'ಸಲಾರ್' ಸಿನಿಮಾದಲ್ಲಿ ನಟಿಸಿ ಬರುತ್ತಿದ್ದಂತೆ 'ಬಾಂಡ್ ರವಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಇನ್ನೊಂದು ತಿಂಗಳು 2022 ಮುಗಿದೇ ಹೋಗುತ್ತೆ. ಕೊನೆಯ ಒಂದು ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ರಿಲೀಸ್‌ಗೆ ತುದಿಗಾಲಲ್ಲಿ ನಿಂತಿವೆ. ಅದರಲ್ಲೊಂದು ಪ್ರಮೋದ್ ಅಭಿನಯದ 'ಬಾಂಡ್ ರವಿ' ಸಿನಿಮಾ.

ಪ್ರಮೋದ್ ಸ್ಯಾಂಡಲ್‌ವುಡ್ ಚಿತ್ರರಂಗದ ಉದಯೋನ್ಮುಖ ನಟ. ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮೋದ್ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ರೆಡಿಯಾಗುತ್ತಿರೋ 'ಸಲಾರ್' ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ.

'ಸಲಾರ್' ಸಿನಿಮಾದಲ್ಲಿ ಕೆಲಸ ಮಾಡಿ ಹಿಂತಿರುಗುತ್ತಿದ್ದಂತೆ ಪ್ರಮೋದ್ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದುವೇ 'ಬಾಂಡ್ ರವಿ'. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾದ ಪಾತ್ರದ ಹೆಸರು 'ಬಾಂಡ್ ರವಿ'ಯನ್ನೇ ಟೈಟಲ್ ಆಗಿಟ್ಟುಕೊಂಡು ಆಕ್ಷನ್ ಖದರ್ ತೋರಿಸಲು ಮುಂದಾಗಿದ್ದಾರೆ.

After Acting In Salaar Pramod Starrer Bond Ravi Will Be Releasing On December 9th

ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ'ರತ್ನನ್ ಪ್ರಪಂಚ'ದಲ್ಲಿ ಉಡಾಳ್ ಬಾಬು ಪಾತ್ರದ ಮೂಲಕ ಪ್ರಮೋದ್ ಜನಪ್ರಿಯರಾಗಿದ್ದರು. ಈಗ 'ಬಾಂಡ್ ರವಿ' ಸಿನಿಮಾ ಮೂಲಕ ಮಾಸ್ ಅವತಾರದಲ್ಲಿ ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

'ಬಾಂಡ್ ರವಿ' ನಟ ಪ್ರಮೋದ್ ಸಿನಿ ಬದುಕಿನ ಬಹು ನಿರೀಕ್ಷೆಯ ಸಿನಿಮಾಗಳಲ್ಲೊಂದು. ಈಗಾಗಲೇ 'ಬಾಂಡ್ ರವಿ' ಮಾಸ್ ಟೀಸರ್ ಹಾಗೂ ಸಾಂಗ್ ಮೂಲಕ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಈ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ಡಿಸೆಂಬರ್ 9ರಂದು 'ಬಾಂಡ್ ರವಿ' ಚಿತ್ರಮಂದಿರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾನೆ.

After Acting In Salaar Pramod Starrer Bond Ravi Will Be Releasing On December 9th

ಪ್ರಮೋದ್ 'ಗೀತಾ ಬ್ಯಾಂಗಲ್ ಸ್ಟೋರ್' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ 'ಮತ್ತೆ ಉದ್ಭವ', 'ಪ್ರೀಮಿಯರ್ ಪದ್ಮಿನಿ' ಹಾಗೂ 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ಸಿನಿಪ್ರಿಯರ ಮನಗೆದ್ದಿದ್ದರು. ಈಗ 'ಬಾಂಡ್ ರವಿ' ಮೂಲಕ ಮಾಸ್ ಹೀರೊ ಆಗಿ ಮಿಂಚಲು ರೆಡಿಯಾಗಿದ್ದಾರೆ. 'ಬಾಂಡ್ ರವಿ' ಇದು ಆಕ್ಷನ್ ಲವ್ ಸ್ಟೋರಿಯುಳ್ಳ ಮಾಸ್ ಸಿನಿಮಾ. ಈ ಸಿನಿಮಾಗೆ ಪ್ರಜ್ವಲ್ ಎಸ್.ಪಿ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾ ಡಿಸೆಂಬರ್ 9ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ವಿಜಯ ಪ್ರಕಾಶ್ ಹಾಡಿರುವ 'ಮಜ ಮಜ ಮಾಡು ಬಾ' ಹಾಡು, ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಸೋನು ನಿಗಂ ಹಾಡಿರುವ ರೊಮ್ಯಾಂಟಿಕ್ ಸಾಂಗ್ 'ಸಹಜ ಸಖಿ' ಈಗಾಗಲೇ ರಿಲೀಸ್ ಆಗಿ ಸಂಗೀತ ಪ್ರಿಯರ ಮನಗೆದ್ದಿದೆ. ಪ್ರಮೋದ್‌ಗೆ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಂತಾದವರು ನಟಿಸಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

More from Filmibeat

English summary
After Acting In Salaar Pramod Starrer Bond Ravi Will Be Releasing On December 9th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X