'ಕಾಟೇರ' ಆದ್ಮೇಲೆ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸೈಲೆಂಟ್ ಆಗಿದ್ದೇಕೆ? 2ನೇ ಸಿನಿಮಾದ ಕಥೆಯೇನು?
ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾಗೆ ಸ್ಯಾಂಡಲ್‌ವುಡ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಸಿಕ್ಕಿತ್ತು. ಚೊಚ್ಚಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಹ ಕನ್ನಡದ ಸೂಪರ್‌ಸ್ಟಾರ್‌ಗೆ ನಾಯಕಿಯಾದರು. ಚಿತ್ರರಂಗಕ್ಕೆ ಕನಸಿನ ರಾಣಿಯ ಪುತ್ರಿ ಲಕ್ಕಿ ಅನ್ನೋದು ಸಾಬೀತಾಗಿತ್ತು. 'ಕಾಟೇರ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು. ಇಲ್ಲಿಂದ ಆರಾಧನಾ ರಾಮ್ ವೃತ್ತಿ ವೇಗವಾಗಿ ಮುಂದಕ್ಕೆ ಸಾಗುತ್ತೆ ಅನ್ನೋ ನಿರೀಕ್ಷೆಯಿತ್ತು.
ಆದರೆ, ಮಲಾಶ್ರೀ ಪುತ್ರಿ ಎರಡನೇ ಸಿನಿಮಾ ಇನ್ನೂ ಅನೌನ್ಸ್ ಮಾಡಲೇ ಇಲ್ಲ. ಮಾಲಾಶ್ರೀ ಹಾಗೂ ಅವರ ಮಗಳು ಆರಾಧನಾ ಅಭಿಮಾನಿಗಳು ಹೊಸ ಸಿನಿಮಾಗಾಗಿ ಕಾದಿದ್ದಷ್ಟೇ ಬಂತು. ಆರಾಧನಾ ಯಾವುದು ಸುಳಿವು ನೀಡಲಿಲ್ಲ. ಈವೆಂಟ್‌ಗಳಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಕನಸಿನ ರಾಣಿಯ ಪುತ್ರಿಯನ್ನು ನೋಡಿ ಮೆಚ್ಚಿಕೊಂಡಿದ್ದಷ್ಟೇ ಬಂತು. ಇಂದಿಗೂ ಅವರ ಹೊಸ ಸಿನಿಮಾ ಬಗ್ಗೆ ಜನರು ಕಾಯುತ್ತಲೇ ಇದ್ದಾರೆ.

ಇಂತಹದ ಸಮಯದಲ್ಲಿ ಗಾಂಧಿನಗರದಲ್ಲಿ ಸುದ್ದಿಯೊಂದು ಹರಿದಾಡುವುದಕ್ಕೆ ಶುರುವಾಗಿದೆ. ಅದು ಆರಾಧನಾ ರಾಮ್ 2ನೇ ಸಿನಿಮಾದ ಬಗ್ಗೆ. ಇಂತಹದ್ದೊಂದು ಸುದ್ದು ಹರಿದಾಡುತ್ತಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮಾಡರ್ನ್ ಲುಕ್‌ನಲ್ಲಿ ಹೊಸ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆರಾಧನಾ ಲುಕ್ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿಬಿಟ್ಟಿದೆ.
ಆರಾಧನಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮದೊಂದು ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ನೆಟ್ಟಿಗರು ಎಂದಿನಂತೆ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಸೂರ್ಯಾಸ್ತವನ್ನು ನೋಡುತ್ತಾ ಕನಸುಗಳನ್ನು ಕದಿಯುವ ಮೂಡ್‌ನಲ್ಲಿ ಇದ್ದಾರೆ ನಟಿ ಆರಾಧನಾ ರಾಮ್. ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆರಾಧನಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು 'ಕಾಟೇರ'ದಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿದ ಮೇಲೆ 2ನೇ ಸಿನಿಮಾ ಮಾಡುವುದಕ್ಕೆ ತಡ ಯಾಕೆ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಳ್ಳುವುದು ಸಹಜ. ಕನ್ನಡ ಚಿತ್ರರಂಗದಿಂದ ಇದೂವರೆಗೂ ಯಾರೂ ಹೇಳಿದ ಕಥೆ ಇಷ್ಟ ಆಗಲಿಲ್ಲವೇ? ಇಲ್ಲ ಕಥೆಯನ್ನೇ ಹೇಳಲಿಲ್ಲವೇ? ಇದ್ಯಾವುದಕ್ಕೂ ಸದ್ಯ ಉತ್ತರವಿಲ್ಲ. ಗಾಂಧಿನಗರದ ಮಂದಿ ಹೇಳಿವ ಪ್ರಕಾರ, 'ಕಾಟೇರ' ಬಳಿಕ ಮತ್ತೆ ಅಷ್ಟೇ ಒಳ್ಳೆಯ ಸ್ಕ್ರಿಪ್ಟ್‌ಗೆ ಆರಾಧನಾ ರಾಮ್ ಕಾಯುತ್ತಿದ್ದರು ಅದೀಗ ಸಿಕ್ಕಿದೆ ಎನ್ನಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಗಲ್ಲಿಯಲ್ಲೊಂದು ಗುಲ್ಲೆದ್ದಿದೆ. ಮಾಲಾಶ್ರೀ ಪುತ್ತಿ ಆರಾಧನಾ ರಾಮ್ ಎರಡನೇ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಆರಾಧನಾ ಎರಡನೇ ಸಿನಿಮಾ ಅನೌನ್ಸ್ ಆಗಲಿದೆಯಂತೆ. ಈ ವಿಷಯವನ್ನು ಮಾಲಾಶ್ರೀ ಅವರೇ ಅವರ ಆಪ್ತರೊಬ್ಬರ ಬಳಿ ಹೇಳಿಕೊಂಡಿದ್ದಾರಂತೆ. ಆದರೆ, ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಆರಾಧನಾ ರಾಮ್ 2ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿದೆ. ಆದರೆ, ಯಾವಾಗ ಅನೌನ್ಸ್ ಆಗುತ್ತೆ ಅನ್ನೋದು ಮಾತ್ರ ಗೊತ್ತಿಲ್ಲ.
ಅವರ ಅಭಿಮಾನಿಗಳಿಗೆ ಎರಡನೇ ಸಿನಿಮಾ ಬಗ್ಗೆ ಚಿಂತೆಯಾದರೆ, ಆರಾಧನಾ ರಾಮ್ ಮಾತ್ರ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿಕೊಂಡು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಈಗ ವೈಟ್ ಟಾಪ್ ಹಾಗೂ ನೀಲಿ ಜೀನ್ಸ್ ತೊಟ್ಟು ಕಿಟಕಿ ಪಕ್ಕದಲ್ಲಿ ಕೂತು ಕ್ಯಾಮರಾಗೆ ಬಿಂದಾಸ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ನೆಟ್ಟಿಗರು ಹಾರ್ಟ್ ಎಮೋಜಿಗಳನ್ನು ಹಾಕಿ 'ಕಾಟೇರ' ಕ್ವೀನ್ ಅಂತ ಎಂಜಾಯ್ ಮಾಡಿದ್ದಾರೆ.


Click it and Unblock the Notifications











