ರೇಣುಕಾಸ್ವಾಮಿ ಹತ್ಯೆ ನಡೆಯುವುದಕ್ಕೂ ಎರಡು ತಿಂಗಳು ಮುನ್ನ ದರ್ಶನ್ ಜೊತೆ ಮುನಿಸಿಕೊಂಡಿದ್ದ ಪವಿತ್ರಾ ಗೌಡ!

ರೇಣುಕಾಸ್ವಾಮಿ ಹತ್ಯೆ ಪ್ರಕರಣ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಅವರ ಗ್ಯಾಂಗ್ ಅನ್ನು ಬೆಂಬಿಡದೆ ಕಾಡುತ್ತಿದೆ. ಸದ್ಯಕ್ಕೆ ಈ ಕೇಸ್ ಮುಗಿಯುವಂತೆ ಕಾಣಿಸುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಜಮೀನು ಕ್ಯಾನ್ಸಲ್ ಆಗುತ್ತಿದ್ದಂತೆ ಈ ಪ್ರಕರಣ ಮತ್ತಷ್ಟು ಬಿಗಿಯಾಗುತ್ತಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರೆ. ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.

ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದಾಗಿದ್ದು, ಕಾನೂನು ತಜ್ಞರ ಪ್ರಕಾರ ಇನ್ನು ಆರು ತಿಂಗಳು ಈ ಜೈಲಿನಲ್ಲಿಯೇ ಇರಬೇಕಾಗಬಹುದು. ಅಲ್ಲದೇ, ಟ್ರಯಲ್ ಮುಗಿಯುವವರೆಗೂ ಜಾಮೀನು ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ರೇಣುಕಾಸ್ವಾಮಿ ಕೇಸ್ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಮುಳುವಾಗಿದೆ ಅನ್ನೋದು ಅಕ್ಷರಶ: ಸತ್ಯ.

Advocate revealed Pavithra Gowda was not talking to Darshan before the Renukaswamy incident

ಇದೇ ವೇಳೆ ಪವಿತ್ರಾ ಗೌಡ ಪರ ವಕೀಲರಾದ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಆಗುವುದಕ್ಕೂ ಎರಡು ತಿಂಗಳು ಮುನ್ನ ಪವಿತ್ರಾ ಗೌಡ ಅವರು ದರ್ಶನ್ ಮೇಲೆ ಮುನಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪವಿತ್ರಾ ಗೌಡ ಪರ ವಕೀಲರಾದ ನಾರಾಯಣಸ್ವಾಮಿ ಏನು ಹೇಳಿದ್ದಾರೆಂದು ನೋಡುವುದಾರೇ,

ಪವಿತ್ರಾ ಗೌಡ ಅಲ್ಲಿರಲಿಲ್ಲ

ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಅಡ್ವೋಕೇಟ್ ನಾರಾಯಣ ಸ್ವಾಮಿ ಆರ್‌ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಘಟನೆ ನಡೆಯುವ ವೇಳೆ ಆ ಸ್ಪಾಟ್‌ನಲ್ಲಿ ಪವಿತ್ರಾ ಗೌಡ ಇರಲಿಲ್ಲ ಎಂದು ಹೇಳಿದ್ದಾರೆ. ಹಾಗೇ ಈ ಪ್ರಕರಣ ನಡೆಯುವುದಕ್ಕೂ ಮುನ್ನ ಎರಡು ತಿಂಗಳಿನಿಂದ ದರ್ಶನ್ ಮೇಲೆ ಪವಿತ್ರಾ ಗೌಡ ಮುನಿಸಿಕೊಂಡಿದ್ದರು. ಇಬ್ಬರೂ ಮಾತಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇಬ್ಬರ ನಡುವೆ ಬಾಂಧವ್ಯ ಸರಿಯಿರಲಿಲ್ಲ ಎಂದು ಒಪ್ಪಿಕೊಂಡಂತಾಗಿದೆ.

Advocate revealed Pavithra Gowda was not talking to Darshan before the Renukaswamy incident

ಪವಿತ್ರಾ ಗೌಡ ಸ್ಪಾಟ್‌ಗೆ ಹೋಗಿಲ್ಲ.

