58-59ರ ಗೊಂದಲ:'ಡೆವಿಲ್' ಆದ್ಮೇಲೆ ದರ್ಶನ್‌ಗ ಸಿನಿಮಾ ಮಾಡೋದು ಜೋಗಿ ಪ್ರೇಮ್‌? ಇಲ್ಲಾ ತರುಣ್ ಸುಧೀರ್?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜಾಮೀನು ಕ್ಯಾನ್ಸಲ್ ಆಗಿದೆ. ಮತ್ತೆ ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ಕಾಲ ಕಳೆಯಬೇಕಾಗಿದೆ. ಇನ್ನೊಂದು ಕಡೆ ಅವರ 57ನೇ ಸಿನಿಮಾ 'ಡೆವಿಲ್' ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ 'ಡೆವಿಲ್' ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಡಿಸೆಂಬರ್ 12ಕ್ಕೆ ಗ್ರ್ಯಾಂಡ್ ರಿಲೀಸ್‌ಗೆ ನಿರ್ದೇಶಕ ಮಿಲನಾ ಪ್ರಕಾಶ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

'ಡೆವಿಲ್' ಸಿನಿಮಾವೇನೋ ರಿಲೀಸ್ ಆಗುತ್ತೆ. ಆದರೆ, ಮುಂದಿನ ಸಿನಿಮಾಗಳ ಕಥೆಯೇನು? ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ಸಾಲು ಸಾಲು ನಿರ್ಮಾಪಕರು ಕ್ಯೂನಲ್ಲಿ ಇದ್ದರು. ದರ್ಶನ್ 58, 59 ಹಾಗೂ 60ನೇ ಸಿನಿಮಾವರೆಗೂ ಯಾರು ಮಾಡಬೇಕು ಅನ್ನೋದು ನಿರ್ಧಾರ ಆಗಿತ್ತು. ಆದರೆ, ಈ ಸಾಲಿನಲ್ಲಿ ಜೋಗಿ ಪ್ರೇಮ್ ಸಿನಿಮಾ ನಿರ್ದೇಶನ ಮಾಡೋದು ಆರಂಭದಲ್ಲಿ ಇರಲಿಲ್ಲ. ಆದರೆ, ಗ್ಯಾಪ್‌ನಲ್ಲಿ ಜೋಗಿ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ.

After Devil Movie Who Will Direct Darshan s 58th Film Jogi Prem or Tharun Sudhir

ಕೆವಿಎನ್ ಪ್ರೊಡಕ್ಷನ್ ಜೋಗಿ ಪ್ರೇಮ್ ಹಾಗೂ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡಬೇಕಿತ್ತು. 58ನೇ ಸಿನಿಮಾ ಆಗಿರಲಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗ ಕೆಲವು ಪ್ರಾಜೆಕ್ಟ್‌ಗಳನ್ನು ಕೈಬಿಡಲಾಯ್ತು. ಅದರಲ್ಲಿ ಸೂರಪ್ಪ ಬಾಬು ನಿರ್ಮಿಸಬೇಕಿದ್ದ ಸಿನಿಮಾ ಕೂಡ ಇದೆ. ಇನ್ನು ಶೈಲಜಾ ನಾಗ್ 'ಸಿಂಧೂರ ಲಕ್ಷ್ಮಣ' ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ತೆಲುಗು ನಿರ್ಮಾಪಕರೊಬ್ಬರ ಸಿನಿಮಾ ಮುಗಿದ ಮೇಲೆ ಜೋಗಿ ಪ್ರೇಮ್ ಸಿನಿಮಾ ಅನ್ನುವಂತೆ ಸುದ್ದಿ ಹರಿದಾಡಿತ್ತು. ಆದ್ರೀಗ ಇಷ್ಟೆಲ್ಲ ಬೆಳವಣಿಗೆ ಆದ್ಮೇಲೆ ದರ್ಶನ್ 58ನೇ ಸಿನಿಮಾವನ್ನು ಮಾಡೋದು ಯಾರು? ಅನ್ನೋ ಕುತೂಹಲಕ್ಕೆ ತರುಣ್ ಸುಧೀರ್ ತೆರೆ ಎಳೆದಿದ್ದಾರೆ.

