For Quick Alerts
  ALLOW NOTIFICATIONS  
  For Daily Alerts

  777 ಚಾರ್ಲಿ ಬಳಿಕ ರಕ್ಷಿತ್ ಶೆಟ್ಟಿ ಕೈಯಲ್ಲಿರುವ ಸಿನಮಾಗಳ್ಯಾವುವು? ಮತ್ತೆ ನಿರ್ದೇಶನ ಯಾವಾಗ?

  |

  '777 ಚಾರ್ಲಿ' ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಭಾವನೆಗಳನ್ನು ಇಷ್ಟಪಡುವವರಿಗೆ ಹಾಗೂ ಶ್ವಾನ ಪ್ರಿಯರಿಗೆಂದೇ ಈ ಸಿನಿಮಾ ನಿರ್ಮಾಣ ಆಗಿದೆ. ಇತ್ತೀಚೆಗೆ ಚಿತ್ರ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ ಸಿಕ್ಕಿದೆ. ಈ ಬೆನ್ನಲೇ ರಕ್ಷಿತ್ ಶೆಟ್ಟಿ ಸಿನಿಮಾ ಬಿಟ್ಟು ತನ್ನ ಮುಂದಿನ ಭವಿಷ್ಯದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಬೇರೆ ಬೇರೆ ಭಾಷೆಯ ಸೆಲೆಬ್ರೆಟಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

  '777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?'777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?

  ಇದೇ ಸಂದರ್ಭದಲ್ಲಿ '777 ಚಾರ್ಲಿ' ಬಳಿಕ ರಕ್ಷಿತ್ ಶೆಟ್ಟಿಯ ಸಿನಿಮಾ ಪಟ್ಟಿ ಕೂಡ ದೊಡ್ಡದಿದೆ. ಪ್ಯಾನ್ ಇಂಡಿಯಾ ಸಿನಿಮಾದ ಬಳಿಕ ಬೇರೆ ಭಾಷೆಯಲ್ಲಿ ನಟಿಸುತ್ತಿಲ್ಲ. ಕನ್ನಡದಲ್ಲಿಯೇ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶನದ ಕಡೆಗೆ ಹೆಚ್ಚು ಒಲವು ತೋರಿದ್ದಾರೆ. ಅಷ್ಟಕ್ಕೂ ರಕ್ಷಿತ್ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆ, ಆಫರ್‌ಗಳ ಬಗ್ಗೆ ಏನು ಹೇಳಿದ್ದಾರೆ? ಅಂತ ತಿಳಿಯಲು ಮುಂದೆ ಓದಿ.

  ಬೇರೆ ಬೇರೆ ಭಾಷೆಯಿಂದ ಆಫರ್ ಬಂದಿದೆ

  ಬೇರೆ ಬೇರೆ ಭಾಷೆಯಿಂದ ಆಫರ್ ಬಂದಿದೆ

  ''ಅವನೇ ಶ್ರೀ ಮನ್ನಾರಾಯಣ' ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿಗೆ ಕನ್ನಡ ಬಿಟ್ಟು ಸಾಕಷ್ಟು ಆಫರ್‌ಗಳು ಬಂದಿತ್ತು. ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ಮಾಡುವಂತೆ ಕೇಳಿದ್ದರು. ಆದರೆ, ರಕ್ಷಿತ್ ಶೆಟ್ಟಿ ಆ ಆಫರ್‌ಗಳನ್ನು ಒಪ್ಪಿಕೊಂಡಿಲ್ಲ. ಅದಕ್ಕೆ ಕಾರಣ ಅವರ ಕೈಯಲ್ಲಿರುವ ಸಿನಿಮಾಗಳು. "ನಿಮಗೆ ಗೊತ್ತಲ್ಲ. ನನಗೆ ಆಫರ್ ಬರಲ್ಲ. ನನ್ನ ಸಿನಿಮಾವನ್ನು ನಾನೇ ಮಾಡಿಕೊಳ್ಳುವುದು. ನನಗೆ ಬೇರೆ ಭಾಷೆಯಿಂದ ಆಫರ್ ಬರುತ್ತಲೇ ಇತ್ತು. 'ಅವನೇ ಶ್ರೀಮನ್ನಾರಾಯಣದ' ನಂತರ ತಮಿಳು ಹಾಗೂ ತೆಲುಗಿನಿಂದ ಆಫರ್ ಬಂದಿದೆ. ನನಗೆ ನನ್ನ ಸಿನಿಮಾಗಳ ಬಗ್ಗೆ ಗೊತ್ತು. ಯಾವ ಯಾವ ಸಿನಿಮಾ ಮಾಡಬೇಕು ಅಂತ. ಅದಕ್ಕೆ ಒಪ್ಪಿಕೊಂಡಿಲ್ಲ." ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ರಕ್ಷಿತ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

