ವಿಲನ್ ರಿಟರ್ನ್ಸ್' ರಿಲೀಸ್ ಆಗುತ್ತಿದೆ. ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಹಾಗೂ ದಿಶಾ ಪಟಾನಿ ಕಾಂಬಿನೇಷನ್ ಸಿನಿಮಾವಿದು. ಯಾಮಾರಿದ್ರೆ, ಈ ಕ್ರೈಂ ಥ್ರಿಲ್ಲರ್ ಸಿನಿಮಾ ಟಕ್ಕರ್ ಕೊಡಬಹುದು. ಸದ್ಯಕ್ಕೆ 'ವಿಕ್ರಾಂತ್ ರೋಣ' ಎದುರು ನಿಲ್ಲುವಷ್ಟು ಕ್ರೇಜ್ ಇಲ್ಲ. ಇನ್ನೊಂದು ಕಡೆ ಟಾಲಿವುಡ್‌ನಲ್ಲಿ ಮಾಸ್ ಮಹಾರಾಜ ರವಿತೇಜಾ ಸಿನಿಮಾ 'ರಾಮ ರಾವ್ ಆನ್ ಡ್ಯೂಟಿ' ಈ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದರೆ ಮಾತ್ರ 'ವಿಕ್ರಾಂತ್ ರೋಣ'ಗೆ ಹಿನ್ನೆಲೆಯಾಗಬಹುದು.

'ವಿಕ್ರಾಂತ್ ರೋಣ' ಭವಿಷ್ಯವೇನು?

'ವಿಕ್ರಾಂತ್ ರೋಣ' ಭವಿಷ್ಯವೇನು?

ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಸಿನಿಮಾಗೆ ಅಡ್ಡಿ ಆತಂಕಗಳು ಇಲ್ಲ. ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಅತೀ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಇನ್ನೊಂದು ಕಡೆ ತಮಿಳು ಹಾಗೂ ಮಲಯಾಳಂನಲ್ಲೂ ದೊಡ್ಡ ದೊಡ್ಡ ಸಿನಿಮಾಗಳಿಲ್ಲ. ಈ ಕಾರಣಕ್ಕೆ ಮೂರು ರಾಜ್ಯಗಳಲ್ಲಿ ಅದ್ಭುತ ಕಲೆಕ್ಷನ್ ಆಗಲೇಬೇಕು ಅಂತ ಭವಿಷ್ಯ ನುಡಿದಿದ್ದಾರೆ.

More from Filmibeat

English summary
Advantage For Vikrant Rona After Shamshera, Thank You Box Office debacle, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X