ದರ್ಶನ್- ಜೋಗಿ ಪ್ರೇಮ್ ಸಿನಿಮಾದಿಂದ ಕೆವಿಎನ್ ಪ್ರೊಡಕ್ಷನ್ ಹಿಂದೆ ಸರಿದ ಮೇಲೆ ರಕ್ಷಿತಾ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ದರ್ಶನ್ ಜಾಮೀನಿನ ಮೇಲೆ ಹೊರ ಬಂದ್ಮೇಲೆ 'ಡೆವಿಲ್' ಬಳಿಕ ರಕ್ಷಿತಾ ಸಿನಿಮಾವನ್ನೇ ಕೈಗೆತ್ತಿಕೊಳ್ಳುತ್ತಾರೆಂಬ ಸುದ್ದಿಯಿದೆ. ಇನ್ನೊಂದು ಕಡೆ ತರುಣ್ ಸುಧೀರ್ ನಿರ್ದೇಶನದಲ್ಲಿ ಶೈಲಜಾ ನಾಗ್ ನಿರ್ಮಾಣದ ಸಿನಿಮಾ ಟೇಕ್ ಆಫ್ ಆಗುತ್ತೆ ಅನ್ನೋ ಮಾತು ಇತ್ತು. ಆದ್ರೀಗ ತರುಣ್ ಸುಧೀರ್ ತಮ್ಮ ಪ್ರಾಜೆಕ್ಟ್ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

"ನಾವು ಅನೌನ್ಸ್ ಮಾಡುವಾಗಲೇ ಡಿ 59 ಅಂತಲೇ ಮಾಡಿದ್ವಿ. ಹರಿಕೃಷ್ಣ ಸರ್, ಬಿ.ಸುರೇಶ್ ಸರ್ ಹಾಗೂ ಶೈಲಜಾ ಮೇಡಂ ಪ್ರೊಡಕ್ಷನ್ ಹೌಸ್‌ನಿಂದ ಅನೌನ್ಸ್‌ಮೆಂಟ ಆಗಿತ್ತು. ದರ್ಶನ್ ಸರ್ ಮಾಡುತ್ತಿರೋ 'ಡೆವಿಲ್' 57ನೇ ಸಿನಿಮಾ. ಆ ಸಿನಿಮಾ ಬಳಿಕ ಇನ್ನೊಂದು ಸಿನಿಮಾ ಮಾಡಿ, ನಮ್ಮ ಸಿನಿಮಾಗೆ ಬರುತ್ತೇನೆ ಎಂದು ಹೇಳಿದ್ದರು. ಹೀಗಾಗಿ 58ನೇ ಸಿನಿಮಾ ಮುಗಿದ ಬಳಿಕ 59ನೇ ಸಿನಿಮಾ ಮಾಡುತ್ತೇನೆ. ಸಿಂಧೂರ ಲಕ್ಷ್ಮಣ ಸಿನಿಮಾದ ಸ್ಕ್ರೀಪ್ಟ್ ರೆಡಿ ಮಾಡಿಟ್ಟುಕೊಂಡಿದ್ದೇನೆ. ಯಾವಾಗ ದರ್ಶನ್ ಸರ್ ಓಕೆ ಅಂತಾರೆ, ಪ್ರೊಡಕ್ಷನ್ ಹೌಸ್ ಓಕೆ ಅನ್ನುತ್ತೆ. ಆಗ ಸಿನಿಮಾ ಮಾಡುತ್ತೇನೆ" ಎಂದು ತರುಣ್ ಸುಧೀರ್ ಸ್ಪಷ್ಟಪಡಿಸಿದ್ದಾರೆ.

