Rakshit Shetty: "ಆ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.. ಎಲ್ಲರಿಗೂ ಗೌರವ ಕೊಡೋಣ"; ರಕ್ಷಿತ್ ಹಳೇ ವಿಡಿಯೋ ವೈರಲ್

ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಿಂದಲೇ ದೂರವಿದ್ದ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಮಾಡದೇ ಇದ್ದರೂ ಸುದ್ದಿಯಾಗುತ್ತಿದೆ. ಹಾಗಂತ ಅವರ ಮುಂದಿನ ಸಿನಿಮಾ 'ರಿಚರ್ಡ್ ಆಂಡನಿ' ವಿಷಯ ಬಗ್ಗೆ ಅಂತೂ ಅಲ್ಲ.

ಇದ್ದಕ್ಕಿದ್ದ ಹಾಗೇ ರಕ್ಷಿತ್ ಬಗ್ಗೆ ಮಹಿಳೆಯೊಬ್ಬರು ಆಡಿದ ಆಡಿಯೋ ವೈಲರ್ ಆಗಿತ್ತು. ಅಲ್ಲಿಂದ ಮತ್ತೆ ರಕ್ಷಿತ್ ಶೆಟ್ಟಿ ಹೆಸರು ಮುನ್ನೆಲೆಗೆ ಬಂದಿದೆ. 8 ವರ್ಷಗಳ ಹಿಂದಿನ ಹಳೆ ಆಡಿಯೋದಲ್ಲಿ ಮದುವೆ ನಿಲ್ಲುವುದಕ್ಕೆ ಖುದ್ದು ರಕ್ಷಿತ್ ಹಾಗೂ ಅವರ ಅಮ್ಮನೇ ಕಾರಣವೆಂದು ಹೇಳಲಾಗಿತ್ತು. ಇದಾಗಿಯೂ ಸೋಶಿಯಲ್ ಮೀಡಿಯಾದಲಲ್ಲಿ ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ಹಲವು ಮಂದಿ ಬಂದುದ್ದರು,

After breakup here is Rakshit Shetty reaction old video is viral on social media

ನಟಿಯೊಂದಿಗಿನ ನಿಶ್ಚಿತಾರ್ಥದ ಬಳಿಕ ಮದುವೆ ಮುರಿದು ಬಿದ್ದಿತ್ತು. ಆ ಬಳಿಕ ಇಬ್ಬರೂ ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿದ್ದರು. ಇತ್ತೀಚೆಗೆ ನಟಿಯ ತಾಯಿ ರಕ್ಷಿತ್ ಶೆಟ್ಟಿ ವಿರುದ್ಧ ಟೀಕಿಸಿದ ಆಡಿಯೋ ವೈಲರ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಆ ಘಟನೆಯ ಬಗ್ಗೆ ಕೆಟ್ಟ ಕಾಮೆಂಟ್‌ಗಳನ್ನು ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ಅಂತ ತಿಳಿಯುವುದಕ್ಕೆ ಮುಂದೆ ಓದಿ.

'ಕಿರಿಕ್ ಪಾರ್ಟಿ' ಸಿನಿಮಾ ಯಶಸ್ಸಿನ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಇನ್ನೇನು ಇಬ್ಬರದ್ದೂ ಮದುವೆಯೊಂದೇ ಬಾಕಿ ಎನ್ನುವಾಗಲೇ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ನಿಶ್ವಿತಾರ್ಥದ ಬಳಿಕ ಇಬ್ಬರೂ ಮದುವೆ ಆಗದೇ ಇರುವುದಕ್ಕೆ ನಿರ್ಧರಿಸಿದ್ದರು. ಹೀಗಾಗಿ ಇಬ್ಬರೂ ಬೇರೆ ಬೇರೆಯಾಗಿ ಅವರದ್ದೇ ಸಾಧನೆಯಲ್ಲಿ ತೊಡಗಿದ್ದಾರೆ.

Also Read
ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?
ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?

ಇತ್ತೀಚೆಗೆ ರಶ್ಮಿಕಾ ಅಮ್ಮನ ಆಡಿಯೋ ವೈರಲ್ ಆದ ಬೆನ್ನಲ್ಲೇ ರಕ್ಷಿತ್ ಶೆಟ್ಟಿಯ ಹಳೆ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ, "ಕೆಲವೊಂದು ಕಮೆಂಟ್ಸ್ ಕೇಳುವುದಕ್ಕೆ ತುಂಬಾನೇ ಬೇಜಾರಾಗುತ್ತೆ. ಇದು ನನ್ನ ಬಗ್ಗೆ ಮಾತ್ರ ಅಲ್ಲ, ಬೇರೆಯವರ ಬಗ್ಗೆನೂ ಅಷ್ಟೇ. ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುವುದು ಏನಂದ್ರೆ, ಹಿಂದಿನದನ್ನು ಬಿಟ್ಟು ಬಿಡಿ. ಮುಗಿದು ಹೋಗಿದ್ದೆಲ್ಲ ಮುಗಿದು ಹೋಯ್ತು. ಅದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ" ಎಂದು ರಕ್ಷಿತ್ ಶೆಟ್ಟಿ ವಿಡಿಯೋ ಮೂಲಕ ಹೇಳಿದ್ದರು.

ಹಾಗೇ ನಮಗೆ ನಾವೇ ಅಸಹ್ಯ ಪಟ್ಟುಕೊಳ್ಳುವಂತೆ ಕಾಮೆಂಟ್‌ಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ. "ಯಾವುದೇ ವ್ಯಕ್ತಿಯ ಬಗ್ಗೆ ಚರ್ಚೆ ಮಾಡುವುದು ಬೇಡ. ನಾವು ನಮ್ಮ ಬಗ್ಗೆ ಅಸಹ್ಯ ಪಟ್ಟುಕೊಳ್ಳಬಾರದು. ಆತರ ಕಾಮೆಂಟ್‌ಗಳನ್ನು ಬೇರೆಯವರ ಬಗ್ಗೆನೂ ಮಾಡಬಾರದು. ಪ್ರತಿಯೊಬ್ಬರಿಗೂ ಗೌರವ ಕೊಡೋಣ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.

ಇಂದು (ಮಾರ್ಚ್ 12) ರಶ್ಮಿಕಾ ಮಂದಣ್ಣ ಬರೆದ ಬಹಿರಂಗ ಪತ್ರದಲ್ಲಿ ರಶ್ಮಿಕಾ ಹೇಳಿದ್ದ ಮಾತನ್ನೇ ರಕ್ಷಿತ್ ಅಂದು ಹೇಳಿದ್ದರು. "ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನ ಅನ್ನೋದು ಇದೆ ಎಂದು ನಾನು ಎಲ್ಲರಲ್ಲೂ ಮನವಿ ಮಾಡಿಕೊಡುತ್ತೇನೆ. " ಎಂದು ರಕ್ಷಿತ್ ಶೆಟ್ಟಿ ಮನವಿ ಮಾಡಿಕೊಂಡಿದ್ದರು.

More from Filmibeat

English summary
After breakup here is Rakshit Shetty reaction old video is viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X