  ರಕ್ಷಿತ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

  ರಕ್ಷಿತ್ ಶೆಟ್ಟಿ ಕಳೆದ 6 ವರ್ಷಗಳಲ್ಲಿ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ, ಅವರ ಕೈಯಲ್ಲಿ ಬರೋಬ್ಬರಿ 5 ಸಿನಿಮಾಗಳಿವೆ. ಆ ಎಲ್ಲಾ ಸಿನಿಮಾಗಳೂ ಆದಷ್ಟು ಬೇಗ ಸೆಟ್ಟೇರಲಿವೆ. "777 ಚಾರ್ಲಿ ಬಳಿಕ ಸಪ್ತಸಾಗರದಾಚೆಯಲ್ಲೋ ಸಿನಿಮಾ ನಡೆಯುತ್ತಿದೆ. ಅದಾದ ಬಳಿಕ 'ರಿಚರ್ಡ್ ಆಂಟೋನಿ' ಮಾಡಬೇಕು. ಅದಾದ ಬಳಿಕ 'ಕಿರಿಕ್ ಪಾರ್ಟಿ 2' ಇದೆ. ಇದಾದ ಬಳಿಕ 'ಪುಣ್ಯಕೋಟಿ' ಸಿನಿಮಾ ಮಾಡಬೇಕು ನನಗೆ. ಇದು ಬಿಟ್ಟರೆ ನಾನು ಬೇರೆ ಯಾವುದೂ ಸಿನಿಮಾ ಮಾಡಲಿಲ್ಲ. ಅದಷ್ಟು ಕ್ಲಾರಿಟಿ ಇದೆ ನನಗೆ." ಎನ್ನುತ್ತಾರೆ ರಕ್ಷಿತ್.

  ನಾನು ಕಥೆ ಯಾಕೆ ಕೇಳಿಲ್ಲ ಅಂದರೆ..?

  ನಾನು ಕಥೆ ಯಾಕೆ ಕೇಳಿಲ್ಲ ಅಂದರೆ..?

  "ನನಗೆ ಬೇರೆ ಆಫರ್‌ಗಳು ಬಂದಾಗ ನಾನು ಕಥೆಯನ್ನೂ ಕೇಳುವುದಕ್ಕೂ ಹೋಗುವುದಿಲ್ಲ. ನನಗೆ ಗೊತ್ತು ಇನ್ನೊಂದು ಕಥೆ ಕೇಳಿ ಇಷ್ಟ ಆಗಿ, ಅಯ್ಯೋ ಇದು ಮಾಡೋಕೆ ಆಗಲ್ಲ ಅಂತ ಯಾಕೆ ಬೇಜಾರು. ನನಗೆ ಕ್ಲಾರಿಟಿ ಇದೆ. ಇದೇ ಸಿನಿಮಾಗಳನ್ನು ನಾನು ಮಾಡುವುದು." ಎಂದು ತನ್ನ ಸಿನಿಮಾ ಬಗ್ಗೆ ಮತ್ತೆ ಮತ್ತೆ ಕ್ಲಾರಿಟಿ ಕೊಟ್ಟಿದ್ದಾರೆ.

  ಡೈರೆಕ್ಟರ್ ಸೀಟ್‌ನಲ್ಲಿ ಕೂರುತ್ತೇನೆ

  ಡೈರೆಕ್ಟರ್ ಸೀಟ್‌ನಲ್ಲಿ ಕೂರುತ್ತೇನೆ

  "10 ವರ್ಷದಲ್ಲಿ ನಾನು ಬೇರೆ ಸಿನಿಮಾವನ್ನ ಡೈರೆಕ್ಟ್ ಮಾಡಿಲ್ಲ. ನನಗೆ ಆದಷ್ಟು ಬೇಗ ಡೈರೆಕ್ಟರ್ ಸೀಟಿನಲ್ಲಿ ಕೂರಬೇಕು ಅಂತ ಆಸೆಯಿದೆ. ನಾನು ಒಮ್ಮೆ ಕೂತರೆ ಏಳಲ್ಲ ನಾನು. ಇನ್ನೂ ಸುಮಾರು ಸಿನಿಮಾಗಳನ್ನು ನಿರ್ದೇಶನ ಮಾಡುತ್ತೇನೆ. ಡೈರೆಕ್ಷನ್ ಜೊತೆ ಆಕ್ಟ್ ಕೂಡ ಮಾಡುತ್ತೇನೆ. ನನ್ನ ಫೋಕಸ್ ಸಿನಿಮಾ ಮೇಕಿಂಗ್ ಮೇಲೆ ಹೆಚ್ಚಿದೆ. ನನಗೆ ಸಿನಿಮಾ ಸೆಟ್ಟಲ್ಲಿ ಬರೀ ಆಕ್ಟಿಂಗ್ ಮಾಡುತ್ತಿದ್ದರೆ ಬೋರ್ ಆಗುತ್ತೆ. ಈ ಆರು ವರ್ಷದಲ್ಲಿ ಎರಡೇ ಸಿನಿಮಾ ಮಾಡಿದ್ದೇನೆ. ಇನ್ನುಂದೆ ತುಂಬಾ ಸಿನಿಮಾ ಮಾಡುತ್ತೇನೆ. ಹಾಗೇ ನಿರ್ದೇಶನ ಕೂಡ ಮಾಡುತ್ತೇನೆ." ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

  English summary
  After 777 Charlie Rakshit Shetty Will Act in More Movies Hers is the List Of Films, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X