ರೇಣುಕಾಸ್ವಾಮಿ ಹತ್ಯೆ ನಡೆಯುವ ಸಂದರ್ಭದಲ್ಲಿ ಪವಿತ್ರಾ ಗೌಡ ಅಲ್ಲಿ ಇರಲಿಲ್ಲ. ಅದಕ್ಕೆ ಯಾವುದೇ ಪುರಾವೆಗಳೂ ಇರಲಿಲ್ಲ ಎಂದಿದ್ದಾರೆ."ರೇಣುಕಾಸ್ವಾಮಿ ಘಟನೆ ನಡೆದ ದಿನ ಪವಿತ್ರಾ ಗೌಡ ಸ್ಪಾಟ್‌ಗೆ ಹೋಗಿರೋದಕ್ಕೆ ಯಾವುದೇ ಪುರಾವೆಗಳೇ ಇಲ್ಲ. ಟವರ್ ಲೋಕೇಶ್ ಅವರು ಏನು ಹಾಕಿದ್ದಾರಲ್ಲ. ಅದರಲ್ಲೂ ಕೂಡ ಪವಿತ್ರಾ ಹೋಗಿದ್ದಾರೆ ಅಂತ ಹಾಕಿಲ್ಲ. ಸುಮ್ಮನೆ ಮಾಧ್ಯಮಗಳಲ್ಲಿ ಬಂತು. ಯೂಟ್ಯೂಬ್‌ನಲ್ಲಿ ಬಂತು ಅಂತ ತಿಳಿದುಕೊಂಡಿದ್ದಾರೆ. ಖಂಡಿತವಾಗಿಯೂ ಹೋಗಿಲ್ಲ. ಈ ಪ್ರಕರಣದಲ್ಲಿ ಅವರು ಭಾಗಿಯಾಗಿಲ್ಲ. ಚಾರ್ಜ್‌ಶೀಟ್‌ನಲ್ಲಿ ಇದೆಲ್ಲ ಹೇಳಿಯೇ ಇಲ್ಲ." ಎಂದು ಪವಿತ್ರಾ ಗೌಡ ಪರ ವಕೀಲರಾದ ನಾರಾಯಣ ಸ್ವಾಮಿ ಹೇಳಿದ್ದಾರೆ.

ರಾಜಕೀಯವಾಗಿ ದರ್ಶನ್ ಟಾರ್ಗೆಟ್

ಹಾಗೇ ದರ್ಶನ್‌ರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. "ಪೊಲಿಟಿಕಲಿ ದರ್ಶನ್ ಅವರನ್ನು ಟಾರ್ಗೆಟ್ ಮಾಡಿರಬಹುದು. ನೂರಾರು ಇಂತಹ ಕೇಸ್ ಆಗುತ್ತೆ. ಅದಕ್ಕೆ ಸೆಷನ್ ಕೋರ್ಟ್‌ನಲ್ಲಿ ಬೇಲ್ ಆಗುತ್ತೆ. ಕಡೆ ಪಕ್ಷ ಹೈಕೋರ್ಟ್‌ನಲ್ಲಿ ಕ್ಯಾನ್ಸಲೇಷನ್‌ಗೆ ಹೋಗಲ್ಲ. ಅಂತಹದ್ರಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಕ್ಯಾನ್ಸಲೇಷನ್‌ಗೆ ಹೋಗುತ್ತಾರೆ ಅಂದರೆ, ರಾಜಕೀಯವಾಗಿ ಏನೂ ಮೋಟಿವೇಷನ್‌ ಇರುವುದಿಲ್ಲವೇ? ದರ್ಶನ್ ಮೇಲೆ ಯಾವುದೋ ಮುನಿಸು ಇರಬಹುದು." ಎಂದಿದ್ದಾರೆ.

ದರ್ಶನ್‌ಗೆ ಜೊತೆ ಮುನಿಸಿಕೊಂಡಿದ್ದರು.

"ಪವಿತ್ರಾಗೋಸ್ಕರ ದರ್ಶನ್ ಹೀಗೆ ಮಾಡಿದರು ಅನ್ನೋದನ್ನು ಖಂಡಿತಾ ನಾನು ಒಪ್ಪುವುದಿಲ್ಲ. ಯಾಕಂದ್ರೆ, ನಾನು ಅವರ ಲಾಯರ್ ಅನ್ನೋ ಕಾರಣಕ್ಕೆ ಅವರು ಸುಳ್ಳು ಹೇಳುತ್ತಾರೆ ಅಂದುಕೊಳ್ಳಬಹುದು. ಖಂಡಿತವಾಗಿಯೂ ಪವಿತ್ರಾ ಅವರು ಇದರಲ್ಲಿ ಭಾಗಿಯಾಗಿಯೇ ಇಲ್ಲ. ನಿಜ ಹೇಳಬೇಕು ಅಂದರೆ, ಈ ಘಟನೆ ನಡೆಯುವುದಕ್ಕೈ ಎರಡು ತಿಂಗಳ ಮುನ್ನ ಪವಿತ್ರಾ ಗೌಡ ಅವರು ದರ್ಶನ್ ಅವರ ಜೊತೆ ಅಷ್ಟಾಗಿ ಮಾತಾಡುತ್ತಿರಲಿಲ್ಲ. ಅವರಿಬ್ಬರ ನಡುವೆ ಏನೋ ಮುನಿಸು ಇತ್ತು. ಹಾಗೇ ಅವತ್ತು ದರ್ಶನ್ ಜೊತೆ ಪವಿತ್ರಾ ಹೋಗಿದ್ದಕ್ಕೆ ಯಾವುದೇ ಡಾಕ್ಯೂಮೆಂಟ್‌ಗಳೇ ಇಲ್ಲ." ಎಂದು ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಹೇಳಿದ್ದಾರೆ.

More from Filmibeat

English summary
Advocate Narayanaswamy revealed that Pavithra Gowda was not talking to Darshan before the Renukaswamy incident;
Read more about: darshan pavithra gowda case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X