After Devil Movie Who Will Direct Darshan s 58th Film Jogi Prem or Tharun Sudhir

ತಮ್ಮ ಹಾಗೂ ದರ್ಶನ್ ಪ್ರಾಜೆಕ್ಟ್ ಬಗ್ಗೆ ತರುಣ್ ಸುಧೀರ್ ಕ್ಲಾರಿಟಿ ಕೊಟ್ಟಿದ್ದಾರೆ. ಇದರ ಜೊತೆ ದರ್ಶನ್ ನ್ಯಾಯಾಧೀಶರಿಗೆ ವಿಷಾ ಕೊಡಿ ಅಂತ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾನು ದರ್ಶನ್ ಸರ್‌ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರು ತುಂಬಾನೇ ಸ್ಟ್ರಾಂಗ್ ವ್ಯಕ್ತಿ. ಅವರಲ್ಲಿ ಯಾವುದೇ ನೋವಿದ್ದರೂ ತೋರಿಸಿಕೊಳ್ಳುವುದಿಲ್ಲ. ಹಾಗೇನೋ ಆಗಿದೆ ಅಂದರೆ, ಅಲ್ಲಿ ಅವರು ಇನ್ಯಾವ ಮಟ್ಟಿಗೆ ನೊಂದಿರಬೇಕು. ನಾನು ಹೇಳುವುದು ಏನಂದರೆ, ಅವರು ಇನ್ನೂ ಆರೋಪಿ ಅಷ್ಟೇ. ಅಪರಾಧಿ ಅಲ್ಲ. ನಾನು ಚೌಕ ಎನ್ನುವ ಒಂದು ಸಿನಿಮಾದಲ್ಲಿ ಸೆಕೆಂಡ್ ಹಾಫ್ ಪೂರ್ತಿ ಜೈಲಿನಲ್ಲಿ ತೆಗೆದಿದ್ದೀನಿ. ಅಲ್ಲಿ ಹೇಗಿರುತ್ತೇನೆ ಅನ್ನೋದನ್ನು ನಾನು ನೋಡಿದ್ದೇನೆ. ಅವರಿಗೆ ಅಂತಾನೇ ಒಂದು ರೈಟ್ಸ್ ಇರುತ್ತೆ. ಅದನ್ನು ಕೊಡಲೇಬೇಕು." ಎಂದು ತರುಣ್ ಸುಧೀರ್ ಹೇಳಿದ್ದಾರೆ.

ಇನ್ನು ದರ್ಶನ್ ಜೈಲಿನಿಂದ ಹೊರ ಬಂದು 58ನೇ ಸಿನಿಮಾ ಮುಗಿಸಿ, 59ನೇ ಸಿನಿಮಾ ಟೇಕಾಫ್ ಮಾಡುವ ಹೊತ್ತಿಗೆ ಮೂರು ವರ್ಷ ಕೈ ಬಿಟ್ಟು ಹೋಗಿರುತ್ತೆ. ಮುಂದೇ ಯಾವ ಸಿನಿಮಾ ಅನೌನ್ಸ್ ಮಾಡುತ್ತಾರೆ? ಗೊಂದಲವಿರುವಾಗಲೇ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹಬ್ಬಿತ್ತು. ಅದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. "ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಯುವ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ವಿ ಎನ್ನುವ ಕಾರಣಕ್ಕೆ ಆ ತರ ಸುದ್ದಿ ಹಬ್ಬಿರಬಹುದು. ನಾನು ಏಳುಮಲೆ ರಿಲೀಸ್‌ ಬ್ಯುಸಿನಲ್ಲೇ ಇದ್ದೆ. ಅಂತಹ ಯಾವುದೇ ಒಂದು ಮಾತುಕತೆನೇ ಆಗಿಲ್ಲ. ಯುವ ಅವರನ್ನು ಭೇಟಿ ಮಾಡಿದ್ದೇ ಶೋಗೆ ಬಂದಿದ್ದಾಗ. ಅದರ ಹಿಂದೆ ನಾನು ಮದುವೆ ಆಮಂತ್ರಣ ಪತ್ರಿಕೆ ಕೊಡುವುದಕ್ಕೆ ಹೋಗಿದ್ದಾಗ ಭೇಟಿ ಮಾಡಿದ್ದೆ ಅಷ್ಟೇ." ಎಂದ ತರುಣ್ ಸುಧೀರ್ ಹೇಳಿದ್ದಾರೆ.

More from Filmibeat

English summary
After Devil who will direct Darshan’s 58th film. Will it be Jogi Prem or Tharun Sudhir? Here’s the latest news.
Read more about: darshan tharun sudhir jogi prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X